ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಹಿಂದಿನ ಪದನಾಮ - 'ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ'

1. ರಾಷ್ಟ್ರೀಯ ಸೇವಾ ಯೋಜನೆ ಕೋಶದ ಒಂದು ನೋಟ


ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮಾ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ದಿನಾಂಕ: 24/09/1969 ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ವಿ. ಕೆ. ಆರ್. ವಿ. ರಾವ್ ಅವರಿಂದ ಉದ್ಘಾಟಿತವಾಯಿತು.

ಕರ್ನಾಟಕದ ಉತ್ತರ ಗಡಿಭಾಗದ ಬೆಳಗಾವಿಯಲ್ಲಿ ನೆಲೆಗೊಂಡಿರುವ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಅಸ್ತಿತ್ವ ಕಂಡುಕೊಂಡು ದಶಮಾನೋತ್ಸವ ಆಚರಿಸುತ್ತಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಕನಸು ಹಾಗೂ ಆಶೋತ್ತರಗಳೊಂದಿಗೆ ವಿಶ್ವವಿದ್ಯಾಲಯವು ಬೆಳಗಾವಿ, ಹಾಗೂ ವಿಜಯಪೂರ ಜಿಲ್ಲೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 389 ಮಹಾವಿದ್ಯಾಲಯಗಳು ಸಂಯೋಜಿತಗೊಂಡಿವೆ. 389 ಕಾಲೇಜುಗಳಲ್ಲಿ ಒಟ್ಟು 160 ಎನ್.ಎಸ್.ಎಸ್. ಘಟಕಗಳಿವೆ. ಒಟ್ಟಾರೆಯಾಗಿ ಕೇಂದ್ರ ಸರಕಾರದ ಅನುದಾನದಿಂದ 15400 ಎನ್.ಎಸ್.ಎಸ್. ಸ್ವಯಂಸೇವಕರನ್ನು ಒಳಗೊಂಡಿದೆ. ಶೈಕ್ಷಣಿಕ ವಿಸ್ತರಣೆಯ ಒಂದು ಭಾಗವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಯುವ ಪೀಳಿಗೆಗೆ ಪ್ರೇರಕವಾಗಬಲ್ಲ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಎನ್.ಎಸ್.ಎಸ್. ಕೋಶಕ್ಕೆ ಸನ್ಮಾನ್ಯ ಕುಲಪತಿಗಳವರ, ಕುಲಸಚಿವರ ಹಾಗೂ ಅಧಿಕಾರಿ ವರ್ಗದವರ ಸಂಪೂರ್ಣ ಬೆಂಬಲ ದೊರೆಯುತ್ತಿದೆ.

ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ

ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಒರಿಸ್ಸಾ ರಾಜ್ಯದ ಕೋನಾರ್ಕ್‌ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಚಕ್ರ. ಈ ಚಕ್ರದ ಒಳಾಂಗಣ ಕೆಂಪು ಬಣ್ಣವನ್ನು, ಚಕ್ರದ ಹೊರಗಿನ ವ್ಯೂಹ ನೀಲಿ ಬಣ್ಣವನ್ನು ಹಾಗೂ ಕಡ್ಡಿಗಳು ಮತ್ತು ಚಕ್ರದ ಒಳಗಿನ ವ್ಯೂಹ ಬಿಳಿ ಬಣ್ಣವನ್ನು ಒಳಗೊಂಡಿದೆ. ಕೆಂಪುಬಣ್ಣ ಜೀವಂತಿಕೆ, ಸ್ಪೂರ್ತಿ ಮತ್ತು ಚೈತನ್ಯ, ನೀಲಿ ಬಣ್ಣ ಹೃದಯ ವೈಶಾಲ್ಯತೆ ಸಮೃದ್ಧಿಗೂ, ಬಿಳಿ ಬಣ್ಣ ಸರಳತೆ, ಪ್ರಾಮಾಣಿಕತೆ ಮತ್ತು ಶುಭ್ರತೆಗೂ ಪ್ರತೀಕವಾಗಿದೆ.

ಹೆಗ್ಗುರಿ

ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಪ್ರಾವಿಣ್ಯತೆ ಮತ್ತು ಜ್ಞಾನಾರ್ಜನೆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣ ಹಾಗೂ ಮುಂದಾಳುತನದ ಗುಣಗಳನ್ನು ಬೆಳೆಸುವುದು.

ಧ್ಯೇಯೋದ್ದೇಶ

  • i. “ನನಗಾಗಿ ಅಲ್ಲ ನಿಮಗಾಗಿ” [Not me But you] ಎಂಬುದು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯವಾಗಿದೆ. ಇದರ ಸಾರಾಂಶ ನಾನು ನನಗಾಗಿ ಮಾತ್ರವಲ್ಲ ನಿಮ್ಮೆಲ್ಲರಿಗಾಗಿಯೂ ಎಂಬುದಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವ್ಯಕ್ತಿಯು ಸಮಾಜದ ಅಭ್ಯುದಯದ ಮೂಲಕ ತನ್ನ ಅಭ್ಯುದಯವನ್ನು ಕಾಣುತ್ತಾನೆ.
  • ii. ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮಾಜಿಕ ಸಮನ್ವಯತೆಯನ್ನು ಪ್ರೇರೇಪಿಸಲು ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ದಿಸಲು ರಾಷ್ಟ್ರೀಯ ಸೇವಾ ಯೋಜನೆ ಕೋಶವು ಮುನ್ನಡೆಯುತ್ತಿದೆ.

2. ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳು


  • ತಾವು ವಾಸಿಸುವ ಸಮುದಾಯ ಅಥವಾ ಸಮಾಜದ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು.
  • ಸಮಾಜದ ಅಗತ್ಯಗಳನ್ನು ಗುರುತಿಸಿ, ಆ ಬಗ್ಗೆ ಏನು ಮಾಡಬಹುದೆಂದು ಆಲೋಚಿಸಿ ಪ್ರಯತ್ನಿಸುವುದು.
  • ಸಾಮಾಜಿಕ ಹಾಗೂ ಪೌರ ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳುವುದು.
  • ವೃತ್ತಿಗೌರವ-ಕಾಯಕದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳುವುದು.
  • ವಿದ್ಯಾವಂತರ ಮತ್ತು ಅನಕ್ಷರಸ್ಥರ ಮನೋಭಾವದಲ್ಲಿ ಇರಬಹುದಾದ ಅಂತರವನ್ನು ಕಡಿಮೆ ಮಾಡುವುದು.
  • ಕಲಿತ ವಿದ್ಯೆಯನ್ನು ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಬೇಕೆಂದು ಕಂಡುಕೊಳ್ಳುವುದು.
  • ಪ್ರಕೃತಿ ವಿಕೋಪ, ಬೆಂಕಿ ಅನಾಹುತ, ಮತೀಯ ಗಲಭೆ ಇತ್ಯಾದಿ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗೆ ಬರುವುದು.
  • ಪರಸ್ಪರ ಒಬ್ಬರನ್ನೊಬ್ಬರು ಅರಿಯುವುದು.
  • ಮೈತ್ರಿ, ಸೌಹಾರ್ದತೆ, ಸಹಕಾರ ಮನೋಭಾವ, ಸೇವಾ ಮನೋಭಾವ, ಸಹಜೀವನ ಇವುಗಳನ್ನು ಮೈಗೂಡಿಸಿಕೊಳ್ಳುವುದು.
  • ವ್ಯವಸ್ಥಾಪನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು.
  • ಉತ್ತಮ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳುವುದು.
  • ರಾಷ್ಟ್ರೀಯ ಭಾವೈಕ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಲ್ಲಿಯೂ ಈ ಮನೋಭಾವವನ್ನು ಬೆಳೆಸುವುದು.

ಫಲಶ್ರುತಿಗಳು

ಅ) ಸ್ವಯಂ ಸೇವಕರಿಗೆ:

  • I. ಅರ್ಹ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ.
  • II. ಸ್ನಾತಕೋತ್ತರ ಪ್ರವೇಶಗಳಲ್ಲಿ ಮೀಸಲಾತಿ.
  • III. ವಿಶ್ವವಿದ್ಯಾಲಯ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ.
  • IV. ಅಂತರಾಷ್ಟ್ರೀಯ ಯುವ-ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
  • V. ಯುವಜನೋತ್ಸವ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ರಾಷ್ಟ್ರೀಯ ಏಕತಾ ಶಿಬಿರ, ಸಾಹಸ ಶಿಬಿರ, ವಿಚಾರ ಸಂಕಿರ್ಣಗಳಲ್ಲಿ ಭಾಗವಹಿಸುವಿಕೆಗೆ ಅವಕಾಶ.
  • VI. ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

ಬ) ಎನ್. ಎಸ್.ಎಸ್ ಅಧಿಕಾರಿಗಳಿಗೆ:

  • I. ಯುವ ಸೇವಾ ಪಡೆಯು ಮಹಾವಿದ್ಯಾಲಯದ ಪ್ರಮುಖ ಆಸ್ತಿ.
  • II. 3 ವರ್ಷಗಳ ಸೇವೆಯನ್ನು ಸೇವಾ ಪುಸ್ತಕದಲ್ಲಿ ದಾಖಲಿಸುವುದು.
  • III. ಮುಂಬಡ್ತಿಗಳಲ್ಲಿ ಪರಿಗಣನೆ.
  • IV. ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು.

ಕ) ಮಹಾವಿದ್ಯಾಲಯಗಳಿಗೆ:

  • I. ಮಹಾವಿದ್ಯಾಲಯಗಳಲ್ಲಿ ಸೇವಾ ಶಿಸ್ತು ನಿರ್ಮಾಣ.
  • II. ಮಹಾವಿದ್ಯಾಲಯಗಳಲ್ಲಿ ಸಂಪೂರ್ಣ ಸ್ವಚ್ಛತೆಯ ಪರಿಕಲ್ಪನೆ ಮತ್ತು ಭಾವನೆ.
  • III. ನ್ಯಾಕ್ ಮಾನ್ಯತೆಯಲ್ಲಿ ಸಮಾಜ ಸೇವೆಯ ಪ್ರಾಧಾನ್ಯತೆ ಕಾರಣದಿಂದ ಅತ್ಯುತ್ತಮ ಶ್ರೇಣಿ.
  • IV. ಐಕ್ಯತೆಯ ಪರಿಸರ ನಿರ್ಮಾಣ.
  • V. ಪ್ರಶಸ್ತಿಗಳು ಮಹಾವಿದ್ಯಾಲಯದ ಸಾಧನೆಗಳ ಹೆಗ್ಗುರುತು.

ವಿಶ್ವವಿದ್ಯಾಲಯ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಇಡೀ ಸಮುದಾಯಗಳ ಸಹಕಾರದಿಂದ ಎನ್.ಎಸ್.ಎಸ್. ಸುಸಂಸ್ಕೃತ ಪ್ರಜೆಗಳನ್ನು ಸೃಜಿಸುವದರ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ಕಟ್ಟುವ ಕೆಲಸದಲ್ಲಿ ಸದಾ ನಿರತವಾಗಿದೆ.

3. ದೈನಂದಿನ ಮತ್ತು ವಾರ್ಷಿಕ ವಿಶೇಷ ಶಿಬಿರಗಳ ಸೇವಾ ಕಾರ್ಯಗಳು


  • ಪರಿಸರ ಅಭಿವೃದ್ಧಿ ಹಾಗೂ ಸಂರಕ್ಷಣೆ.
  • ಅಂತರ್ಜಲ ಸಂರಕ್ಷಣೆ, ಮಳೆ ನೀರಿನ ಸಂಗ್ರಹ ಹಾಗೂ ಸದುಪಯೋಗ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು.
  • ಸಮಗ್ರ ಅಭಿವೃದ್ಧಿಗಾಗಿ ಗ್ರಾಮಗಳನ್ನು ಅಥವಾ ಕೊಳಚೆ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವುದು.
  • ಸಾಕ್ಷರತೆ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವುದು.
  • ಸಾಕ್ಷರತಾ ಕೇಂದ್ರಗಳನ್ನು ನಡೆಸುವುದು.
  • ಪುಸ್ತಕ ನಿಧಿಗಳನ್ನು ಸ್ಥಾಪಿಸುವುದು.
  • ರಕ್ತದ ಗುಂಪನ್ನು ಗುರುತಿಸುವುದು ಮತ್ತು ಸ್ವಇಚ್ಛೆಯಿಂದ ರಕ್ತದಾನ ಮಾಡುವುದು.
  • ಗಿಡಮರಗಳನ್ನು ಬೆಳೆಸುವುದು.
  • ಜನತಾ ಮನೆ, ಸಮುದಾಯ ಭವನ, ಶಾಲಾ ಕೊಠಡಿ ಇತ್ಯಾದಿಗಳ ನಿರ್ಮಾಣ ಮಾಡುವುದು.
  • ರಸ್ತೆ, ಆಟದ ಮೈದಾನ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡುವುದು.
  • ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ಬಗ್ಗೆ ಜಾಗೃತಿ ಮೂಡಿಸುವುದು.
  • ಪ್ರವಾಹ ಹಾಗೂ ಕ್ಷಾಮ ಮತ್ತಿತರ ಆಪತ್ಕಾಲದಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
  • ಪ್ರಾಚ್ಯವಸ್ತು-ಸ್ಮಾರಕಗಳ ಸಂರಕ್ಷಣೆ ಮಾಡುವುದು.
  • ಕಲಿತ ತಾಂತ್ರಿಕ ಜ್ಞಾನವನ್ನು ತಾಂತ್ರಿಕ ಚಟುವಟಿಕೆಗಳಲ್ಲಿ ಬಳಸುವುದು.
  • ಗೃಹಬಳಕೆ ವಿದ್ಯುತ್ ಉಪಕರಣಗಳ ಮತ್ತು ವಾಹನಗಳ ಸ್ವಯಂರಿಪೇರಿ ಕಲಿಯುವುದು.
  • ಮಹಿಳೆಯರಿಗೆ ಟೈಲರಿಂಗ್, ಎಂಬ್ರಾಯಿಡರಿ, ನಿಟ್ಟಿಂಗ್, ಪ್ರಿಂಟಿಗ್, ಕಂಪ್ಯೂಟರ್ ಶಿಕ್ಷಣ ಮೊದಲಾದವುಗಳನ್ನು ಕಲಿಸುವುದು.

ಗ್ರಾಮ/ಕೊಳಚೆ ಪ್ರದೇಶಗಳ ದತ್ತು ಸ್ವೀಕಾರ

ಈ ಯೋಜನೆಯಲ್ಲಿ ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕ ಪಂಚಾಯತ್, ಗ್ರಾಮಪಂಚಾಯತ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಚಟುವಟಿಕೆಗಳು

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಈ ಕೆಳಕಂಡ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಾಗುವುದು.

A. ದೈನಂದಿನ ಚಟುವಟಿಕೆ

ದೈನಂದಿನ ಚಟುವಟಿಕೆಯಲ್ಲಿ ಸ್ವಯಂ ಸೇವಕ ಒಂದು ವರ್ಷದಲ್ಲಿ ಕನಿಷ್ಠ 120 ಗಂಟೆಗಳಂತೆ 2 ವರ್ಷಗಳ ಅವಧಿಯಲ್ಲಿ (ವಿಷೇಶ ಶಿಬಿರ ಕಾರ್ಯಕ್ರಮವನ್ನು ಹೊರತುಪಡಿಸಿ) 240 ಗಂಟೆಗಳ ಸೇವಾಕಾರ್ಯವನ್ನು ಮಾಡಲೇಬೇಕು. ವಾರದಲ್ಲಿ ಕನಿಷ್ಠ 4 ಗಂಟೆ ಚಟುವಟಿಕೆಗಳ ಜೊತೆಗೆ ದತ್ತು ಗ್ರಾಮಗಳಲ್ಲಿ ನಡೆಸಬಹುದಾದ ವಾರಾಂತ್ಯ ಶಿಬಿರಗಳು ಇದರಲ್ಲಿ ಸೇರಿರುತ್ತವೆ.

B. ವಿಶೇಷ ಶಿಬಿರ ಕಾರ್ಯಕ್ರಮ

ವಿಶೇಷ ಶಿಬಿರವನ್ನು ದತ್ತು ಗ್ರಾಮದಲ್ಲಾಗಲಿ ಅಥವಾ ಬೇರೆ ಎಲ್ಲಾದರೂ 7 ದಿನಗಳ ಕಾಲ ನಡೆಸಲಾಗುವುದು. ಈ ಅವಧಿಯಲ್ಲಿ ಸ್ವಯಂಸೇವಕರು ತಮ್ಮ ಮನೆ ಮತ್ತು ಕಾಲೇಜಿನಿಂದ ದೂರವಿದ್ದು ಹೆಚ್ಚು ಪರಿಣಾಮಕಾರಿ ಸೇವಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಕ. ನಾಯಕತ್ವ ಮತ್ತು ಭಾವೈಕ್ಯತಾ ಶಿಬಿರಗಳು

ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ನಾಯಕತ್ವ ಶಿಬಿರ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.

4. ಎನ್.ಎಸ್.ಎಸ್‌ ಕಾರ್ಯಕ್ರಮಗಳು


  • ಎನ್.ಎಸ್.ಎಸ್. ವಿಶೇಷ ಶಿಬಿರ
  • ರಕ್ತದಾನ ಶಿಬಿರ
  • ಏಡ್ಸ್‌ ಜಾಗೃತಿ ಕಾರ್ಯಕ್ರಮಗಳು
  • ಆರೋಗ್ಯ ತಪಾಸಣಾ ಶಿಬಿರ
  • ಉಚಿತ ನೇತ್ರ ತಪಾಸಣಾ ಶಿಬಿರ
  • ಪರಿಸರ ಸಂರಕ್ಷಣಾ ಕಾರ್ಯಕ್ರಮ
  • ನಶಾ ಮುಕ್ತ ಭಾರತ
  • ಡಾ. ಬಿ. ಆರ್‌. ಅಂಬೇಡ್ಕರ್‌ ಕಾರ್ಯಕ್ರಮಗಳು
  • ಟಿ. ಬಿ, ಮುಕ್ತ ಅಭಿಯಾನ
  • ಸ್ವಚ್ಛತಾ ಅಭಿಯಾನ
  • ಜಲ ಸಂರಕ್ಷಣೆ ಮತ್ತು ಜಲ ಜಾಗೃತಿ ಕಾರ್ಯಕ್ರಮ
  • ಪ್ಲಾಸ್ಟಿಕ್ ಮುಕ್ತ ಅಭಿಯಾನ
  • ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು
  • ವೃದ್ಧಾಶ್ರಮ/ಅನಾಥಾಶ್ರಮ ಸೇವಾ ಕಾರ್ಯಕ್ರಮ
  • ಗ್ರಾಮ ದತ್ತು ಮತ್ತು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ
  • ಶೈಕ್ಷಣಿಕ ಹಾಗೂ ಸಾಕ್ಷರತಾ ಕಾರ್ಯಕ್ರಮಗಳು
  • ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ
  • ಆರೋಗ್ಯ, ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತಾ ಜಾಗೃತಿ
  • ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಸೇವೆ
  • ರಾಷ್ಟ್ರೀಯ ದಿನಾಚರಣೆಗಳು ಮತ್ತು ರಾಷ್ಟ್ರೀಯ ಏಕತಾ ಕಾರ್ಯಕ್ರಮಗಳು
  • ಯೋಗ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ
  • ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸುರಕ್ಷತಾ ಜಾಗೃತಿ
  • ಮಾದಕ ವಸ್ತುಗಳ ದುರುಪಯೋಗ ವಿರೋಧಿ ಜಾಗೃತಿ
  • ಸಮುದಾಯ ಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳು

5. ಎನ್. ಎಸ್. ಎಸ್. ಕೋಶ ಸಂಯೋಜನಾಧಿಕಾರಿಗಳು


ಡಾ. ಕನಕಪ್ಪ ಪೂಜಾರ
ಹೆಸರು: ಡಾ. ಕನಕಪ್ಪ ಪೂಜಾರ
ವಿದ್ಯಾರ್ಹತೆ: ಎಂ.ಎ, ಎಮ್.ಎಡ್, ಪಿಎಚ್.ಡಿ
ಹುದ್ದೆ: ಕಾರ್ಯಕ್ರಮ ಸಂಯೋಜನಾಧಿಕಾರಿ
ಇ-ಮೇಲ್: pujarkr1@rcub.ac.in, nss@rcub.ac.in
ದೂರವಾಣಿ: 9449575108

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಹೆಸರು ಮತ್ತು ಪದನಾಮ

ಕ್ರ. ಸಂ ಸಿಬ್ಬಂದಿಯ ಹೆಸರು ಪದನಾಮ
1 ಡಾ. ಕನಕಪ್ಪ ಪೂಜಾರ ಸಂಯೋಜನಾಧಿಕಾರಿಗಳು
2 ಸವಿತಾ ಮ ಬಾಗೇವಾಡಿ DEO
3 ಪ್ರವೀಣ ಶಾಹಪೂರ D ದರ್ಜೆ

6. ಎನ್.ಎಸ್.ಎಸ್. ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿವರಗಳು


1. ಶೈಕ್ಷಣಿಕ ವಿವರಗಳು

  1. ಎನ್.ಎಸ್.ಎಸ್. ಘಟಕಗಳ ಸಂಖ್ಯೆ
  2. ಪ್ರತಿ ಘಟಕಕ್ಕೆ ಮಂಜೂರಾದ ಸ್ವಯಂಸೇವಕರ ಸಂಖ್ಯೆ
  3. ನೋಂದಾಯಿತ ಎನ್.ಎಸ್.ಎಸ್. ಸ್ವಯಂಸೇವಕರ ಸಂಖ್ಯೆ
  4. ಕಾರ್ಯಕ್ರಮಾಧಿಕಾರಿಗಳ ವಿವರಗಳು
  5. ಎನ್.ಎಸ್.ಎಸ್. ಚಟುವಟಿಕೆಗಳ ವಾರ್ಷಿಕ ಕ್ರಿಯಾ ಯೋಜನೆ
  6. ನಿಯಮಿತ ಚಟುವಟಿಕೆಗಳ ವಿವರಗಳು
  7. ವಿಶೇಷ ಶಿಬಿರಗಳ ವಿವರಗಳು
  8. ಸಮುದಾಯ ಸೇವೆ ಮತ್ತು ವಿಸ್ತರಣಾ ಚಟುವಟಿಕೆಗಳ ವಿವರಗಳು
  9. ರಾಷ್ಟ್ರೀಯ, ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ
  10. ಸ್ವಯಂಸೇವಕರ ತರಬೇತಿ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ವಿವರಗಳು

2. ಆಡಳಿತಾತ್ಮಕ ವಿವರಗಳು

  1. ಮಹಾವಿದ್ಯಾಲಯದ ಹೆಸರು ಮತ್ತು ಕೋಡ್
  2. ಎನ್.ಎಸ್.ಎಸ್. ಘಟಕದ ಸಂಖ್ಯೆ/ಕೋಡ್
  3. ಕಾರ್ಯಕ್ರಮಾಧಿಕಾರಿಯ ಹೆಸರು, ಹುದ್ದೆ ಹಾಗೂ ಸಂಪರ್ಕ ವಿವರಗಳು
  4. ಎನ್.ಎಸ್.ಎಸ್. ಘಟಕದ ನೋಂದಣಿ ಮತ್ತು ಮಾನ್ಯತೆ ವಿವರಗಳು
  5. ಎನ್.ಎಸ್.ಎಸ್. ಅನುದಾನ ಹಾಗೂ ವೆಚ್ಚದ ವಿವರಗಳು
  6. PFMS/ZBS ಖಾತೆಯ ವಿವರಗಳು
  7. ಅನುದಾನ ಬಳಕೆ ಪ್ರಮಾಣಪತ್ರ (UC) ಮತ್ತು ಲೆಕ್ಕಪತ್ರಗಳ ವಿವರಗಳು
  8. ವಾರ್ಷಿಕ ವರದಿ ಸಲ್ಲಿಕೆಯ ವಿವರಗಳು
  9. ಎನ್.ಎಸ್.ಎಸ್. ಚಟುವಟಿಕೆಗಳ ದಾಖಲೀಕರಣ ಮತ್ತು ವರದಿ ನಿರ್ವಹಣೆ
  10. My Bharat Portal ನೋಂದಣಿ ಮತ್ತು ಚಟುವಟಿಕೆಗಳ ವಿವರಗಳು
  11. ವಿಶ್ವವಿದ್ಯಾಲಯ/ರಾಜ್ಯ ಎನ್.ಎಸ್.ಎಸ್. ಕೋಶಕ್ಕೆ ಸಲ್ಲಿಸಿದ ಮಾಹಿತಿಯ ವಿವರಗಳು
  12. ಎನ್.ಎಸ್.ಎಸ್. ದಾಖಲೆಗಳು, ರಿಜಿಸ್ಟರ್‌ಗಳು ಹಾಗೂ ಸಂಬಂಧಿತ ಕಡತಗಳ ನಿರ್ವಹಣೆ

3. ಮೇಲ್ವಿಚಾರಣೆ ಮತ್ತು ವರದಿ

ಎನ್.ಎಸ್.ಎಸ್. ಘಟಕಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ನಿಯಮಾನುಸಾರ ನಿರ್ವಹಿಸುವುದು, ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಸಂರಕ್ಷಿಸುವುದು ಹಾಗೂ ನಿಗದಿತ ಅವಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ರಾಜ್ಯ ಎನ್.ಎಸ್.ಎಸ್. ಕೋಶಕ್ಕೆ ವರದಿ/ಮಾಹಿತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

7. ಶಾಸನಗಳು ಮತ್ತು ನಿಯಮಾವಳಿಗಳು


ರಾಷ್ಟ್ರೀಯ ಸೇವಾ ಯೋಜನೆ (National Service Scheme – NSS) ಗೆ ಸಂಬಂಧಿಸಿದ ಶಾಸನಗಳು, ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳು ಮುಖ್ಯವಾಗಿ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ:

ಎನ್.ಎಸ್.ಎಸ್. ಘಟಕಗಳ ರಚನೆ

  • ವಿಶ್ವವಿದ್ಯಾಲಯ/ರಾಜ್ಯ ಮಟ್ಟದಲ್ಲಿ NSS Cell ಕಾರ್ಯನಿರ್ವಹಿಸುತ್ತದೆ.
  • ಕಾಲೇಜು ಮಟ್ಟದಲ್ಲಿ NSS ಘಟಕವನ್ನು ಸ್ಥಾಪಿಸಲಾಗುತ್ತದೆ.
  • ಪ್ರತಿ ಘಟಕಕ್ಕೆ NSS Programme Officer ನೇಮಕ ಮಾಡಲಾಗುತ್ತದೆ.
  • ವಿದ್ಯಾರ್ಥಿಗಳನ್ನು NSS ಸ್ವಯಂಸೇವಕರಾಗಿ ನೋಂದಾಯಿಸಲಾಗುತ್ತದೆ.

ಸ್ವಯಂಸೇವಕರ ನೋಂದಣಿ ಮತ್ತು ಕರ್ತವ್ಯಗಳು

  • ಅರ್ಹ ವಿದ್ಯಾರ್ಥಿಗಳನ್ನು NSS ಸ್ವಯಂಸೇವಕರಾಗಿ ನೋಂದಾಯಿಸುವುದು.
  • ನಿಯಮಿತ NSS ಚಟುವಟಿಕೆಗಳಲ್ಲಿ ಭಾಗವಹಿಸುವುದು.
  • ಸಮುದಾಯ ಸೇವೆ, ಸ್ವಚ್ಛತೆ, ಆರೋಗ್ಯ, ಪರಿಸರ ಸಂರಕ್ಷಣೆ, ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.
  • NSS ದಾಖಲಾತಿ ಮತ್ತು ಹಾಜರಾತಿಯನ್ನು ಸರಿಯಾಗಿ ನಿರ್ವಹಿಸುವುದು.

ವಿಶೇಷ ಶಿಬಿರ (Special Camp)

  • NSS ಘಟಕಗಳು ನಿಯಮಾನುಸಾರ ವಿಶೇಷ ಶಿಬಿರಗಳನ್ನು ಆಯೋಜಿಸಬಹುದು.
  • ಗ್ರಾಮೀಣ/ಹಿಂದುಳಿದ ಪ್ರದೇಶಗಳನ್ನು ಶಿಬಿರಕ್ಕಾಗಿ ಆಯ್ಕೆ ಮಾಡುವುದು.
  • ಶಿಬಿರದಲ್ಲಿ ಸಮುದಾಯ ಸೇವೆ, ಜಾಗೃತಿ, ಆರೋಗ್ಯ, ಸ್ವಚ್ಛತೆ, ಪರಿಸರ ಮತ್ತು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು.
  • ಶಿಬಿರದ ಹಾಜರಾತಿ, ಕಾರ್ಯಕ್ರಮದ ವಿವರ, ಛಾಯಾಚಿತ್ರಗಳು ಮತ್ತು ವೆಚ್ಚದ ದಾಖಲೆಗಳನ್ನು ನಿರ್ವಹಿಸುವುದು.

ಹಣಕಾಸು ನಿಯಮಗಳು

  • NSS ಅನುದಾನವನ್ನು ಸರ್ಕಾರ/ವಿಶ್ವವಿದ್ಯಾಲಯದ ಅನುಮೋದಿತ ಉದ್ದೇಶಗಳಿಗೆ ಮಾತ್ರ ಬಳಸಬೇಕು.
  • ಅನುದಾನದ ಬಳಕೆಗೆ ಸಂಬಂಧಿಸಿದ ಬಿಲ್, ವೋಚರ್, ರಸೀದಿ, ಖಾತೆ ವಿವರ ಮತ್ತು ಉಪಯೋಗ ಪ್ರಮಾಣಪತ್ರ (UC) ಗಳನ್ನು ಸಂರಕ್ಷಿಸಬೇಕು.
  • ಹಣಕಾಸು ವ್ಯವಹಾರಗಳನ್ನು ಅನುದಾನ ಬಿಡುಗಡೆಗೆ ಸಂಬಂಧಿಸಿದ ನಿಯಮಗಳು ಮತ್ತು PFMS ಮಾರ್ಗಸೂಚಿಗಳಂತೆ ನಿರ್ವಹಿಸಬೇಕು.

ಆಡಳಿತಾತ್ಮಕ ದಾಖಲೆಗಳು

  • NSS ಘಟಕದ ನೋಂದಣಿ ದಾಖಲೆ
  • ಸ್ವಯಂಸೇವಕರ ಪಟ್ಟಿ
  • ಹಾಜರಾತಿ ದಾಖಲೆ
  • ಕಾರ್ಯಕ್ರಮದ ವರದಿ
  • ವಿಶೇಷ ಶಿಬಿರದ ವರದಿ
  • ಅನುದಾನ ಮತ್ತು ವೆಚ್ಚದ ದಾಖಲೆ
  • ಛಾಯಾಚಿತ್ರ/ದಾಖಲೀಕರಣ
  • ವಾರ್ಷಿಕ ವರದಿ
  • ಉಪಯೋಗ ಪ್ರಮಾಣಪತ್ರ

Programme Officer ಅವರ ಜವಾಬ್ದಾರಿಗಳು

  • NSS ವಾರ್ಷಿಕ ಕ್ರಿಯಾ ಯೋಜನೆ ರೂಪಿಸುವುದು.
  • ಕಾರ್ಯಕ್ರಮಗಳನ್ನು ನಿಯಮಾನುಸಾರ ಆಯೋಜಿಸುವುದು.
  • ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುವುದು.
  • ಹಾಜರಾತಿ ಮತ್ತು ಚಟುವಟಿಕೆಗಳ ದಾಖಲೆ ನಿರ್ವಹಿಸುವುದು.
  • ಹಣಕಾಸು ಮತ್ತು ಕಾರ್ಯಕ್ರಮದ ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು.

ವಿಶ್ವವಿದ್ಯಾಲಯ NSS Cell ಜವಾಬ್ದಾರಿಗಳು

  • ಸಂಯೋಜಿತ ಕಾಲೇಜುಗಳ NSS ಘಟಕಗಳ ಮೇಲ್ವಿಚಾರಣೆ.
  • ರಾಜ್ಯ/ಕೇಂದ್ರ NSS ನಿರ್ದೇಶನಗಳ ಅನುಷ್ಠಾನ.
  • ತರಬೇತಿ, ಶಿಬಿರ ಮತ್ತು ವಿಶೇಷ ಕಾರ್ಯಕ್ರಮಗಳ ಸಮನ್ವಯ.
  • ಅನುದಾನ ಮತ್ತು ವರದಿಗಳ ಪರಿಶೀಲನೆ.
  • ಕಾಲೇಜುಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದು.

ಶಿಸ್ತು ಮತ್ತು ನಿಯಮ ಪಾಲನೆ

  • NSS ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮತ್ತು ಸೇವಾ ಮನೋಭಾವದಿಂದ ಭಾಗವಹಿಸಬೇಕು.
  • ಕಾರ್ಯಕ್ರಮದ ಸಂದರ್ಭದಲ್ಲಿ ವಿಶ್ವವಿದ್ಯಾಲಯ, ಕಾಲೇಜು ಹಾಗೂ ಸರ್ಕಾರದ ಅನ್ವಯಿಸುವ ನಿಯಮಗಳನ್ನು ಪಾಲಿಸಬೇಕು.

9. ಸಂಪರ್ಕಕ್ಕಾಗಿ


ವಿಳಾಸ: ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಎನ್. ಎಸ್. ಎಸ್. ಕೋಶ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04, ಬೆಳಗಾವಿ-591156, ಕರ್ನಾಟಕ.
ಟೆಲಿಫೋನ್ ನಂ: 0831-2565210
ಇ-ಮೇಲ್: nss@rcub.ac.in