ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕ


ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಘಟಕವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾರಂಭದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲ ಶಿಷ್ಯವೇತನದ ಸೌಲಭ್ಯಗಳನ್ನು ಘಟಕದ ಮುಖಾಂತರ ಒದಗಿಸಲಾಗುತ್ತಿದೆ.

ಸಿಬ್ಬಂದಿ ವಿವರ


ಹೆಸರು ಪದನಾಮ
ಪ್ರೊ. ವ್ಹಿ. ಎಸ್‌ ಶಿಗೇಹಳ್ಳಿ ನಿದೇ೯ಶಕರು
ಶ್ರೀಮತಿ. ರೇಣುಕಾ ಹೆಚ್‌ ಬಾಲಾಗಾಂವಿ ಸಹಾಯಕ ಕುಲಸಚಿವರು
ಶ್ರೀ ವೆಂಕಟೇಶ ಶಿ ಕಬಾಡೆ ಪ್ರಥಮ ದರ್ಜೆ ಸಹಾಯಕರು
ಶ್ರೀ ಸುಮಂತ ಮ ಹಂಚಿನಮನಿ ದ್ವಿತೀಯ ದರ್ಜೆ ಸಹಾಯಕರು
ಶ್ರೀಮತಿ. ಗೀತಾ ಪೋತದಾರ ಸಿಪಾಯಿ

ಚಟುವಟಿಕೆಗಳು


PM–USHA MERU ಯೋಜನೆ

PM–USHA MERU ಯೋಜನೆಯಡಿಯಲ್ಲಿ Soft-Components ಕ್ರ.ಸಂ 27ರ ಕ್ರಿಯಾ ಯೋಜನೆಯನ್ನು Future minds ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಖ್ಯ ಆವರಣದ ವಿವಿಧ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ದಿನಾಂಕ: 22.09.2025 ರಿಂದ 27.09.2025ರ ವರೆಗೆ ಈ ಕೆಳಗಿನ ತರಬೇತಿಗಳನ್ನು ನೀಡಲಾಗಿದೆ.

  • ವಿದ್ಯಾರ್ಥಿಗಳಲ್ಲಿ ಸ್ವಯಂ ಅರಿವು ಮೂಡಿಸಲು ಮತ್ತು ಆತ್ಮವಿಶ್ವಾಸವನ್ನು ಹೊಂದುವ ತರಬೇತಿ. (Create self-awareness and improve confidence among students)
  • ಸಂವಹನ, ಹೊಂದುವಿಕೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುವ ತರಬೇತಿ. (Develop communication, adaptability, and emotional intelligence)
  • ವಿಮರ್ಶಾತ್ಮಕ ಮತ್ತು ಸೃಜನಶೀಲ ಚಿಂತನಾ ಸಾಮರ್ಥ್ಯಗಳನ್ನು ಬಲಪಡಿಸುವ ತರಬೇತಿ. (Strengthen critical and creative thinking abilities)
  • ಪ್ರಾಯೋಗಿಕ ಉದ್ಯೋಗಾರ್ಹತೆ ಮತ್ತು ವೃತ್ತಿ ಸಿದ್ಧತೆ ಕೌಶಲ್ಯ ತರಬೇತಿ. (Provide practical employability and career readiness skills)

ಇತರೆ ಕಾರ್ಯಕ್ರಮಗಳು

  • ಪ್ರತಿ ವರ್ಷ ಘಟಕದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.
  • ಡಾ. ಬಾಬು ಜಗಜೀವನರಾಮ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.

ಶಿಷ್ಯವೇತನಗಳು


ರಾಜ್ಯ ಸರಕಾರದಿಂದ ನೀಡಲಾಗುವ ಶಿಷ್ಯವೇತನಗಳು

  • ವಿದ್ಯಾಸಿರಿ, ರೈತ ವಿದ್ಯಾನಿಧಿ, ಹಾಗೂ ಕಾರ್ಮಿಕ ವಿದ್ಯಾನಿಧಿ, ಆರ್ಯ ವೈಶ್ಯ ಸಮುದಾಯಿ ನಿಗಮದ ಶಿಷ್ಯವೇತನ ಮತ್ತು ಕೈಮಗ್ಗ ಮಂಡಳಿಯ ಪ್ರೋತ್ಸಾಹ ಧನ.

ಸದರಿ ಮೇಲಿನ ಶಿಷ್ಯವೇತನಗಳಿಗೆ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್‌ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಆಯಾ ಇಲಾಖೆಗಳಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಜಮೆಯಾಗುತ್ತಿದೆ.

ಕೇಂದ್ರ ಸರಕಾರದಿಂದ ನೀಡಲಾಗುತ್ತಿರುವ ಶಿಷ್ಯವೇತನಗಳು

  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರಾಷ್ಟ್ರೀಯ ವಿದ್ಯಾರ್ಥಿ ವೇತನದ ಮೂಲಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಯಲ್ಲಿ 75% ಕ್ಕಿಂತ ಅಧಿಕ ಅಂಕಗಳಿಸಿದವರಿಗೆ ಪ್ರೊತ್ಸಾಹ ಧನ ನೀಡಲಾಗುತ್ತದೆ.
  • ಅಂಗವೈಕಲ್ಯವಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನದ ಮೂಲಕ ಶಿಷ್ಯವೇತನ ಸೌಲಭ್ಯ ಒದಗಿಸಲಾಗುತ್ತಿದೆ.
  • ಒಂದೇ ಹೆಣ್ಣು ಮಗಳು ಇರುವ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನದ ಮೂಲಕ ಶಿಷ್ಯವೇತನ ಸೌಲಭ್ಯ ಒದಗಿಸಲಾಗುತ್ತಿದೆ.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ. 10,000/- ದಂತೆ 3 ವರ್ಷ ಫೆಲೋಶಿಪ್ ಸೌಲಭ್ಯಗಳನ್ನು ಎಸ್.ಸಿ.ಪಿ /ಟಿ.ಎಸ್.ಪಿ ಅನುದಾನದಿಂದ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ಸೌಲಭ್ಯಗಳು

  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ 24.10% ರಲ್ಲಿ ಸಾದಿಲ್ವರ ವೆಚ್ಚ ಪ್ರತಿ ವರ್ಷ 3 ವರ್ಷಕ್ಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರೂ. 8,000/- ಕಲಾ ವಿಭಾಗದ ವಿದ್ಯಾರ್ಥಿಗಳಿಗೆ 6,000/- ಹಾಗೂ ಮಹಾಪ್ರಬಂಧ ಮಂಡನೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರೂ. 12,000/- ಕಲಾ ವಿಭಾಗದ ವಿದ್ಯಾರ್ಥಿಗಳಿಗೆ 10,000/-ರಂತೆ ಶಿಷ್ಯವೇತನ ಸೌಲಭ್ಯ ಒದಗಿಸಲಾಗುತ್ತಿದೆ.
  • ಬ್ರಹ್ಮಪುತ್ರ ಹಾಗೂ ಕೃಷ್ಣಾ ವಸತಿ ನಿಲಯಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಭೋಜನ ವೆಚ್ಚವು ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ ರೂ. 800/-ರಂತೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ 24.10% ರಲ್ಲಿ ನೀಡಲಾಗುತ್ತಿದೆ.
  • ಬ್ರಹ್ಮಪುತ್ರ ಹಾಗೂ ಕೃಷ್ಣಾ ವಸತಿ ನಿಲಯಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರು ಆಗುವ ಭೋಜನ ವೆಚ್ಚವು ವಿಳಂಬವಾಗುವುದರಿಂದ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ 24.10% ರಿಂದ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ ರೂ. 1850/-ರಂತೆ ನೀಡಲಾಗುತ್ತಿದೆ.

ಈ ಮೇಲಿನ ಎಲ್ಲ ಸೌಲಭ್ಯಗಳ ಶಿಷ್ಯವೇತನ ಹಾಗೂ ಭೋಜನಾವೆಚ್ಚದ ಮೊತ್ತವು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಸಂದಾಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.

ಸಂಪರ್ಕಿಸಿ


ನಿದೇ೯ಶಕರು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ದೂರವಾಣಿ: 0831 2565206
ಇಮೇಲ್: scstcellrcub@gmail.com