ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಮಾಹಿತಿ ಹಕ್ಕು ವಿಭಾಗ ಮತ್ತು ಕಾನೂನು ಘಟಕ


ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2010 ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಲಾಗಿದ್ದು. ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡಿದೆ. ಸನ್‌ 2014 ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾನೂನು ಘಟಕ ಮತ್ತು ಮಾಹಿತಿ ಹಕ್ಕು ವಿಭಾಗವನ್ನು ರಚನೆಗೊಂಡು ಕಾರ್ಯನಿರ್ವಹಿಸುತ್ತಿದೆ.

ಮಾಹಿತಿ ಹಕ್ಕು ವಿಭಾಗದ ಪಾತ್ರ ಮತ್ತು ಜವಾಬ್ದಾರಿಗಳು


  • ಅರ್ಜಿದಾರರ ಮಾ.ಹ.ಅ 2005 ಕಲಂ 6(1) ಪ್ರಕಾರ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಮಾಹಿತಿ ಹಕ್ಕು ವಿಭಾಗವು ಸ್ವೀಕರಿಸಿ, ಸದರಿ ಕೋರಿಕೆ ಅರ್ಜಿಯನ್ನು ಮಾ.ಹ.ಅ 2005 ಕಲಂ 7(1) ರ ಪ್ರಕಾರ ವಿಲೇ ಮಾಡಲು ಸಂಬಂಧಿಸಿದ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ರವಾನಿಸಲಾಗುವುದು.
  • ಅರ್ಜಿದಾರರು ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 19 (1) ರಲ್ಲಿ ಸಲ್ಲಿಸುವ ಮೇಲ್ಮನವಿಗಳ ಕುರಿತಂತೆ ಕ್ರಮ ವಹಿಸುವುದು.
  • ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1)ಎ, ಮತ್ತು 4 (1) ಬಿ ರಂತೆ, ವಿಶ್ವವಿದ್ಯಾಲಯದ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳ ಮಾಹಿತಿಯನ್ನು ಕಾಲಕಾಲಕ್ಕೆ ಸಿದ್ದಪಡಿಸಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸುವುದು.
  • ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 5(1)ರ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಮತ್ತು 5 (2) ಪ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಪದನಾಮೀಕರಿಸಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸುವುದು.
  • ಮಾಹಿತಿ ಹಕ್ಕು ಅರ್ಜಿಗಳ ದಾಖಲೆ ವಹಿಯನ್ನು ನಿರ್ವಹಿಸುವುದು. ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಮಾಹಿತಿ ಪಡೆದುಕೊಳ್ಳಲು ಸೂಕ್ತ ನೆರವು ನೀಡುವುದು.

ಸಿಬ್ಬಂದಿ


ಅಧಿಕಾರಿಗಳ/ಸಿಬ್ಬಂದಿಯ ಹೆಸರು ವಿದ್ಯಾರ್ಹತೆ ಹುದ್ದೆ ಕಛೇರಿ ಇ-ಮೇಲ್ ದೂರವಾಣಿ ಸಂಖ್ಯೆ
ಡಾ.ಡಿ.ಕೆ ಕಾಂಬಳೆ ಎಮ.ಎ, ಬಿ.ಇಡಿ, ಪಿಹೆಚ್.ಡಿ. ನೋಡಲ್‌ ಅಧಿಕಾರಿಗಳು rti@rcub.ac.in 0831-2565234
- - ಕಾನೂನು ಅಧಿಕಾರಿಗಳು rti@rcub.ac.in 0831-2565234
ಶ್ರೀ. ಸಂತೋಷ ಬಿ. ಎಮ್.ಎಲ್‌.ಐ.ಎಸ್.ಸಿ., ಪಿ.ಜಿ.ಡಿ.ಸಿ.ಎ. ಸಹಾಯಕ ಕುಲಸಚಿವರು rti@rcub.ac.in 0831-2565234
ಶ್ರೀ.ಮಾದನಭಾವಿ ಈರಣ್ಣ ಬಿ.ಎ., ಬಿ.ಎಲ್.ಐ.ಎಸ್.ಸಿ., ಎಮ್.ಎ. ಪ್ರಥಮ ದರ್ಜೆ ಸಹಾಯಕರು rti@rcub.ac.in 0831-2565234

ಸಂಪರ್ಕಿಸಿ


ಕಾನೂನು ಘಟಕ

ಕಾನೂನು ಸಲಹೆಗಾರರು/ ಅಧಿಕಾರಿಗಳು,
ಮಾಹಿತಿ ಹಕ್ಕು ವಿಭಾಗ ಮತ್ತು ಕಾನೂನು ಘಟಕ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04,
ಬೆಳಗಾವಿ-591156. ಕರ್ನಾಟಕ.
ದೂರವಾಣಿ ಸಂಖ್ಯೆ: 0831-2565234
ಇ-ಮೇಲ್: rti@rcub.ac.in

ಮಾಹಿತಿ ಹಕ್ಕು ವಿಭಾಗ

ನೋಡಲ್‌ ಅಧಿಕಾರಿಗಳು,
ಮಾಹಿತಿ ಹಕ್ಕು ವಿಭಾಗ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04,
ಬೆಳಗಾವಿ-591156. ಕರ್ನಾಟಕ.
ದೂರವಾಣಿ ಸಂಖ್ಯೆ: 0831-2565234
ಇ-ಮೇಲ್: rti@rcub.ac.in