ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ


ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ಪ್ರೊಫೈಲ್

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ (ಆರ್‌ಸಿಯುಬಿ) ವಿವಿಧ ಸಂಶೋಧನಾ ವಿಭಾಗಗಳನ್ನು ಹೊಂದಿದೆ. ಆರ್‌ಸಿಯುಬಿಯ ಅಧ್ಯಾಪಕರು ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳು, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಮತ್ತು ಗ್ರಂಥಾಲಯ ಮಾಹಿತಿ-ವಿಜ್ಞಾನ ಕ್ಷೇತ್ರಗಳಲ್ಲಿ ಒಂಬತ್ತು ಶಾಲೆಗಳ ಅಡಿಯಲ್ಲಿ ಸಂಶೋಧನೆ ಕೈಗೊಳ್ಳುತ್ತಿದ್ದಾರೆ. ಡಿಎಸ್‌ಟಿ, ಡಿಬಿಟಿ, ವಿಜಿಎಸ್‌ಟಿ, ಯುಜಿಸಿ, ಐಸಿಎಸ್‌ಎಸ್‌ಆರ್ ಮತ್ತು ಇತರ ಸರ್ಕಾರಿ ಏಜೆನ್ಸಿಗಳಿಂದ ವೈಯಕ್ತಿಕ ಮತ್ತು ಸಹಯೋಗದ ಯೋಜನೆಗಳಲ್ಲಿ ಬಾಹ್ಯ ಅನುದಾನವನ್ನು ಪಡೆಯುವಲ್ಲಿ ಆರ್‌ಸಿಯುಬಿ ಪ್ರಬಲ ದಾಖಲೆಯನ್ನು ಹೊಂದಿದೆ. ನಾಲ್ಕು ಅಧ್ಯಯನ ಪೀಠಗಳನ್ನು ಹೊಂದುವುದರ ಜೊತೆಗೆ, ಆರ್‌ಸಿಯುಬಿ ಪ್ರಸ್ತುತ ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ/ಜಂಟಿ ಸಂಶೋಧನೆಯಲ್ಲಿ ಭಾಗವಹಿಸುತ್ತಿದೆ.

ಆರ್‌ಸಿಯುಬಿಯ ಅಧ್ಯಾಪಕರು ಸಕ್ರಿಯವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಕಳೆದ ಐದು ವರ್ಷಗಳಲ್ಲಿ 1000 ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಬಾಹ್ಯ ಅನುದಾನದ ಜೊತೆಗೆ, ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಪ್ರಯೋಗಾಲಯವನ್ನು ಸ್ಥಾಪಿಸಲು ಕಿರಿಯ ಅಧ್ಯಾಪಕರಿಗೆ ವಿಶ್ವವಿದ್ಯಾಲಯವು ಬೀಜ ಧನವನ್ನು (Seed Money) ಒದಗಿಸುತ್ತಿದೆ. ಆರ್‌ಸಿಯುಬಿಯಲ್ಲಿನ ಸಂಶೋಧನೆಯು ಹಲವಾರು ಬಹುಮಾನಗಳು ಮತ್ತು ಫೆಲೋಶಿಪ್‌ಗಳನ್ನು ಸಹ ಪಡೆದಿದೆ.

ಸಂಶೋಧನಾತ್ಮಕ ಮೂಲಭೂತ ಸೌಕರ್ಯಗಳು

ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದೆ. ಕಂಪ್ಯೂಟರ್ ಸೈನ್ಸ್ ವಿಭಾಗವು ಕಂಪ್ಯೂಟೇಶನಲ್ ಸಂಶೋಧನೆಗಾಗಿ ಸುಧಾರಿತ ಕಂಪ್ಯೂಟರ್ ಲ್ಯಾಬ್‌ಗಳನ್ನು ಹೊಂದಿದೆ ಮತ್ತು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗಗಳು ಸುಧಾರಿತ ಉಪಕರಣಗಳೊಂದಿಗೆ ಸುಸಜ್ಜಿತ ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿವೆ.

ಸಂಶೋಧನಾ ಉಪಕರಣಗಳು ಮತ್ತು ಸೌಲಭ್ಯ

  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆಗಾಗಿ ಕಂಪ್ಯೂಟರ್ ಸಿಸ್ಟಮ್ ಲ್ಯಾಬ್‌ಗಳು
  • ಮೂಲ ವಿಜ್ಞಾನದಲ್ಲಿ ರಸಾಯನಶಾಸ್ತ್ರ ಸಂಶೋಧನಾ ಪ್ರಯೋಗಾಲಯಗಳು
  • ಮೂಲ ವಿಜ್ಞಾನದಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯಗಳು
  • ಗಣಿತಶಾಸ್ತ್ರ ಕ್ಷೇತ್ರದಲ್ಲಿ ದ್ರವ ಚಲನಶಾಸ್ತ್ರ (Fluid Dynamics) ಮತ್ತು ಕಂಪ್ಯೂಟೇಶನಲ್ ಅಧ್ಯಯನಗಳು
  • ಭದ್ರತೆ ಮತ್ತು ಅಪರಾಧ ಕ್ಷೇತ್ರದಲ್ಲಿ ಅಪರಾಧಶಾಸ್ತ್ರ (Criminology) ಸಂಶೋಧನಾ ಪ್ರಯೋಗಾಲಯಗಳು