ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)


ಮುನ್ನುಡಿ

ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಪ್ರಜ್ಞೆಯನ್ನು ನಿರ್ಮಿಸಲು, ಖಚಿತಪಡಿಸಲು ಮತ್ತು ಗುಣಮಟ್ಟದ ಸಂಸ್ಕೃತಿಯನ್ನು ಬೆಳೆಸಲು IQAC ಯಾಂತ್ರಿಕ ರೂಪ ಹೊಂದಿರುತ್ತದೆ. IQAC ಅಂದರೆ ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಭರವಸೆ ಮತ್ತು ಗುಣಮಟ್ಟ ವರ್ಧನೆಯ ಚಟುವಟಿಕೆಗಳಿಗೆ ಬೇಕಾಗುವ ಮಾರ್ಗದರ್ಶನ, ಯೋಜನೆ ಹಾಗೂ ಉಸ್ತುವಾರಿಯನ್ನು ಹೊಂದಿರುತ್ತದೆ. ಇದು ವಿಶ್ವವಿದ್ಯಾಲಯದ ಒಂದು ರೀತಿಯ ಶ್ರೇಣಿಯ ರಚನೆ ಅಥವಾ ದಾಖಲೆಗಳನ್ನು ಇರಿಸಿಕೊಳ್ಳುವ ಒಂದು ಅಂಗವಾಗಿದೆ. IQAC ಒಂದು ರೀತಿಯ ಪ್ರೇರಕಶಕ್ತಿಯಾಗಿದ್ದು, ಮಧ್ಯಸ್ತಿಕೆ ಕಾರ್ಯತಂತ್ರಗಳ ಮೂಲಕ ಕಂಡು ಬರುವ ಕೊರತೆಗಳನ್ನು ತೆಗೆದು ಹಾಕುತ್ತದೆ.

NAACನ ಮಾನ್ಯತೆ ಪಡೆದ ನಂತರ, ಶಿಕ್ಷಣ ಸಂಸ್ಥೆಗಳು ದೂರ ದೃಷ್ಟಿಯ ಉದ್ದೇಶವನ್ನು ಹೊಂದಿರಬೇಕು. ಈ ದಿಸೆಯಲ್ಲಿ NAAC, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ IQAC ಸ್ಥಾಪನೆಗಾಗಿ ಒತ್ತು ನೀಡುತ್ತದೆ. ಗುಣಮಟ್ಟ ಸುಧಾರಣೆಯು ಸಂಸ್ಥೆಯ ಕಾರ್ಯಾಚರಣೆಯ ಒಂದು ಅವಿಭಾಜ್ಯ ಅಂಗವಾಗಿರುಬೇಕು. ಒಳ್ಳೆಯ ಕಾರ್ಯನೀತಿಗಳನ್ನು, ವಿಚಾರಗಳನ್ನು, ಯೋಜನೆಗಳನ್ನು ರಚಿಸಲು, ಅನುಷ್ಠಾನ ಗೊಳಿಸಲು ಮತ್ತು ಸಂಸ್ಥೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳಿಗೆ ಒಂದು ಮಟ್ಟವನ್ನು ನಿಶ್ಚಯಿಸುವುದು IQAC ಯ ಪ್ರಮುಖ ಧ್ಯೇಯವಾಗಿರುತ್ತದೆ. ಕಾರ್ಯಗಾರ, ವಿಚಾರ-ಗೋಷ್ಠಿ / ಪ್ರದರ್ಶನ, ಚರ್ಚೆಗಳನ್ನು ಆಯೋಜಿಸಿ, ಸಂಸ್ಥೆಗಳಿಗೆ ಹೊಸ ನೀತಿಗಳ, ಗುಣಮಟ್ಟದ ಚಟುವಟಿಕೆಗಳ ಅರಿವು ಮೂಡಿಸುವುದು IQAC ಯ ಮತ್ತೊಂದು ಧ್ಯೇಯ.

IQACಯ ಮತ್ತೊಂದು ಪ್ರಾಮುಖ್ಯತೆ ಏನೆಂದರೆ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವಶ್ಯಕವಾಗಿರುವ ಆರ್ಥಿಕ ಅನುದಾನಗಳು IQACಯ ಸ್ಥಾಪನೆ ಹಾಗೂ ಅದರ ಕಾರ್ಯನಿರ್ವಹಣೆ ಮೇಲೆ ಅವಲಂಭಿಸಿರುತ್ತದೆ. ಇಲ್ಲವಾದಲ್ಲಿ ಅನುದಾನಗಳ ಮಂಜುರಾತಿಯಲ್ಲಿ ಅಡೆತಡೆಗಳುಂಟಾಗುತ್ತವೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ IQAC ಸ್ಥಾಪನೆಗೊಳಿಸುವುದು ಬಹಳ ಮುಖ್ಯವಾಗಿದೆ.

ದೃಷ್ಠಿ (Vision)

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯು ಶೈಕ್ಷಣಿಕ ಶ್ರೇಷ್ಠತೆಯ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. ಜಾಗತೀಕರಣಗೊಂಡ ಜಗತ್ತಿನಲ್ಲಿ, ಅಂತರ್-ಶಿಸ್ತೀಯ ಅಧ್ಯಯನಗಳು ಮತ್ತು ಸಂಶೋಧನೆಯ ಒಮ್ಮುಖವು ಸಮಾಜದ ಒಳಿತಿಗಾಗಿ ಹೊಸ ವಿಶ್ವ ದರ್ಜೆಯ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಉದಯಿಸುತ್ತಿರುವಾಗ, ಜ್ಞಾನದ ಪ್ರಸಾರ ಮತ್ತು ಪ್ರಗತಿಗಾಗಿ ನಾವು ಶ್ರಮಿಸುತ್ತೇವೆ.

ಧ್ಯೇಯ (Mission)

  • ಜಾಗತಿಕ ಗುಣಮಟ್ಟದ ನವೀನ ಮತ್ತು ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಕುಶಲ ಮಾನವ ಸಂಪನ್ಮೂಲವನ್ನು ಉತ್ಪಾದಿಸುವುದು.
  • ಸಮಾಜ ಮತ್ತು ಉದ್ಯಮದೊಂದಿಗಿನ ಒಡನಾಟದ ಆಧಾರದ ಮೇಲೆ ವಿವಿಧ ವಿಭಾಗಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪೋಷಿಸುವುದು.
  • ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಹ-ಪಠ್ಯ ಚಟುವಟಿಕೆಗಳನ್ನು ಪರಿಶೀಲಿಸುವುದು ಮತ್ತು ವಿನ್ಯಾಸಗೊಳಿಸುವುದು.
  • ವಿದ್ಯಾರ್ಥಿಗಳು ಸಮಕಾಲೀನ ಸಮಾಜದ ಸವಾಲುಗಳನ್ನು ಎದುರಿಸಲು ಸಿದ್ಧವಾಗುವಂತೆ, ನೀತಿ-ಸಂಹಿತೆಯೊಂದಿಗೆ ವೃತ್ತಿಪರತೆಯನ್ನು ಬಲಪಡಿಸುವುದು.

ಸಮಿತಿಗಳು


1. ಐಕ್ಯೂಎಸಿ ಸಲಹಾ ಸಮಿತಿ (IQAC Advisory Committee)

Sl. No COMPOSITION of IQAC @ RCU Designation
1 Prof. C.M. Thyagaraja, Hon’ble Vice-Chancellor, Head of the Institution Chairperson
2 Dr. Kiran P. Savanur, Associate Professor, Dept. of Library & Info. Sci. Member
3 Dr. Pooja Halyal, Associate Professor, Dept. of English Member
4 Dr. Devata Gasti, Asst. Professor, Dept. of MSW Member
5 Shri. Iranna B. Happali, Syndicate Member (Management representative)
6 Prof. Vinayak Bankapur, Professor, Dept of MLiSc, Academic Council Member (Local Society/Trust)
7 Prof. B.S. Navi, Professor, Department of Commerce Employersʼ nominee
8 Dr. D.K. Kamble, Deputy Registrar Administrative Officer
9 Shri Gurudatta Kulkarni Industrialist
10 Miss Priya Nikam Alumni
11 Neelakanthagouda Patil (Father of Promod N. Patil) Stakeholders (Parent)
12 Mr.Abhishek, M.Sc. Chemistry Student representative
13 Prof. J. Manjanna, Director, IQAC Coordinator

2. ಸ್ಟೀರಿಂಗ್ ಸಮಿತಿ (Steering Committee)

Sl. No. Name of the Faculty Member Designation
1 Prof. C. M. Thyagaraja, Hon’ble Vice Chancellor, RCUB. Chairman
2 Shri. Santosh Kamagouda K.A.S., Registrar, RCUB Co-Chairman
3 Prof. D. N. Patil, Registrar (Eval), RCUB. Member
4 Smt. M. A. Sapna, K.A.A.S, Finance Officer, RCUB. Member
5 Prof. Vijay F. Nagannavar, Dept. of English, RCUB. Member
6 Prof. Shivanad Gornale, Dept. of Computer Science, RCUB. Member
7 Prof. J. Manjanna, Director, IQAC, RCUB. Member Secretary

3. ಕೋರ್‌ ಗೃಪ್‌ (Core Group)

Sl. No. Member Work Assignment
1 Prof. J. Manjanna, Director, IQAC, RCUB. Overall In-Charge (Criteria 01 – 07)
2 Prof. B. S. Navi, Dept. of Commerce, RCUB. Criteria In-Charge of 01
3 Prof. Shivananda Gornale, Dept. of Computer Science, RCUB Criteria In-Charge of 2 and 3
4 Prof. R. N. Mangoli, Dept. of Criminology & Forensic Science, RCUB. Criteria In-Charge of 4 and 5
5 Prof. Ashok D’Souza, Dept. of Social Work, RCUB. Criteria In-Charge of 6 and 7
6 Dr. Maheshkumar N., Dept. of Mathematics, RCUB. Criteria - 1
7 Dr. Ramesh Kuri, Dept. of Library & Information Science, RCUB. Criteria – 2
8 Dr. Manjunath N. K., Dept. of Geography, RCUB. Criteria – 3
9 Dr. Chandrashekhar S. V., Dept. of Criminology & Forensic Science, RCUB. Criteria – 4
10 Dr. Mahantesh Kuri, Dept. of Business Administration, RCUB. Criteria – 5
11 Dr. Pooja P. Halyal, Dept. of English, RCUB. Criteria – 6
12 Dr. Mallamma Reddy, Dept. of Computer Science, RCUB. Criteria – 7

ಪಾತ್ರಗಳು ಮತ್ತು ಜವಾಬ್ದಾರಿಗಳು


  • ನ್ಯಾಕ್‌ ಮಾನ್ಯತೆಯ ಪ್ರಕ್ರಿಯೆಗಳಿಗಾಗಿ ವಿಶ್ವವಿದ್ಯಾಲಯದ ಸ್ವಯಂ ಅಧ್ಯಯನ ವರದಿ (SSR) ತಯಾರಿಸುವುದು ಮತ್ತು ಸಲ್ಲಿಸುವುದು.
  • ನಿರಂತರ ಗುಣಮಟ್ಟದ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಗುಣಮಟ್ಟ ಭರವಸೆ ವರದಿ (AQAR) ಯನ್ನು ನ್ಯಾಕ್‌ಗೆ ಪ್ರತಿವಷ೯ ಸಲ್ಲಿಸುವುದು.
  • ಪಠ್ಯಕ್ರಮ ವಿನ್ಯಾಸ ಮತ್ತು ಪ್ರಸ್ತುತತೆಯ ಕುರಿತು ಪಾಲುದಾರರ ಪ್ರತಿಕ್ರಿಯೆಯ ವರ್ಷವಾರು ವಿಶ್ಲೇಷಿಸುವುದು.
  • ಬೋಧನೆ-ಕಲಿಕಾ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿಗಳ ಪ್ರತಿಕ್ರಿಯೆಯ ವರ್ಷವಾರು ವಿಶ್ಲೇಷಿಸುವುದು.
  • ವಿಶ್ವವಿದ್ಯಾಲಯದ ಸವ೯ತೋಮುಖ ಅಭಿವೃದ್ಧಿಗಾಗಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಲೆಕ್ಕಪರಿಶೋಧನೆಗಳನ್ನು (AAA) ನಡೆಸುವುದು.
  • ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು Green, Energy ಮತ್ತು Environment ಲೆಕ್ಕಪರಿಶೋಧನೆಗಳನ್ನು ನಡೆಸುವುದು.
  • ಕಾರ್ಯತಂತ್ರದ ಯೋಜನೆ ಮತ್ತು ಮೇಲ್ವಿಚಾರಣೆಗಾಗಿ IQAC ಸಲಹಾ ಸಮಿತಿಯ ಸಭೆಗಳನ್ನು ಕಾಲಕಾಲಕ್ಕೆ ನಡೆಸುವುದು.
  • ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಬಲಪಡಿಸಲು, ಗುಣಮಟ್ಟದ ವರ್ಧನೆಗಾಗಿ ಕಾರ್ಯಾಗಾರಗಳನ್ನು, ವಿಚಾರ ಸಂಕಿರಣಗಳನ್ನು ಮತ್ತು ವಿಶೇಷ ಉಪನ್ಯಾಸಗಳನ್ನು ಆಯೋಜಿಸುವುದು.
  • UGC ಮಾರ್ಗಸೂಚಿಗಳ ಪ್ರಕಾರ ವೃತ್ತಿ ಪ್ರಗತಿ ಯೋಜನೆ (CAS)ಯಡಿ ವಿಶ್ವವಿದ್ಯಾಲಯದ ಅಧ್ಯಾಪಕರುಗಳ ಅರ್ಜಿಗಳನ್ನು ಪ್ರಾಥಮಿಕ ಹಂತದಲ್ಲಿ ಪರಿಶೀಲಿಸುವುದು.

ಚಟುವಟಿಕೆಗಳು


  • ಐಕ್ಯೂಎಸಿ, ಆರ್‌ಸಿಯುಬಿ 2021-22 ಶೈಕ್ಷಣಿಕ ವರ್ಷದ ವಾರ್ಷಿಕ ಗುಣಮಟ್ಟ ಭರವಸೆ ವರದಿಯನ್ನು (ಎಕ್ಯೂಎಆರ್) ದಿನಾಂಕ 27-02-2023 ರಂದು ಮತ್ತು 2022-23 ರ ಶೈಕ್ಷಣಿಕ ವರ್ಷದ ವಾರ್ಷಿಕ ಗುಣಮಟ್ಟ ಭರವಸೆ ವರದಿಯನ್ನು (ಎಕ್ಯೂಎಆರ್) ದಿನಾಂಕ 29-04-2024 ರಂದು ಮತ್ತು 3 ನೇ ಎಕ್ಯೂಎಆರ್ ವರದಿಯನ್ನು ದಿನಾಂಕ 29-04-2024 ರಂದು ನ್ಯಾಕ್‌ಗೆ ಸಲ್ಲಿಸಿದೆ.
  • ರಾಷ್ಟ್ರೀಯ ಸಾಫ್ಟ್‌ವೇರ್ ಸೇವಾ ಕಂಪನಿಗಳ ಸಂಘ (NASSCOM) ಸಹಯೋಗದೊಂದಿಗೆ ದಿನಾಂಕ 20-11-2021 ರಂದು ಜೂಮ್ (ಆನ್‌ಲೈನ್) ಮೂಲಕ ನಡೆಸಲಾದ “ಡಿಜಿಟಲ್ ಫ್ಲೂಯೆನ್ಸಿ ಕೋರ್ಸ್” ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (FDP)ವನ್ನು ಆಯೋಜಿಸಲಾಯಿತು.
  • ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ದಿನಾಂಕ 07-10-2022 ರಂದು “Hand Holding Programme on Assessment and Accreditation Process of NAAC” ಕುರಿತು ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು.
  • IQAC ದಿನಾಂಕ 13-08-2022 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಗ್ರಾಮ ವಿಕಾಸ ಗತಿವಿಧಿ, ಧಾರವಾಡದ ಸಹಯೋಗದೊಂದಿಗೆ ಒಂದು ದಿನದ ಓರಿಯಂಟೇಶನ್ ಕಾರ್ಯಕ್ರಮ “ಗ್ರಾಮೀಣ ಅಭಿವೃದ್ಧಿ” (ಗ್ರಾಮ ವಿಕಾಸ) ಆಯೋಜಿಸಿದೆ.
  • ಐಕ್ಯೂಎಸಿ 10-12-2021 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ “ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ಸಲ್ಲಿಕೆ ಪ್ರಕ್ರಿಯೆಯ ಒಳನೋಟ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.
  • “ಆರ್ & ಡಿ ಕಾರ್ಯಕ್ರಮಗಳ ಮೂಲಕ ಉನ್ನತ ಶಿಕ್ಷಣವನ್ನು ಪರಿವರ್ತಿಸುವ ಮಾರ್ಗಗಳು” ಕುರಿತು ಒಂದು ದಿನದ ಕಾರ್ಯಾಗಾರ ದಿನಾಂಕ: 16-05-2023 ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆಸಲಾಯಿತು.
  • ICSI (ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ) ದ SIRC ಯೊಂದಿಗೆ RCUB ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು 28-07-2023 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆಸಲಾಯಿತು.
  • IQAC ರುಬ್ರಿಕ್ ಸ್ಟ್ರಾಟೆಜಿಕ್ ಕನ್ಸಲ್ಟೆಂಟ್ಸ್ LLP ಸಹಯೋಗದೊಂದಿಗೆ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ದಿನಾಂಕ 28-08-2023 ರಂದು "ಉನ್ನತ ಶಿಕ್ಷಣದಲ್ಲಿ NAAC ಗಾಗಿ ಪ್ರಾಮುಖ್ಯತೆ, ಪಾತ್ರ ಮತ್ತು ತಂತ್ರಗಳು" ಕುರಿತು RCUB ಯ 100 ಸಂಯೋಜಿತ ಕಾಲೇಜುಗಳಿಗೆ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
  • IQAC 26-07-2024 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ “ಕಾಗಿಲ್ ವಿಜಯ ದಿವಸ್” ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಿತು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಮಾಜಿ ಸೈನಿಕರನ್ನು ಸನ್ಮಾನಿಸಿತು.
  • ಆಂತರಿಕ AAA ಸಮಿತಿ (ಮಾಕ್) ಭೇಟಿಯನ್ನು 18, 19 ಮತ್ತು 20ನೇ ಸೆಪ್ಟೆಂಬರ್, 2024 ರಂದು ಆಯೋಜಿಸಲಾಗಿದೆ.
  • ಐಕ್ಯೂಎಸಿ 20-11-2024 ರಂದು ಬೆಂಗಳೂರಿನ ದಿಶಾ ಭಾರತ್ ಸಹಯೋಗದೊಂದಿಗೆ ಕುವೆಂಪು ಸಭಾಂಗಣದಲ್ಲಿ ಬೆಳಗಾವಿಯ ಆರ್‌ಸಿಯು ವಿದ್ಯಾರ್ಥಿಗಳಿಗಾಗಿ “ಮೌಲ್ಯ ಶಿಕ್ಷಣದ ಮೂಲಕ ಜೀವನವನ್ನು ಶ್ರೀಮಂತಗೊಳಿಸುವುದು” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.
  • ಆಂತರಿಕ ಎಎಎ ಸಮಿತಿ (ಮಾಕ್) ಅನ್ನು ರಚಿಸಲಾಯಿತು ಮತ್ತು ಸೆಪ್ಟೆಂಬರ್ 18, 19 ಮತ್ತು 20, 2024 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಇಲಾಖೆಗಳ ಅಭಿವೃದ್ಧಿ ಮತ್ತು ಕುಂದುಕೊರತೆಗಳನ್ನು ತಿಳಿಸಲಾಯಿತು.
  • ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನ ಕುವೆಂಪು ಸಭಾಂಗಣದಲ್ಲಿ ದಿನಾಂಕ 28.05.2025 ರಂದು ಮಧ್ಯಾಹ್ನ 3.30 ಗಂಟೆಗೆ ಐಕ್ಯೂಎಸಿ ಸೆಲ್ ವತಿಯಿಂದ "ಬೋಧನೆ ಮತ್ತು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ" ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ.
  • ಐಕ್ಯೂಎಸಿ ಮತ್ತು ಶಿಕ್ಷಕರ ಸಂಘ, ಆರ್‌ಸಿಯು, ಬೆಳಗಾವಿ ಪ್ರತಿ ತಿಂಗಳ ಕೊನೆಯ ವಾರದಲ್ಲಿ “ವಿದ್ವಾನ್-ಮಾಸಿಕ ಸಂವಾದ” ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 31.05.2025 ಮತ್ತು 28.06.2025 ರಂದು, ರಸಾಯನಶಾಸ್ತ್ರ ವಿಭಾಗದ ಪ್ರೊ. ಪಿ. ಎಂ. ಗುರುಬಸವರಾಜ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ. ವಿನಾಯಕ್ ಬಂಕಾಪುರ್ ಅವರನ್ನು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿತ್ತು.
  • ಐಕ್ಯೂಎಸಿ ದಿನಾಂಕ 19-09-2025 ರಂದು PM-USHA-MERU ಸಾಫ್ಟ್ ಕಾಂಪೊನೆಂಟ್ 20 ರ ಅಡಿಯಲ್ಲಿ “ಸುಸ್ಥಿರ ಅಭಿವೃದ್ಧಿ ಗುರಿಗಳ ರಾಷ್ಟ್ರೀಯ ಕಾರ್ಯಾಗಾರ - ಭಾರತೀಯ ಜ್ಞಾನ ವ್ಯವಸ್ಥೆ - ಐಪಿಆರ್ ಮತ್ತು ಮಾನ್ಯತೆ ಪ್ರಕ್ರಿಯೆ” ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದೆ.
  • ಹೊಸ NAAC ಸುಧಾರಣೆಗಳು 2024 ರ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ನೀಡಲು RCUB ನ ಬೊಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗಾಗಿ ದಿನಾಂಕ 25-10-2025 ರಂದು “NAAC ಸುಧಾರಣೆಗಳು 2024: ಬೈನರಿ ಮಾನ್ಯತೆ ಪ್ರಕ್ರಿಯೆ” ಕುರಿತು ಒಂದು ದಿನದ ಕಾರ್ಯಾಗಾರವನ್ನು IQAC ಆಯೋಜಿಸಿಲಾಯಿತು.

ಸಿಬ್ಬಂದಿ


ಹೆಸರು ಹುದ್ದೆ ಫೋಟೋ
ಪ್ರೊ. ಜೆ. ಮಂಜಣ್ಣ ನಿರ್ದೇಶಕರು Prof. J. Manjanna
ಡಾ. ಸಚಿಂದ್ರ ಜಿ. ಆರ್. ಸಂಯೋಜಕರು Dr. Sachindra G. R.
ಶ್ರೀ. ಸಮರ್ಥ ಸಿದ್ದಪ್ಪ ಹಲಸಗಿ ದ್ವಿತೀಯ ದರ್ಜೆ ಸಹಾಯಕರು Shri. Samartha Siddappa Halasagi
ಶ್ರೀಮತಿ. ಫರ್ಜಾನಾ ಶಿಪಾಯಿ ಗಣಕಯಂತ್ರ ನಿರ್ವಾಹಕರು Smt. Farzana Shipayi

ಸಂಪರ್ಕಿಸಿ


ನಿರ್ದೇಶಕರು
ಆಂತರಿಕ ಗುಣಮಟ್ಟ ಭರವಸೆ ಕೋಶ (ಐ.ಕ್ಯೂ.ಎ.ಸಿ)
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ದೂರವಾಣಿ ಸಂಖ್ಯೆ: 0831-2565252
ಇ-ಮೇಲ್‌ ವಿಳಾಸ: iqac@rcub.ac.in