ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಪರೀಕ್ಷಾ ವಿಭಾಗ – ಸಂಕ್ಷಿಪ್ತ ಪರಿಚಯ


ಪರೀಕ್ಷಾ ವಿಭಾಗವು ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಗವಾಗಿದ್ದು, ವಿದ್ಯಾರ್ಥಿಗಳ ಮೌಲ್ಯಮಾಪನ, ಪರೀಕ್ಷೆಗಳ ನಿರ್ವಹಣೆ ಮತ್ತು ಫಲಿತಾಂಶಗಳ ಘೋಷಣೆಯ ಕಾರ್ಯನಿರ್ವಹಿಸುತ್ತದೆ. ಈ ವಿಭಾಗವು ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕತೆ, ಸಮಯಪಾಲನೆ ಮತ್ತು ನಿಯಮಾನುಸಾರವಾಗಿ ನಡೆಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುತ್ತದೆ.

ಪರೀಕ್ಷಾ ವಿಭಾಗದ ಪ್ರಮುಖ ಕಾರ್ಯಗಳು

  • ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಪರೀಕ್ಷಾ ಕಾರ್ಯಗಳ ವೇಳಾಪಟ್ಟಿ ರೂಪಿಸುವುದು.
  • ರೆಗ್ಯುಲರ್‌ ಮತ್ತು ರಿಪೀಟರ್ ಸೆಮಿಸ್ಟರ್‌ಗಳ ಪರೀಕ್ಷೆಗಳ ಆಯೋಜನೆ.
  • ಪ್ರಶ್ನೆಪತ್ರಿಕೆಗಳ ತಯಾರಿ, ಮುದ್ರಣ ಮತ್ತು ಭದ್ರತೆಯಲ್ಲಿ ವಿತರಣೆಯ ವ್ಯವಸ್ಥೆ.
  • ಪರೀಕ್ಷಾ ಕೇಂದ್ರಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ.
  • ಉತ್ತರಪತ್ರಿಕೆಗಳ ಮೌಲ್ಯಮಾಪನ ಮತ್ತು ಫಲಿತಾಂಶಗಳ ಸಂಸ್ಕರಣೆ/ ಫಲಿತಾಂಶಗಳ ಪ್ರಕಟಣೆ ಮತ್ತು ಅಂಕಪಟ್ಟಿ/ಪ್ರಮಾಣಪತ್ರಗಳ ವಿತರಣೆ.
  • ಮರುಮೌಲ್ಯಮಾಪನ, ಮರುಎಣಿಕೆ ಮತ್ತು ಸವಾಲು(challenge) ಮೌಲ್ಯಮಾಪನ ಪ್ರಕ್ರಿಯೆಗಳ ನಿರ್ವಹಣೆ.
  • ಪರೀಕ್ಷಾ ಸಂಬಂಧಿತ ದಾಖಲೆಗಳು ಮತ್ತು ಡೇಟಾ ಸಂರಕ್ಷಣೆ.
  • ವಿಶ್ವವಿದ್ಯಾಲಯದ ನಿಯಮಾವಳಿಗಳ ಅನುಸರಣೆಯೊಂದಿಗೆ ಪರೀಕ್ಷಾ ಕಾರ್ಯಗಳ ಅನುಷ್ಠಾನ.
  • ವಾರ್ಷಿಕ ಘಟಿಕೋತ್ಸವಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ ಮತ್ತು ಸಂಸ್ಕರಣೆ.

ಉಪ ಕುಲಸಚಿವರ ಹಾಗೂ ಸಹಾಯಕ ಕುಲಸಚಿವರ ಮಾಹಿತಿ


ಕ್ರಮ ಸಂಖ್ಯೆ ಹೆಸರು ಹುದ್ದೆ
1 ಶ್ರೀಮತಿ. ಗೌರಮ್ಮ ಪಾಟೀಲ ಉಪ ಕುಲಸಚಿವರು
2 ಶ್ರೀ. ಎಮ್.ಬಿ. ಮರತೂರ ಸಹಾಯಕ ಕುಲಸಚಿವರು
3 ಶ್ರೀ. ಸಂಜಯ. ದೆಗಿನಾಳ ಸಹಾಯಕ ಕುಲಸಚಿವರು
4 ಶ್ರೀ. ವಿ.ವಿ. ಹಿರೇಮಠ ಸಹಾಯಕ ಕುಲಸಚಿವರು

ಪರೀಕ್ಷಾ ಮತ್ತು ಘಟಿಕೋತ್ಸವ ಶುಲ್ಕಗಳು


ಪ್ರಸ್ತುತ ವರ್ಷದ ಪರೀಕ್ಷಾ ಶುಲ್ಕಗಳು ಮತ್ತು ಘಟಿಕೋತ್ಸವ ಶುಲ್ಕಗಳು – ಲಗತ್ತಿಸಲಾಗಿದೆ.

ಶುಲ್ಕ ಪಟ್ಟಿಯನ್ನು ವೀಕ್ಷಿಸಿ (PDF)

ಒದಗಿಸಲಾಗುವ ಸೇವೆಗಳು


  • ಅಂಕಪಟ್ಟಿಗಳು/ಉತ್ತೀರ್ಣ ಪ್ರಮಾಣ ಪತ್ರಗಳು/ಪದವಿ ಪ್ರಮಾಣ ಪತ್ರಗಳ ವಿತರಣೆ. (ಯು.ಜಿ/ಪಿ.ಜಿ/ಪಿಹೆಚ್.ಡಿ.)
  • ಅಂಕಪಟ್ಟಿಗಳು/ಉತ್ತೀರ್ಣ ಪ್ರಮಾಣ ಪತ್ರಗಳು/ಪದವಿ ಪ್ರಮಾಣ ಪತ್ರಗಳ ಹೆಸರು ತಿದ್ದುಪಡಿ. (ಯು.ಜಿ/ಪಿ.ಜಿ/ಪಿಹೆಚ್.ಡಿ.)
  • ಅಂಕಪಟ್ಟಿಗಳು/ಉತ್ತೀರ್ಣ ಪ್ರಮಾಣ ಪತ್ರಗಳು/ಪದವಿ ಪ್ರಮಾಣ ಪತ್ರಗಳ ನೈಜತೆ ಪ್ರಮಾಣ ಪತ್ರಗಳ ವಿತರಣೆ. (ಯು.ಜಿ/ಪಿ.ಜಿ/ಪಿಹೆಚ್.ಡಿ.).
  • ಅಂಕಪಟ್ಟಿಗಳು/ಉತ್ತೀರ್ಣ ಪ್ರಮಾಣ ಪತ್ರಗಳು/ಪದವಿ ಪ್ರಮಾಣ ಪತ್ರಗಳ ದೃಢೀಕರಣ (ಯು.ಜಿ/ಪಿ.ಜಿ/ಪಿಹೆಚ್.ಡಿ.).
  • ವಲಸೆ ಪ್ರಮಾಣ ಪತ್ರಗಳ ವಿತರಣೆ.
  • ಪ್ರತಿಲಿಪಿ (Transcript) ವಿತರಣೆ.
  • ಮಹಾಪ್ರಬಂಧ ಕೃತಿಚೌರ್ಯದ ಪರಿಶೀಲನೆ (ಪಿಹೆಚ್.ಡಿ.).
  • ಮಂಡಳಿ ಮೌಲ್ಯಮಾಪನಕ್ಕೆ ಅರ್ಜಿ.

ಅರ್ಜಿ ನಮೂನೆಗಳು


ಅರ್ಜಿ ನಮೂನೆ ವಿವರ ಡೌನ್‌ಲೋಡ್
ವಲಸೆ ಅರ್ಜಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಬೇರೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಬಯಸುವ ವಿದ್ಯಾರ್ಥಿಗಳಿಗೆ ಈ ಅರ್ಜಿ ನಮೂನೆ. ಡೌನ್‌ಲೋಡ್
ಬೋರ್ಡ್ ಮೌಲ್ಯಮಾಪನ ಅರ್ಜಿ ನಮೂನೆ ವಿದ್ಯಾರ್ಥಿಯು ಈಗಾಗಲೇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೆ ಮತ್ತು ಬೋರ್ಡ್ ಮೌಲ್ಯಮಾಪನದ ಅಂಕಗಳು ಅಂತಿಮವೆಂದು ಒಪ್ಪಿಕೊಂಡರೆ ಮಾತ್ರ ಈ ನಮೂನೆಯನ್ನು ಬಳಸಬಹುದು. ಡೌನ್‌ಲೋಡ್
ಆಲ್ ಇನ್ ಒನ್ (ಹೆಸರು ತಿದ್ದುಪಡಿ, ಇತ್ಯಾದಿ) ಹೆಸರು ತಿದ್ದುಪಡಿ, ನಕಲಿ ಅಂಕಪಟ್ಟಿ, ಪ್ರತಿಲಿಪಿ, ದಸ್ತಾವೇಜು ದೃಢೀಕರಣ, ಅಥವಾ ತಾತ್ಕಾಲಿಕ ಪದವಿ ಪ್ರಮಾಣಪತ್ರಕ್ಕಾಗಿ ಈ ಒಂದೇ ನಮೂನೆಯನ್ನು ಬಳಸಬಹುದು. ಡೌನ್‌ಲೋಡ್
ಪರೀಕ್ಷಾ ಶುಲ್ಕ ರಚನೆ 2025-26ರ ಶೈಕ್ಷಣಿಕ ವರ್ಷದ ವಿವಿಧ ಯುಜಿ ಮತ್ತು ಪಿಜಿ ಕೋರ್ಸ್‌ಗಳ (ಬಿ.ಎ., ಬಿ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ. ಇತ್ಯಾದಿ) ಪರೀಕ್ಷಾ ಶುಲ್ಕಗಳು ಮತ್ತು ಮರುಮೌಲ್ಯಮಾಪನ, ಹೆಸರು ತಿದ್ದುಪಡಿ, ಮತ್ತು ಘಟಿಕೋತ್ಸವದಂತಹ ಸೇವೆಗಳ ಶುಲ್ಕಗಳನ್ನು ಈ ದಾಖಲೆಯಲ್ಲಿ ಪಟ್ಟಿ ಮಾಡಲಾಗಿದೆ. ಡೌನ್‌ಲೋಡ್

ಸಂಪರ್ಕ ಮಾಹಿತಿ


ಪರೀಕ್ಷಾ ವಿಭಾಗ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ದೂರವಾಣಿ ಸಂಖ್ಯೆ: 0831 2565237, 0831 2565212, 0831 2565207
ಅಧಿಕೃತ ಇಮೇಲ್‌: registrareval@rcub.ac.in