ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಹಿಂದಿನ ಪದನಾಮ - 'ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ'

1. ಮಹಿಳಾ ಸಬಲೀಕರಣ ಕೋಶ


ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶವನ್ನು 2013 ರಲ್ಲಿ ಅಂದಿನ ಮಾನ್ಯ ಕುಲಪತಿಗಳಾದ ಪ್ರೊ. ಬಿ. ಆರ್. ಅನಂತನ್ ಅವರ ನಾಯಕತ್ವದಲ್ಲಿ ಸ್ಥಾಪಿಸಲಾಯಿತು. ಅಂದಿನಿಂದಲೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಮಹಿಳಾ ಉದ್ಯೋಗಿಗಳಲ್ಲಿ ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಕೋಶವು ಬದ್ಧವಾಗಿದೆ.

ಮಹಿಳೆಯರ ಜ್ಞಾನ, ನಾಯಕತ್ವ ಕೌಶಲ್ಯಗಳು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಅರಿವನ್ನು ಹೆಚ್ಚಿಸಲು ಕ್ರಿಯಾತ್ಮಕ ವೇದಿಕೆಯಾಗಿ ಕೋಶವು ಕಾರ್ಯನಿರ್ವಹಿಸುತ್ತದೆ. ಘನತೆ, ಸಮಾನತೆ ಮತ್ತು ಪರಸ್ಪರ ಗೌರವದ ವಾತಾವರಣವನ್ನು ಬೆಳೆಸುವ ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಮುದಾಯ-ಆಧಾರಿತ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಇದು ಪ್ರೋತ್ಸಾಹಿಸುತ್ತದೆ. ಅರಿವು ಮೂಡಿಸುವ ಕಾರ್ಯಕ್ರಮಗಳು, ಸಾಮರ್ಥ್ಯವರ್ಧನೆ ಉಪಕ್ರಮಗಳು ಮತ್ತು ಬೆಂಬಲ ಸೇವೆಗಳ ಮೂಲಕ, ಮಹಿಳೆಯರನ್ನು ಆತ್ಮವಿಶ್ವಾಸಿ, ಜವಾಬ್ದಾರಿಯುತ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ಪ್ರಜೆಗಳನ್ನಾಗಿ ಸಬಲೀಕರಣಗೊಳಿಸಲು ಈ ಕೋಶ ಶ್ರಮಿಸುತ್ತದೆ. ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಭರವಸೆಯ ಧ್ವನಿಯಾಗಿ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಜ್ಞಾನದ ದಿಗಂತವನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ.

2. ದೃಷ್ಟಿಕೋನ ಮತ್ತು ಧ್ಯೇಯ


ದೃಷ್ಟಿಕೋನ (Vision)

  • ಜಾಗತೀಕರಣ ಮತ್ತು ತಾಂತ್ರಿಕ ಯುಗದಲ್ಲಿ ಮೂಢನಂಬಿಕೆಯ ಮನಸ್ಥಿತಿಯಿಂದ ಹೊರಬಂದು ಪ್ರಗತಿಗೆ ಒಗ್ಗಿಕೊಳ್ಳುವ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಅವಕಾಶ ಮಾಡಿಕೊಳುವುದು.
  • ಸ್ವಾಭಿಮಾನ ಮತ್ತು ಸ್ವಯಂ-ಸಮೃದ್ಧಿಯನ್ನು ಅಭಿವೃದ್ಧಿಪಡಿಸುವುದು. ಅವಲಂಬನೆ, ಲಿಂಗ ತಾರತಮ್ಯ ಮತ್ತು ಅಸಮಾನತೆಯಿಂದ ಹೊರಬಂದು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಂಡು ನಿರ್ದಿಷ್ಟ ಗುರಿಯನ್ನು ತಲುಪಲು ಅವಕಾಶ ಮಾಡಿಕೊಡುವುದು.
  • ಸಾಮಾಜಿಕ ಅಸಮಾನತೆಗಳಿಂದ ಪ್ರಭಾವಿತರಾಗದೆ ಪ್ರಗತಿಯ ಹೊಸ ವ್ಯಾಖ್ಯಾನವನ್ನು ಬರೆಯುವುದು, ಮತ್ತು ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬಲಪಡಿಸುವುದು.

ಧ್ಯೇಯ (Mission)

  • ಶಿಕ್ಷಣ, ಸ್ವಾವಲಂಬನೆ ಮತ್ತು ನಾಯಕತ್ವದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು.
  • ಸಮಾಜಕ್ಕೆ ಸೃಜನಶೀಲ, ಆತ್ಮವಿಶ್ವಾಸಿ, ಸ್ವತಂತ್ರ ಮತ್ತು ಸಕ್ರಿಯ ಕೊಡುಗೆದಾರರಾಗಲು ಮಹಿಳೆಯರನ್ನು ಪ್ರೋತ್ಸಾಹಿಸುವುದು.
  • ಅವಲಂಬನೆ, ಲಿಂಗ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸ್ವಯಂ-ಅರಿವು, ಸ್ವಾಭಿಮಾನ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವುದು.
  • ಮಹಿಳೆಯರ ಶೈಕ್ಷಣಿಕ ಮತ್ತು ವೃತ್ತಿಪರ ಸಾಮರ್ಥ್ಯಗಳನ್ನು ಬಲಪಡಿಸುವುದು, ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಲು ಅವರನ್ನು ಶಕ್ತಗೊಳಿಸುವುದು.
  • ಮಹಿಳೆಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸುವ, ತಮ್ಮ ಜವಾಬ್ದಾರಿಗಳನ್ನು ಎತ್ತಿಹಿಡಿಯುವ ಹಾಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಜೀವನ ನಡೆಸುವಂತಹ ವಾತಾವರಣವನ್ನು ನಿರ್ಮಿಸುವುದು.

3. ಮಾರ್ಗಸೂಚಿಗಳು ಮತ್ತು ಅವಕಾಶಗಳು


  • ಶೈಕ್ಷಣಿಕ, ವೃತ್ತಿಪರ ಮತ್ತು ಸಾರ್ವಜನಿಕ ಜೀವನದಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಅತ್ಯುತ್ತಮ ಸಾಧನೆ ಮಾಡಲು ಮಹಿಳೆಯರಿಗೆ ತರಬೇತಿ, ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ನೀಡುವುದು.
  • ಲಿಂಗ ಅಸಮಾನತೆ, ಹೆಣ್ಣು ಭ್ರೂಣಹತ್ಯೆ, ಅಪೌಷ್ಟಿಕತೆ, ಅನಕ್ಷರತೆ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ, ಆಸಿಡ್ ದಾಳಿ, ಮಾನವ ಕಳ್ಳಸಾಗಣೆ ಮತ್ತು ಹಾನಿಕಾರಕ ಸಾಮಾಜಿಕ ಪದ್ಧತಿಗಳಂತಹ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು.
  • ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸುರಕ್ಷಿತ, ಎಲ್ಲರನ್ನೂ ಒಳಗೊಳ್ಳುವ (inclusive) ಕಿರುಕುಳ-ಮುಕ್ತ ವಾತಾವರಣವನ್ನು ನಿರ್ಮಿಸುವುದು.
  • ನಾಯಕತ್ವ, ನಿರ್ಧಾರ-ತೆಗೆದುಕೊಳ್ಳುವಿಕೆ, ಉದ್ಯಮಶೀಲತೆ ಮತ್ತು ಸಮುದಾಯ ಸೇವೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.
  • ವಿಚಾರಸಂಕಿರಣಗಳು, ಕಾರ್ಯಾಗಾರಗಳು ಮತ್ತು ಪ್ರಭಾವಶಾಲಿ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ ಅಭಿವೃದ್ಧಿ, ಸಂಪರ್ಕ-ಜಾಲ (networking) ಮತ್ತು ಸಾಮರ್ಥ್ಯ ವೃದ್ಧಿಗೆ ಅವಕಾಶಗಳನ್ನು ಒದಗಿಸುವುದು.

4. ಪಾತ್ರಗಳು ಮತ್ತು ಜವಾಬ್ದಾರಿಗಳು


  • ಆರೋಗ್ಯ, ಕಾನೂನು ಹಕ್ಕುಗಳು, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು, ಕಾರ್ಯಾಗಾರಗಳು, ವಿಚಾರಸಂಕಿರಣಗಳು, ಸಮ್ಮೇಳನಗಳು, ರಸಪ್ರಶ್ನೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುವುದು.
  • ಸ್ವಯಂ ರಕ್ಷಣಾ ತರಬೇತಿ, ಯೋಗ ತರಗತಿಗಳು, ಆರೋಗ್ಯ ಶಿಬಿರಗಳು, ಆಪ್ತಸಮಾಲೋಚನಾ ಸೇವೆಗಳು ಮತ್ತು ಸ್ವಾಸ್ಥ್ಯ ಕಾರ್ಯಕ್ರಮಗಳನ್ನು ನಡೆಸುವುದು.
  • ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸುರಕ್ಷಿತ ಹಾಗೂ ಗೌರವಾನ್ವಿತ ಕ್ಯಾಂಪಸ್ ವಾತಾವರಣವನ್ನು ಉತ್ತೇಜಿಸಲು ಆಂತರಿಕ ದೂರು ಸಮಿತಿಯೊಂದಿಗೆ (ICC) ಸಮನ್ವಯದಿಂದ ಕೆಲಸ ಮಾಡುವುದು.
  • ಲಿಂಗ ಸಂವೇದನೆಯನ್ನು ಉತ್ತೇಜಿಸುವುದು ಮತ್ತು ಕೆಲಸದ ಸ್ಥಳ ಹಾಗೂ ಕ್ಯಾಂಪಸ್‌ನಲ್ಲಿ ತಾರತಮ್ಯ, ಕಿರುಕುಳ ಮತ್ತು ಶೋಷಣೆಯನ್ನು ತಡೆಯಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು.
  • ವ್ಯಕ್ತಿತ್ವ ವಿಕಸನ, ನಾಯಕತ್ವ ಅಭಿವೃದ್ಧಿ, ಉದ್ಯೋಗಾರ್ಹತೆ ಮತ್ತು ಕೌಶಲ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಅಂತರರಾಷ್ಟ್ರೀಯ ಮಹಿಳಾ ದಿನ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಇತರ ಪ್ರಮುಖ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸುವುದು.
  • ವಿಶ್ವವಿದ್ಯಾಲಯದ ಸಮುದಾಯದಲ್ಲಿರುವ ಎಲ್ಲಾ ಮಹಿಳೆಯರಿಗೆ ಸಾಂವಿಧಾನಿಕ ಮೌಲ್ಯಗಳು, ಲಿಂಗ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಉತ್ತೇಜಿಸುವುದು.

5. ಸಮಿತಿಯ ಸದಸ್ಯರು


ಪ್ರೊ. ಚಂದ್ರಿಕಾ ಕೆ.ಬಿ.
ಹೆಸರು: ಪ್ರೊ. ಚಂದ್ರಿಕಾ ಕೆ.ಬಿ., ಹಿರಿಯ ಪ್ರಾಧ್ಯಾಪಕರು, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕಿರಾಚವಿ, ಬೆಳಗಾವಿ
ಹುದ್ದೆ: ನಿರ್ದೇಶಕರು
ಡಾ. ಅಶ್ವಿನಿ ಜಾಮುನಿ
ಹೆಸರು: ಡಾ. ಅಶ್ವಿನಿ ಜಾಮುನಿ, ಸಹ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ, ಕಿರಾಚವಿ, ಬೆಳಗಾವಿ
ಹುದ್ದೆ: ಸದಸ್ಯ ಕಾರ್ಯದರ್ಶಿಗಳು
ಕ್ರ. ಸಂ. ಸಿಬ್ಬಂದಿಯ ಹೆಸರು ಪದನಾಮ
01 ಪ್ರೊ. ಚಂದ್ರಿಕಾ ಕೆ.ಬಿ. ಹಿರಿಯ ಪ್ರಾಧ್ಯಾಪಕರು, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕಿರಾಚವಿ, ಬೆಳಗಾವಿ ನಿರ್ದೇಶಕರು
02 ಡಾ. ನಂದಿನಿ ಗಿರೀಶ ದೇವರಮನಿ, ಸಹ ಪ್ರಾಧ್ಯಾಪಕರು, ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯಿಕ ವಿಧಿ ವಿಜ್ಞಾನ ವಿಭಾಗ, ಕಿರಾಚವಿ, ಬೆಳಗಾವಿ ಸದಸ್ಯರು
03 ಡಾ. ಯಾಸ್ಮಿನ್‌ ಬೇಗಮ್‌ ನದಾಫ, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ, ಕಿರಾಚವಿ, ಬೆಳಗಾವಿ ಸದಸ್ಯರು
04 ಡಾ. ಮಲ್ಲಮ್ಮ ವ್ಹಿ. ರೆಡ್ಡಿ, ಸಹ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ, ಕಿರಾಚವಿ, ಬೆಳಗಾವಿ ಸದಸ್ಯರು
05 ಡಾ. ಸುಮನ ಮುದ್ದಾಪೂರ, ಕಾಲೇಜು ಗ್ರಂಥಪಾಲಕರು, ಕಿರಾಚವಿ, ಬೆಳಗಾವಿ ಸದಸ್ಯರು
06 ಶ್ರೀಮತಿ. ರೇಣುಕಾ ಬಾಲಗಾಂವಿ, ಸಹಾಯಕ ಕುಲಸಚಿವರು, ಕಿರಾಚವಿ, ಬೆಳಗಾವಿ ಸದಸ್ಯರು
07 ಡಾ. ಶಿವಲೀಲಾ ಹೀರೆಮಠ, ಪ್ರಥಮ ದರ್ಜೆ ಸಹಾಯಕರು, ಕಿರಾಚವಿ, ಬೆಳಗಾವಿ ಸದಸ್ಯರು
08 ಶ್ರೀಮತಿ ದೀಪಾ, ದ್ವಿತೀಯ ದರ್ಜೆ ಸಹಾಯಕರು, ಕಿರಾಚವಿ, ಬೆಳಗಾವಿ ಸದಸ್ಯರು
09 ಶ್ರೀಮತಿ. ಪೂಜಾ ಖಾತೆದಾರ, ಗಣಕಯಂತ್ರ ನಿರ್ವಾಹಕರು, ಕಿರಾಚವಿ, ಬೆಳಗಾವಿ ಸದಸ್ಯರು
10 ಶ್ರೀಮತಿ ಪೋತದಾರ ವಾಣಿ, ಗಣಕಯಂತ್ರ ನಿರ್ವಾಹಕರು, ಕಿರಾಚವಿ, ಬೆಳಗಾವಿ ಸದಸ್ಯರು
11 ಶ್ರೀಮತಿ. ಫರಜಾನಾ ಸಿಪಾಯಿ, ಗಣಕಯಂತ್ರ ನಿರ್ವಾಹಕರು, ಕಿರಾಚವಿ, ಬೆಳಗಾವಿ ಸದಸ್ಯರು
12 ಶ್ರೀಮತಿ. ಬೋರವ್ವಾ ಹೊಸಮನಿ, ‘ಡಿ’ ದರ್ಜೆ ನೌಕರರು, ಕಿರಾಚವಿ, ಬೆಳಗಾವಿ ಸದಸ್ಯರು
13 ಶ್ರೀಮತಿ. ದ್ಯಾಮವ್ವ ಬ. ಚೌಡನ್ನವರ, ‘ಡಿ’ ದರ್ಜೆ ನೌಕರರು, ಕಿರಾಚವಿ, ಬೆಳಗಾವಿ ಸದಸ್ಯರು
14 ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರತಿನಿಧಿ, ಕಿರಾಚವಿ, ಬೆಳಗಾವಿ ಸದಸ್ಯರು
15 ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರತಿನಿಧಿ, ಕಿರಾಚವಿ, ಬೆಳಗಾವಿ ಸದಸ್ಯರು
16 ಡಾ. ಅಶ್ವಿನಿ ಜಾಮುನಿ, ಸಹ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ, ಕಿರಾಚವಿ, ಬೆಳಗಾವಿ ಸದಸ್ಯ ಕಾರ್ಯದರ್ಶಿಗಳು

6. ಮಹಿಳಾ ಸಬಲೀಕರಣ ಕೋಶದ ಸಿಬ್ಬಂದಿಯ ವಿವರ


ಕ್ರ.ಸಂ. ಸಿಬ್ಬಂದಿಯ ಹೆಸರು ಹುದ್ದೆ
01 ಶ್ರೀಮತಿ. ಲಕ್ಷ್ಮಿ ಬ. ಪ್ಯಾಟಿ ಪ್ರಥಮ ದರ್ಜೆ ಸಹಾಯಕರು