ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ವಿದ್ಯಾರ್ಥಿ ಕಲ್ಯಾಣ ವಿಭಾಗ


ವಿದ್ಯಾರ್ಥಿ ಕಲ್ಯಾಣ ವಿಭಾಗದ ಬಗ್ಗೆ:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯ ನೀತಿಗಳನ್ನು ಕಾರ್ಯಗತಗೊಳಿಸಲು 2011 ರಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗವನ್ನು ಸ್ಥಾಪಿಸಿದೆ. ಮುಖ್ಯ ಆವರಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸ್ನಾತಕೋತ್ತರ ಕೇಂದ್ರಗಳು, ಘಟಕ ಮತ್ತು ಸಂಯೋಜಿತ ಕಾಲೇಜುಗಳು ವಿಶ್ವವಿದ್ಯಾನಿಲಯದಿಂದ ನಡೆಸಲ್ಪಡುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಬರುತ್ತವೆ. ವಿದ್ಯಾರ್ಥಿ ಕಲ್ಯಾಣ ಕೋಶವು ವಿದ್ಯಾರ್ಥಿ ನಿಲಯಗಳು, N.S.S., ರೆಡ್‌ಕ್ರಾಸ್, SC/ST ಮತ್ತು OBC ಸೆಲ್, ಜಿಮ್ಖಾನಾ, ಕಲ್ಯಾಣ ಯೋಜನೆಗಳು, ಯುವಜನೋತ್ಸವಗಳು, ವಿದ್ಯಾರ್ಥಿ ಕುಂದುಕೊರತೆಗಳು ಮತ್ತು ಪರಿಹಾರಗಳಿಗೆ ಸಂಬಂಧಿಸಿದ ಹಲವಾರು ವಿಶ್ವವಿದ್ಯಾಲಯದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ಪ್ರಸ್ತುತ ವಿದ್ಯಾರ್ಥಿ ಕಲ್ಯಾಣ ವಿಭಾಗ ನಿರ್ದೇಶಕರಾಗಿ ಪ್ರೊ. ವಾಯ್. ಎಸ್. ಬಲವಂತಗೊಳ, ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಉದ್ದೇಶಗಳು


  • ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೇಲಿನ ಆಸಕ್ತಿಯನ್ನು ಹೆಚ್ಚಿಸುವುದು.
  • ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಶ್ವವಿದ್ಯಾಲಯದ ನೀತಿಗಳು ಮತ್ತು ಪ್ರಕ್ರಿಯೆಗಳನ್ನು ಸಮನ್ವಯಗೊಳಿಸುವುದು.
  • ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯವನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸುವುದು, ಸುಪ್ತ ಪ್ರತಿಭೆಗಳನ್ನು ಹೊರತರುವುದಕ್ಕೆ ಉತ್ತೇಜನ ನೀಡುವುದು.
  • ವಿದ್ಯಾರ್ಥಿಗಳಲ್ಲಿ ಸರಿಯಾದ ಮೌಲ್ಯಗಳನ್ನು ಬೆಳೆಸಿ, ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸುವುದು.
  • ಜಾಗತಿಕ ಮಟ್ಟದಲ್ಲಿ ಉದ್ಯೋಗ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸುವುದು.

ಚಟುವಟಿಕೆಗಳು


ವಿದ್ಯಾರ್ಥಿ ಕಲ್ಯಾಣ ವಿಭಾಗವು ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಉತ್ತಮತೆಯನ್ನು ಗುರಿಯಾಗಿರಿಸಿಕೊಂಡಿದೆ. ಈ ಕೆಳಗಿನ ಚಟುವಟಿಕೆಗಳ ಮೂಲಕ ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಉನ್ನತ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸುತ್ತಿದೆ.

  • ಕರ್ನಾಟಕ ರಾಜ್ಯ ಸಹಕಾರ ಇಲಾಖೆ, ಬೆಂಗಳೂರು ನಿರ್ದೇಶನದನುಸಾರ, ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ “ಸಹಕಾರಿ ಸಂಘಗಳು” ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿ ಸ್ಪರ್ಧೆಯಲ್ಲಿ ವಿಜೇತರಾದ 3 ಪದವಿ ಮತ್ತು 3 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ರಮವಾಗಿ ನಗದು ಬಹುಮಾನಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ.
  • ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಮತ್ತು ಪಿಜಿ ವಿದ್ಯಾರ್ಥಿಗಳ ಯುವಜನೋತ್ಸವ, ಚನ್ನಮ್ಮ ಯುವ ಸಂಭ್ರಮ.
  • ವಿಶ್ವವಿದ್ಯಾಲಯ ಮಟ್ಟದ ವಿದ್ಯಾರ್ಥಿಗಳ ಪ್ರೇರಕ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರಗಳು.
  • ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ/ತರಬೇತಿಗಳು.
  • ಆರೋಗ್ಯ ಶಿಬಿರಗಳನ್ನು ನಡೆಸುವುದು.
  • ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ಶೈಕ್ಷಣಿಕ ಸಮಾಲೋಚನೆ ಸೇವೆಗಳನ್ನು ಒದಗಿಸುವುದು.
  • ವಿದ್ಯಾರ್ಥಿ ಜಿಮ್ಖಾನಾ ಮೂಲಕ ವಿದ್ಯಾರ್ಥಿಗಳ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮನ್ವಯ.
  • ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು.
  • ಗುರುತಿನ ಚೀಟಿಗಳ ವಿತರಣೆ.
  • ಹಾಸ್ಟೆಲ್‌ಗಳು ಮತ್ತು ಇತರ ವಿದ್ಯಾರ್ಥಿ ಸೌಕರ್ಯಗಳನ್ನು ನೋಡಿಕೊಳ್ಳುವುದು.
  • ವಿದ್ಯಾರ್ಥಿ-ಮಾಹಿತಿ ಸೇವೆಗಳು: ನೋಟೀಸ್ ಬೋರ್ಡ್ ಮತ್ತು ವೆಬ್‌ಸೈಟ್‌ನಲ್ಲಿ ಅಧಿಕೃತ ಸುತ್ತೋಲೆಗಳು ಮತ್ತು ಪೋಸ್ಟರ್‌ಗಳನ್ನು ಪ್ರಸಾರ ಮಾಡುವ ಮತ್ತು ಪ್ರದರ್ಶಿಸುವ ಮೂಲಕ ಕಲ್ಯಾಣ ಮಾಹಿತಿಯನ್ನು ಒದಗಿಸುವುದು.
  • ಸಬಲೀಕರಣ ಕೋಶದ ಮೂಲಕ ವಿದ್ಯಾರ್ಥಿನಿಯರಿಗಾಗಿ ವಿಶೇಷ ಕಾರ್ಯಕ್ರಮಗಳು.
  • ವಿಶ್ವವಿದ್ಯಾಲಯದ ಆಡಳಿತ ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕವಾಗುವುದು.
  • ರಾಣಿ ಚನ್ನಮ್ಮ ವಿಶ್ವವಿದ್ಯಾಲದಲ್ಲಿ “ನಶಾ ಮುಕ್ತ ಭಾರತ” ಪ್ರತಿಜ್ಞೆಯನ್ನು ವಿದ್ಯಾರ್ಥಿ ಸಮುದಾಯಕ್ಕೆ ಬೋಧಿಸಲಾಗಿದೆ.
  • 2024-25ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ ಆಯೋಜನೆ.

ಸೌಲಭ್ಯಗಳು


  • UGC ಮಾರ್ಗಸೂಚಿಗಳಿಗೆ ಅನುಸಾರವಾಗಿ, DSW ಕಚೇರಿಯಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಡಿಯಲ್ಲಿ ವಿದ್ಯಾರ್ಥಿ ಸಮಾಲೋಚನೆ ಕೋಶವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಅವರ ವೈಯಕ್ತಿಕ ಬೆಳವಣಿಗೆಗೆ ಅನುಕೂಲವಾಗುವಂತೆ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಸೇವೆಗಳನ್ನು ಉಚಿತವಾಗಿ ಲಭ್ಯವಾಗುವಂತೆ ಇದು ಕಾರ್ಯನಿರ್ವಹಿಸುತ್ತಿದೆ.
  • ವಿಶ್ವವಿದ್ಯಾನಿಲಯ ಮಟ್ಟದಲ್ಲಿ, ವಿದ್ಯಾರ್ಥಿಗಳ ಕುಂದುಕೊರತೆಗಳು ಮತ್ತು ಪರಿಹಾರ ಕೋಶವು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಪರಿಣಾಮಕಾರಿ ಪರಿಹಾರವನ್ನು ಮೇಲ್ವಿಚಾರಣೆ ಮಾಡುತ್ತದೆ.
  • ಎರಡು ಬಾಲಕರ ಹಾಸ್ಟೆಲ್‌ಗಳು ಎಲ್ಲಾ ಮೂಲಸೌಕರ್ಯಗಳೊಂದಿಗೆ ಮುಖ್ಯ ಕ್ಯಾಂಪಸ್‌ನಲ್ಲಿವೆ.
  • ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು.
  • ಪ್ಲೇಸ್‌ಮೆಂಟ್ ಸೆಲ್ ಮೂಲಕ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸೌಲಭ್ಯವನ್ನು ಒದಗಿಸಲಾಗಿದೆ.
  • ಕನಿಷ್ಠ ಬೆಲೆಯೊಂದಿಗೆ ಕ್ಯಾಂಟೀನ್ ಸೌಲಭ್ಯವನ್ನು ಒದಗಿಸಲಾಗಿದೆ.
  • ಮುಖ್ಯ ಕಟ್ಟಡದಲ್ಲಿ ಫೋಟೋ ನಕಲು ಪ್ರತಿ ಮತ್ತು ಸ್ಟೇಶನರಿ ಅಂಗಡಿ ಸ್ಥಾಪಿಸಲಾಗಿದೆ.
  • ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ.

ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ಕೋಶಗಳು ಮತ್ತು ವಿಭಾಗಗಳು


  • ವಿದ್ಯಾರ್ಥಿ ಜಿಮ್ಖಾನಾ.
  • SC/ST ಸೆಲ್.
  • OBC ಸೆಲ್.
  • ಆರೋಗ್ಯ ಕೇಂದ್ರ.
  • ಪ್ಲೇಸ್‌ಮೆಂಟ್ ಸೆಲ್.
  • ವಿದ್ಯಾರ್ಥಿ ಕೌನ್ಸೆಲಿಂಗ್ ಸೆಲ್
  • ಯೂತ್ ರೆಡ್ ಕ್ರಾಸ್.
  • ಹಳೆಯ ವಿದ್ಯಾರ್ಥಿಗಳ ಸಂಘ.
  • ವಿದ್ಯಾರ್ಥಿ ಕುಂದುಕೊರತೆಗಳು ಮತ್ತು ಪರಿಹಾರ ಕೋಶ.
  • Anti-Ragging ಸೆಲ್.
  • ಮಹಿಳಾ ಸಬಲೀಕರಣ ಕೋಶ.
  • ಲೈಂಗಿಕ ಕಿರುಕುಳ ಕೋಶ (ಆಂತರಿಕ ದೂರು ಸಮಿತಿ).
  • NSS ಸೆಲ್.

ಸಿಬ್ಬಂದಿ ವಿವರ


ಕ್ರ.ಸಂ ಪ್ರಾಧ್ಯಾಪಕರ ಹೆಸರು ಫೋಟೋ ಪದನಾಮ ಮೊಬೈಲ್ & ಇಮೇಲ್
1 ಪ್ರೊ. ವಾಯ್. ಎಸ್. ಬಲವಂತಗೊಳ Prof. Y. S. Balavantagol ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ವಿಭಾಗ 9845138011
studentwelfare@rcub.ac.in