ಸಂಯೋಜನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿ.ಡಿ.ಸಿ. ವಿಭಾಗದ ಕಾರ್ಯಚಟುವಟಿಕೆಗಳು
ಸಂಯೋಜನೆ ಅಧಿಸೂಚನೆಯನ್ನು ದಿನಪತ್ರಿಕೆಯಲ್ಲಿ
ಪ್ರಕಟಿಸುವುದು.
ಅಧಿಸೂಚನೆಯನ್ನು 3 ಕನ್ನಡ, 1 ಇಂಗ್ಲೀಷ
ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಸಂಯೋಜನೆಗೆ ಸಂಬಂಧಿಸಿದ, ವಿವಿಧ ಬಗೆಯ ಸಂಯೋಜನಾ
ಅರ್ಜಿ, ಸಂಯೋಜನೆಗೆ ಸಂಬಂಧಿಸಿದ ನಿಯಮಾವಳಿ, ಶುಲ್ಕಗಳ ಮಾಹಿತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ
ವೆಬ್ ಸೈಟಿನಲ್ಲಿ ಅಳವಡಿಸಲಾಗಿರುತ್ತದೆ. (www.rcub.ac.in)
ಸಂಯೋಜನೆಯ ಅಧಿಸೂಚನೆಯು, ಅರ್ಜಿ ವಿಧಾನ ,
ನಿಗದಿಪಡಿಸಿದ ದಿನಾಂಕಗಳ ವಿವರವನ್ನು ಒಳಗೊಂಡಿರುತ್ತದೆ.
ಸಂಸ್ಥೆ/ಮಹಾವಿದ್ಯಾಲಯಗಳಿಂದ ವಿವಿಧ ಬಗೆಯ ಸಂಯೋಜನೆಯ
ಅರ್ಜಿಯನ್ನು ಸ್ವೀಕರಿಸಲಾಗುವುದು.
ಮಹಾವಿದ್ಯಾಲಯದವರು ಸಲ್ಲಿಸಿದ ಸಂಯೋಜನಾ ಅರ್ಜಿಯನ್ನು
ಪರಿಶೀಲಿಸುವುದು.
ಮಹಾವಿದ್ಯಾಲಯದವರು ಸಲ್ಲಿಸಿದ ಅರ್ಜಿಯನ್ನು
ರಿಜಿಸ್ಟರನಲ್ಲಿ ದಾಖಲಿಸಲಾಗುವುದು. (ಮಹಾವಿದ್ಯಾಲಯದ ಹೆಸರು, ಕೋಡ ಸಂಖ್ಯೆ, ಸಂಯೋಜನೆಗೆ ಅರ್ಜಿ
ಸಲ್ಲಿಸಿದ ಕೋರ್ಸಗಳ ವಿವರ, ಸಂಯೋಜನೆ ವಿಧ, ಶುಲ್ಕಗಳ ವಿವರ, ಭರಿಸಿದ ದಿನಾಂಕ, ಚಲನ್ ನಂ. ಇತ್ಯಾದಿ)
ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಸಂಯೋಜನೆಗೆ
ಅರ್ಜಿ ಸಲ್ಲಿಸಿದ ಮಹಾವಿದ್ಯಾಲಯಗಳ ಅರ್ಜಿಯನ್ನು ಸಿಂಡಿಕೇಟ್ ಸಭೆಯ ಪರಿಶೀಲನೆಗಾಗಿ ಮಂಡಿಸಲಾಗುವುದು.
ಸಮಿತಿಯಲ್ಲಿ ಹಿರಿಯ ಪ್ರಾಧ್ಯಾಪಕರನ್ನು
ಅಧ್ಯಕ್ಷರನ್ನಾಗಿ, ಸಹ ಪ್ರಾಧ್ಯಾಪಕರನ್ನೊಳಗೊಂಡ ಮೂರು ಅಥವಾ ನಾಲ್ಕು ಜನರ ಸಮಿತಿಯನ್ನು ರಚಿಸಿ,
ಸಮಿತಿಯಲ್ಲಿ ಒಬ್ಬರು ಪ.ಜಾ/ಪ.ಪಂ. ಇವರನ್ನು ನೇಮಿಸಲಾಗುವುದು.
ಸಮಿತಿಗಳನ್ನು ರಚಿಸಿದ ನಂತರ ತಾಲೂಕುವಾರು
ಮಹಾವಿದ್ಯಾಲಯಗಳ ಪರಿಶೀಲನೆಗೆ ಕಳುಹಿಸಲಾಗುವುದು.
ಸಮಿತಿಯವರಿಗೆ, ಭೇಟಿ ನೀಡಬೇಕಾದ ಮಹಾವಿದ್ಯಾಲಯಗಳ
ವೇಳಾಪಟ್ಟಿ, ಕೋರ್ಸ ಮತ್ತು ಸಂಯೋಜನೆ ವಿಧವನ್ನು ಒಳಗೊಂಡಿರುವ ಪತ್ರವನ್ನು ನೀಡಲಾಗುವುದು ಮತ್ತು
ಮಹಾವಿದ್ಯಾಲಯಕ್ಕೆ ಸಮಿತಿಯು ಭೇಟಿ ನೀಡುವ ದಿನಾಂಕದ ವಿವರ ಇರುವ ಪತ್ರವನ್ನು ಕಳುಹಿಸಲಾಗುವುದು.
ಸಮಿತಿಯವರಿಂದ, ಮಹಾವಿದ್ಯಾಲಯಕ್ಕೆ ಭೇಟಿ ನೀಡಿ
ಪರಿಶೀಲಿಸಿರುವ ವರದಿಯನ್ನು ಸ್ವೀಕರಿಸಲಾಗುವುದು.
ಸದರಿ ವರದಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡಿರುವ
ಮತ್ತು ಶಿಫಾರಸ್ಸು ಮಾಡದೇ ಇರುವ ವರದಿಗಳನ್ನು ಪ್ರತ್ಯೇಕಿಸಲಾಗುವುದು.
ಸಮಿತಿಯವರು ನೀಡಿರುವ ವರದಿಗಳನ್ನು ಮೊದಲು
ವಿದ್ಯಾವಿಷಯಕ ಪರಿಷತ್ ಸಭೆಗೆ ನಂತರ ಸಿಂಡಿಕೇಟ್ ಸಭೆಗೆ ಮಂಡಿಸಲಾಗುವುದು.
ಸರಕಾರದಿಂದ ಮಂಜೂರಾತಿ ಪಡೆಯಬೇಕಾದಂಥ ವಿವಿಧ ಬಗೆಯ
ಸಂಯೋಜನೆಗಳಾದ, ಹೊಸ ಮಹಾವಿದ್ಯಾಲಯದ ಸಂಯೋಜನೆ, ಹೊಸ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸಗಳ ಸಂಯೋಜನೆ,
ಹೊಸ ಭಾಷಾ ಮತ್ತು ಮೂಲ ವಿಷಯಗಳ ಸಂಯೋಜನೆ, ಶಾಶ್ವತ ಸಂಯೋಜನೆ ಹಾಗೂ ಸ್ನಾತಕೋತ್ತರ/ವೃತ್ತಿಪರ ಸ್ನಾತಕ
ಕೋರ್ಸಗಳ ಪ್ರವೇಶ ಮಿತಿಹೆಚ್ಚಳದ ಪ್ರಸ್ತಾವನೆಯನ್ನು ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ
ಸಲ್ಲಿಸಲಾಗುವುದು.
ವಿಶ್ವವಿದ್ಯಾಲಯದ ಮಟ್ಟದಲ್ಲಿ ನೀಡಬೇಕಾದಂಥ
ಮುಂದುವರಿಕೆ/ವಿಸ್ತರಣೆಗೆ ಮತ್ತು ಪ್ರವೇಶ ಮಿತಿ ಹೆಚ್ಚಳಕ್ಕಾಗಿ ಅರ್ಜಿ ಸಲ್ಲಿಸಿದಂಥ
ಮಹಾವಿದ್ಯಾಲಯಗಳಿಗೆ ತನಿಖಾ ಸಮಿತಿಯವರು ನೀಡಿರುವ ವರದಿಯಲ್ಲಿ ಕಾಣಿಸಿರುವ ಷರತುಗಳನ್ನು ಪೂರೈಸುವ
ಕುರಿತಾಗಿ ಮಹಾವಿದ್ಯಾಲಯಗಳಿಗೆ ಪತ್ರವನ್ನು ಕಳುಹಿಸಲಾಗುವುದು.
ಮಹಾವಿದ್ಯಾಲಯದವರು ಷರತ್ತುಗಳನ್ನು ಪೂರೈಸಿರುವ
ಕುರಿತಾಗಿ ಸಲ್ಲಿಸಿದ ಅನುಪಾಲನಾ ವರದಿಯನ್ನು ಪರಿಶೀಲಿಸಿ ಮಹಾವಿದ್ಯಾಲಯಗಳಿಗೆ ಮುಂದುವರಿಕೆ/ವಿಸ್ತರಣೆಯ
ಅಧಿಸೂಚನೆಯನ್ನು ಮತ್ತು ಪ್ರವೇಶ ಮಿತಿಹೆಚ್ಚಳದ ಪತ್ರವನ್ನು ಕಳುಹಿಸಲು ಕ್ರಮಕೈಗೊಳ್ಳಲಾಗುವುದು.
ಇತರೆ ಕಾರ್ಯಚಟುವಟಿಕೆಗಳು
ಸರಕಾರದ ನಿರ್ದೇಶನದಂತೆ ಸಂಯೋಜನೆಯ ಪ್ರಕ್ರಿಯೆಯನ್ನು
ಅಂಜರ್ತಾಲದ ಮುಖಾಂತರ ಕೈಗೊಳ್ಳುವುದು.
ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ
ಪ್ರಾಂಶುಪಾಲರಿಗೆ ಮತ್ತು ಬೋಧಕ ಸಿಬ್ಬಂದಿಯವರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ಅವರು
ಸಲ್ಲಿಸುತ್ತಿರುವ ಹುದ್ದೆಗೆ ಅನುಮೋದನೆ ನೀಡುವುದು.
ಮಹಾವಿದ್ಯಾಲಯದ ಸ್ಥಗಿತ, ವಿಲೀನಗೊಳಿಸುವುದು,
ಸ್ಥಳಾಂತರಿಸುವುದು ಮತ್ತು ಹೆಸರು ಬದಲಾವಣೆಗೆ ಸಂಬಂಧಿಸಿದ ಕಾರ್ಯಕೈಗೊಳ್ಳುವುದು.
ಮಹಾವಿದ್ಯಾಲಯದವರು 2ಎಫ್ ಮತ್ತು 12ಬಿ ಮಾನ್ಯತೆಯನ್ನು
ಪಡೆಯುವ ಸಲುವಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಮುಂದಿನ ಕ್ರಮಕ್ಕಾಗಿ ಯುಜಿಸಿ ನವದೆಹಲಿ/ಬೆಂಗಳೂರು
ಇವರಿಗೆ ಕಳುಹಿಸಲಾಗುವುದು.
ಮಹಾವಿದ್ಯಾಲಯದವರು ಸಲ್ಲಿಸಿದ ಎಂ.ಆರ್.ಪಿ.
ಪ್ರಸ್ತಾವನೆ, ಕಟ್ಟಡ ಅಭಿವೃದ್ಧಿ ಪ್ರಸ್ತಾವನೆ, ಮಹಿಳಾ ವಸತಿ ನಿಲಯ ಕಟ್ಟಡದ ಪ್ರಸ್ತಾವನೆ ಮತ್ತು
ಸಿ.ಪಿ.ಇ. ಪ್ರಸ್ತಾವನೆಗಳನ್ನು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಇವರಿಗೆ ಕಳುಹಿಸಿವುದು.
ಶಿಕ್ಷಣ ಕೋರ್ಸ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ
ಎನ್.ಸಿ.ಟಿ.ಇ. ನಿಯಮಾವಳಿಗಳ ಪ್ರಕಾರ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವುದು.
ಸಿ.ಡಿ.ಸಿ. ವಿಭಾಗವು ಯು.ಜಿ.ಸಿ, ಎ.ಐ.ಸಿ.ಟಿ.ಇ,
ಎನ್.ಸಿ.ಟಿ.ಇ. ಮತ್ತು ಕರ್ನಾಟಕ ಸರಕಾರ ಇವರು ಸಲಹೆ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವುದು.