ರಾಣಿ ಚನ್ನಮ್ಮ ಅಧ್ಯಯನ ಪೀಠ
ರಾಣಿ ಚನ್ನಮ್ಮ (15 ಅಗಸ್ಟ್ 1796-26 ಜನವರಿ 1831)
ರಾಣಿ ಚನ್ನಮ್ಮ ಅಧ್ಯಯನ ಪೀಠವು 2017-18ನೇ ಸಾಲಿನಲ್ಲಿ ಸ್ಥಾಪನೆಯಾಯಿತು.
ರಾಣಿ ಚನ್ನಮ್ಮ ಅಧ್ಯಯನ ಪೀಠವು, ರಾಣಿ ಚನ್ನಮ್ಮ ರವರ ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ನಿಖರ ಮಾಹಿತಿಗಳ ದಾಖಲಿಕರಣಕ್ಕಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು ಸ್ಥಾಪಿಸಲಾಯಿತು.
ಕಿತ್ತೂರು ರಾಣಿ ಚೆನ್ನಮ್ಮ (೧೭೭೮-೧೮೨೯) ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾ ನೀತಿಯನ್ನು ವಿರೋಧಿಸಿ, ಅವರು ಸಶಸ್ತ್ರ ಹೋರಾಟ ನಡೆಸಿದರು. ಅವರು ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯವನ್ನು ಕಾಪಾಡಲು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ.
ಚೆನ್ನಮ್ಮ ೧೭೭೮ ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ಜನಿಸಿದರು.
ಅವರು ಕುದುರೆ ಸವಾರಿ, ಖಡ್ಗ ಯುದ್ಧ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದರು.
೧೫ ನೇ ವಯಸ್ಸಿನಲ್ಲಿ, ಅವರು ಕಿತ್ತೂರಿನ ದೇಸಾಯಿ ಮಲ್ಲಸರ್ಜನನ್ನು ವಿವಾಹವಾದರು.
ಮಲ್ಲಸರ್ಜನು ಮರಣಹೊಂದಿದ ನಂತರ, ಅವರ ಮಗ ಶಿವಲಿಂಗ ರುದ್ರಸರ್ಜನು ಉತ್ತರಾಧಿಕಾರಿಯಾದನು.
ಬ್ರಿಟಿಷರು ದತ್ತು ಪುತ್ರನನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಲು ನಿರಾಕರಿಸಿದರು ಮತ್ತು ಕಿತ್ತೂರನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು.
ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಧರಿಸಿದರು ಮತ್ತು ೧೮೨೪ ರಲ್ಲಿ ಯುದ್ಧವನ್ನು ಪ್ರಾರಂಭಿಸಿದರು.
ಚೆನ್ನಮ್ಮನ ಸೈನ್ಯವು ಬ್ರಿಟಿಷ್ ಸೈನ್ಯವನ್ನು ಸೋಲಿಸಿತು, ಆದರೆ ಬ್ರಿಟಿಷರು ಬಲವರ್ಧನೆಗಳೊಂದಿಗೆ ಮರಳಿದರು.
ಎರಡನೇ ಯುದ್ಧದಲ್ಲಿ ಚೆನ್ನಮ್ಮ ಸೆರೆಯಾದರು ಮತ್ತು ಬೆಳಗಾವಿಯ ಬಳಿಯ ಬೈಲಹೊಂಗಲದಲ್ಲಿ ಸೆರೆಯಲ್ಲಿಡಲ್ಪಟ್ಟರು.
೧೮೨೯ ರಲ್ಲಿ ಅವರು ಸೆರೆಯಲ್ಲಿ ಮರಣಹೊಂದಿದರು.
ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರು.
ಅವರ ಧೈರ್ಯ ಮತ್ತು ಹೋರಾಟವು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಯಿತು.
ಅವರನ್ನು ಕರ್ನಾಟಕದಲ್ಲಿ ವೀರ ವನಿತೆಯಾಗಿ ಮತ್ತು ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ.
ಕಿತ್ತೂರಿನಂತಹ ದೇಶಿ ಸಂಸ್ಥಾನವು ವಸಾಹತುಶಾಹಿ ಆಡಳಿತ ವಿರುದ್ಧದ ಅಸಾಧಾರಣ ಹೋರಾಟ ನಡೆಸಿದ ಹಿನ್ನೆಲೆಯನ್ನು ಮನಗಂಡು ಭಾರತದ ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ರಾಷ್ಟ್ರ ಪ್ರೇಮದ ಮೂಲಕ ಭಾರತದ ಸಮಗ್ರತೆಯನ್ನು ಗಟ್ಟಗೊಳಿಸುವುದು ಮತ್ತು ಈ ಸಂಗತಿಯನ್ನು ಬಿಂಬಿಸುವುದು. ಕಿತ್ತೂರು ಸಂಸ್ಥಾನದ ಹೋರಾಟದ ಹಿನ್ನೆಲೆಯಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಮೇಲೆ ಅದು ಉಂಟು ಮಾಡಿದ ಪರಿಣಾಮಗಳನ್ನು ಪುನಾರೂಪಿಸುವುದು.
ವಿಜಯನಗರದ ನಂತರದ ಅವಧಿಯಲ್ಲಿ ಕಿತ್ತೂರು ರಾಜಪ್ರಭುತ್ವದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾಜೋ-ಸಾಂಸ್ಕೃತಿಕ, ಸಮಾಜೋ-ರಾಜಕೀಯ, ಸಮಾಜೋ-ಧಾರ್ಮಿಕ, ಸಮಾಜೋ - ಆರ್ಥಿಕ ಮತ್ತು ಸಮಾಜೋ-ಭಾಷಿಕ ಸಂಗತಿಗಳ ಮೇಲೆ ಆದ ವಿಶಿಷ್ಟ ಬದಲಾವಣೆಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವುದು.
| ಕ್ರ. ಸಂ. | ಹೆಸರು | ಪದನಾಮ |
|---|---|---|
| 1 | ಪ್ರೊ. ಸಿ ಎಂ ತ್ಯಾಗರಾಜ, ಗೌರವಾನ್ವಿತ ಕುಲಪತಿಗಳು, ಕಿ.ರಾ.ಚ.ವಿ.ಬೆಳಗಾವಿ | ಅಧ್ಯಕ್ಷರು |
| 2 | ಶ್ರೀ. ಶ್ರವಣ ನಾಯ್ಕ, ಕುಲಸಚಿವರು, ಕಿ.ರಾ.ಚ.ವಿ.ಬೆಳಗಾವಿ | ಸದಸ್ಯರು |
| 3 | ಡಾ. ಮಹಾಂತೇಶ ಕಂಬಾರ, ಸಿಂಡಿಕೇಟ್ ಸದಸ್ಯರು, ಕಿ.ರಾ.ಚ.ವಿ.ಬೆಳಗಾವಿ | ಸದಸ್ಯರು |
| 4 | ಶ್ರೀಮತಿ. ರೋಹಿಣಿ ಪಾಟೀಲ, ಗಣ್ಯ ವ್ಯಕ್ತಿಗಳು, ಚನ್ನಮ್ಮನ ಕಿತ್ತೂರು | ಸದಸ್ಯರು |
| 5 | ಶ್ರೀಮತಿ. ಸವಿತಾ ಹಟ್ಟಿಹೊಳಿ, ಗಣ್ಯ ವ್ಯಕ್ತಿಗಳು, ಖಾನಾಪುರ | ಸದಸ್ಯರು |
| 6 | ಪ್ರೊ. ಶಿವಾನಂದ ಗೊರನಾಳೆ, ಪ್ರಾಧ್ಯಾಪಕರು ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು, ಕಿ.ರಾ.ಚ.ವಿ.ಬೆಳಗಾವಿ | ಸದಸ್ಯರು |
| 7 | ಪ್ರೊ. ಎಲ್. ಪಿ. ಮಾರುತಿ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಇತಿಹಾಸ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ | ಸದಸ್ಯರು |
| 8 | ಶ್ರೀ ಯ ರು ಪಾಟೀಲ, ಹಿರಿಯ ಸಾಹಿತಿಗಳು, ಬೆಳಗಾವಿ. | ಸದಸ್ಯರು |
| 9 | ಪ್ರೊ. ಎಸ್. ಎಂ. ಗಂಗಾಧರಯ್ಯ, ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗ, ಕಿ.ರಾ.ಚ.ವಿ ಬೆಳಗಾವಿ. | ನಿರ್ದೇಶಕರು |
| 10 | ಪ್ರೊ. ಬಿ. ಎಸ್. ನಾವಿ, ಹಣಕಾಸು ಅಧಿಕಾರಿಗಳು, ಕಿ.ರಾ.ಚ.ವಿ.ಬೆಳಗಾವಿ | ಖಾಯಂ ಆಹ್ವಾನಿತರು |
ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರ ಸ್ನಾತಕೋತ್ತರ ಕೇಂದ್ರದ ಶಾಸ್ತ್ರೀಯ ಕನ್ನಡ ಅಧ್ಯಯನ ಶಾಲೆಯ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆ ಮತ್ತು ಸಾಹಿತ್ಯಗಳಲ್ಲಿ ಪಾಂಡಿತ್ಯ ಹೊಂದಿದ ಬಹುಮುಖ ಪ್ರತಿಭೆಯ ಖ್ಯಾತ ವಿದ್ವಾಂಸರಾಗಿದ್ದಾರೆ.
ಸಾಂಸ್ಕೃತಿಕ ವಿಕಾಸ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಅವರು 42 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2010ರಲ್ಲಿ "ಸಂಸತ್ತಿನ ಕಾರ್ಯವಿಧಾನಗಳಲ್ಲಿ ಕನ್ನಡ ಭಾಷೆ" ಎಂಬ ಶೀರ್ಷಿಕೆಯಡಿ ಒಂದು ಮಹತ್ವದ ಸಂಶೋಧನಾ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರ ಶೈಕ್ಷಣಿಕ ಸಾಧನೆಗೆ ಎರಡು ಪ್ರತಿಷ್ಠಿತ ಅಕಾಡೆಮಿ ಪುಸ್ತಕ ಪ್ರಶಸ್ತಿಗಳು ಲಭಿಸಿವೆ:
12ನೇ ಶತಮಾನದ ವಚನ (ಶರಣ) ಸಾಹಿತ್ಯದ ವಿಮರ್ಶಾತ್ಮಕ ವ್ಯಾಖ್ಯಾನಗಳನ್ನು ಒಳಗೊಂಡ 'ಶಬ್ದ ಪ್ರಮಾಣ' ಗ್ರಂಥಮಾಲೆಯ 27 ಸಂಪುಟಗಳನ್ನು ಅವರು ಸಂಪಾದಿಸಿದ್ದಾರೆ. ಜೊತೆಗೆ, ಕರ್ನಾಟಕ ರಾಜ್ಯ ವಿಧಾನಮಂಡಲದ ಕಾರ್ಯವಿವರಣೆಗಳಿಂದ ಪ್ರತಿಭಾವಂತ ಸಂಸದೀಯ ಪುಟಗಳ ಸದನದ ಚರ್ಚೆಗಳನ್ನು ಬಹುಸಂಪುಟಗಳಲ್ಲಿ ಸಂಪಾದಿಸಿದ್ದಾರೆ.
ಪ್ರಸ್ತುತ ಅವರು ISSN: 2347-4017 ಹೊಂದಿರುವ ವಿದ್ವಾಂಸರಿಂದ ಪರಿಶೀಲನೆಗೊಂಡ ಸಂಶೋಧನಾ ಪತ್ರಿಕೆ ʼಅಭಿಜಾತ ಕನ್ನಡʼ ದ ಪ್ರಧಾನ ಸಂಪಾದಕರಾಗಿದ್ದು, ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಪೂಜಾ ಪಿ. ಹಲ್ಯಾಳ್ ಅವರು ಕೆಆರ್‌ಸಿಯುಬಿ (ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ)ಯಲ್ಲಿ ಇಂಗ್ಲಿಷ್ ವಿಷಯದ ಸಹ ಪ್ರಾಧ್ಯಾಪಕರಾಗಿದ್ದಾರೆ. ಬಿ.ಎ ಹಾಗೂ ಎಂ.ಎ ಎರಡೂ ಹಂತಗಳಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಅವರು, "ಇಂದು ಸುಂದರೇಶನ್ ಅವರ ಕಾದಂಬರಿಗಳಲ್ಲಿನ ಸ್ತ್ರೀವಾದಿ ಚೇತನ" ಎಂಬ ವಿಷಯದಲ್ಲಿ ಶಿವಾಜಿ ವಿಶ್ವವಿದ್ಯಾಲಯ, ಕೊಲ್ಹಾಪುರದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಅವರ ಅಧ್ಯಯನ ಕ್ಷೇತ್ರಗಳಲ್ಲಿ ಲಿಂಗ ಅಧ್ಯಯನಗಳು (Gender Studies) ಹಾಗೂ ಭಾರತೀಯ ಇಂಗ್ಲಿಷ್ ಸಾಹಿತ್ಯ ಪ್ರಮುಖವಾಗಿವೆ. ಅವರು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯಿಂದ ಅನುದಾನಿತ ಒಂದು ಸಣ್ಣ ಸಂಶೋಧನಾ ಯೋಜನೆ (MRP)ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಪಿಎಂ-ಉಷಾ ಮೆರು (PM USHA MERU) ಯೋಜನೆಯಡಿ ಮಂಜೂರಾದ ಮತ್ತೊಂದು ಸಂಶೋಧನಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ, ಅವರು ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ. ಸಂಜೀವ್. ಗು. ಕುಲಕರ್ಣಿ ಅವರು ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಣಿ ಚನ್ನಮ್ಮ ಅಧ್ಯಯನ ಪೀಠದ ವತಿಯಿಂದ ವಿವಿಧ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ವಿಶೇಷ ಸರಣಿ ಉಪನ್ಯಾಸಗಳನ್ನು ಜರುಗಿಸಲಾಯಿತು.
ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು (ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ) ಮತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠ, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಸಹಯೋಗದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ವಿಜಯದ 200ನೇ ವರ್ಷದ ಸಂಸ್ಮರಣ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಆಚರಿಸಲಾಯಿತು.
ನವೆಂಬರ್ 14 ರಂದು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಪುತ್ಥಳಿಯ ಮುಂಭಾಗದಲ್ಲಿ ರಾಣಿ ಚನ್ನಮ್ಮನವರ ಜಯಂತಿಯನ್ನು ಆಚರಿಸಲಾಯಿತು.












































































ದಿನಾಂಕ: 24-02-2026 ರಂದು ರಾಣಿ ಚನ್ನಮ್ಮ ಅಧ್ಯಯನ ಪೀಠದ 2026-27 ನೇ ಸಾಲಿನ ಮೊದಲ ಸಲಹಾ ಸಮಿತಿ ಸಭೆಯನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಸದರಿ ಸಭೆಗೆ ಮಾನ್ಯ ಕುಲಪತಿಗಳು, ಮಾನ್ಯ ಕುಲಸಚಿವರು, ಹಣಕಾಸು ಅಧಿಕಾರಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್ ಸದಸ್ಯರು ಹಾಗೂ ಸಲಹಾ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.
ದಿನಾಂಕ: 10-08-2026 ರಂದು ಮಾನ್ಯ ಕಿತ್ತೂರು ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠಕ್ಕೆ ರೂ. 10 ಕೋಟಿಗಳ ಶಾಶ್ವತ ಅನುದಾನ ಮಂಜೂರು ಮಾಡುವ ಕುರಿತು ಪ್ರಸ್ತಾವಣೆ ಸಲ್ಲಿಸಲಾಯಿತು. ಸದರಿ ಸಭೆಗೆ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಪ್ರೊ. ನಾಗರತ್ನ ಪರಾಂಡೆ, ಹಿರಿಯ ಸಾಹಿತಿಗಳಾದ ಯ. ರು. ಪಾಟೀಲ ಹಾಗೂ ಪೀಠದ ಸಿಬ್ಬಂದಿಗಳೊಡನೆ ಹಾಜರಾಗಲಾಯಿತು.
ದಿನಾಂಕ: 31-08-2026 ರಂದು ರಾಣಿ ಚನ್ನಮ್ಮ ಅಧ್ಯಯನ ಪೀಠದ 2026-27 ನೇ ಸಾಲಿನ ದ್ವಿತೀಯ ಸಲಹಾ ಸಮಿತಿ ಸಭೆಯನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಸದರಿ ಸಭೆಗೆ ಮಾನ್ಯ ಕುಲಪತಿಗಳು, ಮಾನ್ಯ ಕುಲಸಚಿವರು, ಹಣಕಾಸು ಅಧಿಕಾರಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್ ಸದಸ್ಯರು ಹಾಗೂ ಸಲಹಾ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದಿಂದ ದಿನಾಂಕ: 01-09-2026 ರಿಂದ 05-09-2026ರ ವರೆಗೆ ಮಹಾಂತೇಶನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ "ಮಹಿಳಾ ಸ್ವಯಂ ರಕ್ಷಣಾ ತರಬೇತಿ ಶಿಬಿರ" ಆಯೋಜಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಟೈಕೊಂಡೋ, ಜುಡೋ ಹಾಗೂ ರೆಸ್ಕ್ಯೂ ತರಬೇತುದಾರರನ್ನು ಆಹ್ವಾನಿಸಿ ತರಬೇತಿ ನೀಡಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಸಂಯೋಜಕರಾದ ಡಾ. ಪೂಜಾ ಹಲ್ಯಾಳ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಗದೀಶ ಗಸ್ತಿ, ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರ್ಮಲಾ ಭಟ್ಟಲ್ ಹಾಗೂ ಅಧ್ಯಯನ ಪೀಠದ ಸಿಬ್ಬಂದಿ, ತರಬೇತುದಾದರು ಮತ್ತು ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದಿಂದ ದಿನಾಂಕ: 01-09-2026 ರಿಂದ 05-09-2026ರ ವರೆಗೆ ಕೆ ಎಲ್ ಇ ರಾಜಾಲಖಮನಗೌಡ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ "ಮಹಿಳಾ ಸ್ವಯಂ ರಕ್ಷಣಾ ತರಬೇತಿ ಶಿಬಿರ" ಆಯೋಜಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಟೈಕೊಂಡೋ, ಜುಡೋ ಹಾಗೂ ರೆಸ್ಕ್ಯೂ ತರಬೇತುದಾರರನ್ನು ಆಹ್ವಾನಿಸಿ ತರಬೇತಿ ನೀಡಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಸಂಯೋಜಕರಾದ ಡಾ. ಪೂಜಾ ಹಲ್ಯಾಳ, ಡಾ. ಜಗದೀಶ ಗಸ್ತಿ, ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜ್ಯೋತಿ ಕವಳೇಕರ್, ಪ್ರಾಧ್ಯಾಪಕರಾದ ಪ್ರಿಯಾ ಪುರಾಣಿಕ್ ಹಾಗೂ ಅಧ್ಯಯನ ಪೀಠದ ಸಿಬ್ಬಂದಿ, ತರಬೇತುದಾದರು ಮತ್ತು ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 15-09-2026 ರಂದು ಕೆ ಎಲ್ ಇ ಸಂಸ್ಥೆಯ ಕಾಲೇಜು ಶಿರಗುಪ್ಪಿ, ಶಿವಾನಂದ ಕಾಲೇಜು ಕಾಗವಾಡ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಅಥಣಿ, ಕೆ ಎಲ್ ಇ ಸಂಸ್ಥೆಯ ಪದವಿ ಕಾಲೇಜು ಅಥಣಿ, ಈ 04 ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ. ಜಿ. ಕೆಂಪಣ್ಣವರ, ಶ್ರೀ. ಯ. ರು. ಪಾಟೀಲ, ಡಾ. ಸುರೇಶ ಹನಗಂಡಿ, ಡಾ. ಆನಂದ ಜಕ್ಕಣ್ಣವರ ಇವರು ವಿಶೇಷ ಉಪನ್ಯಾಸಕರುಗಳಾಗಿ ಸದರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸದರಿ ಕಾರ್ಯಕ್ರಮಕ್ಕೆ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಸಂಯೋಜಕರಾದ ಡಾ. ಪೂಜಾ ಹಲ್ಯಾಳ, ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರುಗಳು ಹಾಗೂ ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 16-09-2026 ರಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ತೊರವಿ, ಸಹ್ಯಾದ್ರಿ ಕಾಲೇಜು ವಿಜಯಪುರ ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜು ತಿಕೋಟಾ, ಎಸ್. ಬಿ. ಕಲಾ ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ ಈ 04 ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹೆಚ್. ಬಿ. ಕೋಲಕಾರ, ಡಾ. ಕೆ.ಪಿ. ದೊಡಮನಿ, ಡಾ. ಚಂದ್ರಕಾಂತ ಕೋಳಿಗುಡ್ಡೆ, ಶ್ರೀ ಸಂತೋಷ ಉಂಡಾಡಿಯವರು ವಿಶೇಷ ಉಪನ್ಯಾಸಕರುಗಳಾಗಿ ಸದರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸದರಿ ಕಾರ್ಯಕ್ರಮಕ್ಕೆ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಸಂಯೋಜಕರಾದ ಡಾ. ಪೂಜಾ ಹಲ್ಯಾಳ, ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರುಗಳು ಹಾಗೂ ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 24-09-2026 ರಂದು ಬೆಳಗಿನ 10:00 ಗಂಟೆಗೆ ಚಾಮರಾಜನಗರ ವಿಶ್ವವಿದ್ಯಾಲಯ, ಚಾಮರಾಜನಗರದಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು, ಚಾಮರಾಜನಗರ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು, ಕುಲಸಚಿವರು ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಸಲಹಾ ಸಮಿತಿ ಸದಸ್ಯರಾದ ಡಾ. ಮಹಾಂತೇಶ ಕಂಬಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಕಲಾವಿದರಾದ ಡಾ. ರಾಮ ಮೂಲಗಿ, ಪ್ರೊ. ವಿಜಯಲಕ್ಷ್ಮೀ ತಿರ್ಲಾಪೂರ, ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಅಧ್ಯಯನ ಪೀಠದ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 24-09-2026 ರಂದು ಮಧ್ಯಾಹ್ನ 2:30 ರಿಂದ ಪರಿವರ್ತನ ಬ್ಯುಸಿನೆಸ್ ಸ್ಕೂಲ್, ಮೈಸೂರು ಇಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಮಾನ್ಯ ಕುಲಪತಿಗಳು ಹಾಗೂ ಸಿಂಡಿಕೇಟ್ ಮತ್ತು ಸಲಹಾ ಸಮಿತಿ ಸದಸ್ಯರಾದ ಡಾ. ಮಹಾಂತೇಶ ಕಂಬಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಕಲಾವಿದರಾದ ಡಾ. ರಾಮ ಮೂಲಗಿ, ಪ್ರೊ. ವಿಜಯಲಕ್ಷ್ಮೀ ತಿರ್ಲಾಪೂರ, ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 22-10-2026 ರಂದು ರಾಣಿ ಚನ್ನಮ್ಮ ಅದ್ಯಯನ ಪೀಠದಿಂದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ಕಿತ್ತೂರು ವಿಜಯೋತ್ಸವ-2026 ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ. ಮಹಾಂತೇಶ ಕಂಬಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಇತಿಹಾಸ ತಜ್ಞರು ಹಾಗೂ ಮಹಾರಾಣಿ ಕ್ಲಸ್ಟರ್ ಮಹಾವಿದ್ಯಾಲಯ, ಬೆಂಗಳೂರು. ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಇತಿಹಾಸ, ಕನ್ನಡ ಹಾಗೂ ಇಂಗ್ಲೀಷ ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಾಪಕರು, ಅತಿಥಿ ಭೋದಕರು, ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 23-10-2026 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅದ್ಯಯನ ಪೀಠದಿಂದ ಪಾಲ್ಗೊಳ್ಳಲಾಯಿತು. ಸದರಿ ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಪಿ. ಹೆಚ್ ಡಿ ಸಂಶೋಧನಾರ್ಥಿ, ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದಿನಾಂಕ: 25-10-2026 ರಂದು ಕಿತ್ತೂರು ಉತ್ಸವ-2026 ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅದ್ಯಯನ ಪೀಠದಿಂದ ಪಾಲ್ಗೊಳ್ಳಲಾಯಿತು. ಸದರಿ ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಪಿ. ಹೆಚ್ ಡಿ ಸಂಶೋಧನಾರ್ಥಿಗಳು, ಅಧ್ಯಯನ ಪೀಠದ ಸಿಬ್ಬಂದಿ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.
| ಕ್ರ. ಸಂ. | ಕಾರ್ಯಚಟುವಟಿಕಗಳ ವಿವರ | ದಿನಾಂಕ |
|---|---|---|
| 1 | ಕಿತ್ತೂರು ಅರಮನೆಯ ತದ್ರೂಪ ನಿರ್ಮಾಣ ಕುರಿತು ಪೂರ್ವಭಾವಿ ಮೊದಲನೆಯ ಸಭೆಯನ್ನು ಅಧ್ಯಯನ ಪೀಠದ ವತಿಯಿಂದ ಬೆಳಗಾವಿಯ ಕನ್ನಡ ಮತ್ತು ಸಂಸ್ರೃತಿ ಇಲಾಖೆ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ಕಿತ್ತೂರು ಅಭಿವೃಧ್ದಿ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಲಾಯಿತು. | 02-07-2021 |
| 2 | 'ಕಿತ್ತೂರು ರಾಣಿ ಚನ್ನಮ್ಮ ಸಂಶೋಧನ ಮಂಡಳ ತಲ್ಲೂರು ರಾಯನಗೌಡರ್ ಶೋಧಗಳು' ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ. ರಾಮಲಿಂಗೇಶ್ವರ ಶಿಕ್ಷಣ ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ. | 24-2-2021 |
| 3 | 'ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು 19ನೇ ಶತಮಾನದಲ್ಲಿ ವಸಾಹತುಶಾಹಿ ಆಡಳಿತಗಾರರ ವಿರುದ್ಧ ಕಿತ್ತೂರು ದಂಗೆಯನ್ನು ಪ್ರಬುದ್ಧಗೊಳಿಸುವ ಕುರಿತು ಅಮಟೂರು ಬಾಳಪ್ಪ ಅವರ ಬಗ್ಗೆ 90.4 ಎಫ್ಎಂ ಮೂಲಕ ವಿಶೇಷ ಚರ್ಚೆಯ ಸರಣಿಯನ್ನು ಪ್ರಸಾರ ಮಾಡಿತು. | 10-8-2021 |
| 4 | 'ಅಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು 19ನೇ ಶತಮಾನದಲ್ಲಿ ವಸಾಹತುಶಾಹಿ ಆಡಳಿತಗಾರರ ವಿರುದ್ಧ ಕಿತ್ತೂರು ದಂಗೆಯನ್ನು 90.4 ಎಫ್ಎಂ ಮೂಲಕ ಕಿತ್ತೂರು ಸಂಸ್ಥಾನದ ಇತಿಹಾಸದ ಕುರಿತು ವಿಶೇಷ ಚರ್ಚೆಯ ಸರಣಿಯನ್ನು ಪ್ರಸಾರ ಮಾಡಿತು. | 11-8-2021 |
| 5 | 'ಅಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು ಕಿತ್ತೂರು ಸಂಸ್ಥಾನದ ಜಾನಪದ ಸಾಹಿತ್ಯದ ಕುರಿತು 90.4 ಎಫ್ಎಂ ಮೂಲಕ 19ನೇ ಶತಮಾನದಲ್ಲಿ ವಸಾಹತುಶಾಹಿ ಆಡಳಿತಗಾರರ ವಿರುದ್ಧ ಕಿತ್ತೂರು ದಂಗೆಯನ್ನು ಪ್ರಬುದ್ಧಗೊಳಿಸುವ ಕುರಿತು ವಿಶೇಷ ಚರ್ಚೆಯ ಸರಣಿಯನ್ನು ಪ್ರಸಾರ ಮಾಡಿತು. | 12-8-2021 |
| 6 | 'ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು 19ನೇ ಶತಮಾನದಲ್ಲಿ ವಸಾಹತುಶಾಹಿ ಆಡಳಿತಗಾರರ ವಿರುದ್ಧ ಕಿತ್ತೂರು ದಂಗೆಯನ್ನು ಕುರಿತು ಕಿತ್ತೂರು ಚನ್ನಮ್ಮನ ಬಗ್ಗೆ 90.4 ಎಫ್ಎಂ ಮೂಲಕ ವಿಶೇಷ ಚರ್ಚೆಯ ಸರಣಿಯನ್ನು ಪ್ರಸಾರ ಮಾಡಿತು. | 13-8-2021 |
| 7 | ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು ಹಾಗೂ ಕೆ.ಎಲ್.ಇ ವೇಣು ದ್ವನಿ ಬಾನುಲಿ ಕೇಂದ್ರದ ಸಹಯೋಗ ದೊಂದಿಗೆ ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಒಂದು ವಿಶೇಷ ರೂಪಕ ಕಾರ್ಯ ಕ್ರಮವನ್ನಾಗಿ ನಿರ್ಮಾಣ ಮಾಡಲಾಯಿತು. | 14-08-2021 |
| 8 | ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠವು ಹಾಗೂ ಕೆ.ಎಲ್.ಇ ವೇಣು ದ್ವನಿ ಬಾನುಲಿ ಕೇಂದ್ರದ ಸಹಯೋಗ ದೊಂದಿಗೆ ಕಿತ್ತೂರು ಸಂಸ್ಥಾನದ ಲಾವಣಿ ಸಾಹಿತ್ಯ ಹಾಗೂ ಜನಪದ ಆಕರಗಳ ಕುರಿತು ಒಂದು ವಿಶೇಷ ರೂಪಕ ಕಾರ್ಯಕ್ರಮವನ್ನಾಗಿ ನಿರ್ಮಾಣ ಮಾಡಲಾಯಿತು. | 15-08-2021 |
| 9 | ಕಿತ್ತೂರು ಅರಮನೆಯ ತದ್ರೂಪ ನಿರ್ಮಾಣ ಕುರಿತು ಪೂರ್ವಭಾವಿ ಮೊದಲನೆಯಸಭೆಯನ್ನು ಅಧ್ಯಯನ ಪೀಠದ ವತಿಯಿಂದ, ಕೆ.ಎನ್.ವಿ. ಎಸ್. ಪದವಿ ಪೂರ್ವ ಮಹಾವಿದ್ಯಾಲಯ ಕಿತ್ತೂರಿನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಲಾಯಿತು. | 20-09-2021 |
| 10 | ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಕಿತ್ತೂರು ಸಂಸ್ಥಾನ ಮತ್ತು ನಿರ್ಲಕ್ಷಿತ ಯೋದರು ಎನ್ನ ಉಪ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಲಹಾ ಸಮಿತಿಯವರು ಸಭೆಯಲ್ಲಿ ತಿರ್ಮಾನವಾದಂತೆ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸಮಗ್ರ ಲಾವಣೆ ಸಂಪುಟವನ್ನು ಸಿದ್ದಪಡಿಸುವ ನಿಟ್ಟನಲ್ಲಿ ಕೇತ್ರಕಾರ್ಯವನ್ನು ಮಾಡಿ ಲಾವಣಿಗಳನ್ನು ಸಂಗ್ರಹಿಸಡಲಾಗಿದೆ. | 22-10-2021 |
| 11 | ರಾಷ್ಟ್ರೀಯ ವಿಚಾರ ಸಂಕಿರಣದ ಪತ್ರಿಕೆಗಳು ಪ್ರಕಟಣಿಗೆ ಸಿದ್ದವಿದ್ದು ಸದರಿ ಪುಸ್ತಕವನ್ನು ಮುದ್ರಣಕ್ಕೆ ನೀಡುವ ಹಂತಕ್ಕೆ ತಂದಿಡಲಾಗಿದೆ, ಸದರಿ ಪುಸ್ತಕವನ್ನು ಅದ್ಯಯನ ಪೀಠದಿಂದ ಪ್ರಕಟಿಸುವ ಆಲೋಚನೆಯಿದೆ. ಹೀಗೆ 2021-22 ನೇ ಸಾಲಿನಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ಕೇತ್ರ ಕಾರ್ಯಗಳು ನಡೆದಿವೆ ಎಂದು ತಿಳಿಸಲು ಸಂತೋಷವಾಗುತ್ತಿದೆ. | 22-11-2021 |
| 12 | ಸ್ವಾತಂತ್ರ್ಯಯದ ಅಮೃತ ಮಹೊತ್ಸವ ವರ್ಷದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಹಾಗೂ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಅಂಗವಾಗಿ ರಾಣಿ ಚೆನ್ನಮ್ಮ ಅಧ್ಯಯನ ಪೀಠದ ವತಿಯಿಂದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ವಿಷೇಶ ಉಪನ್ಯಾಸವನ್ನು ಆಯೋಜಿಸಲಾಗಿತ್ತು. | 24-01-2022 |
| 13 | ಕಿತ್ತೂರು ಚೆನ್ನಮ್ಮಳ ಕುರಿತು ಮೂರು ನಾಟಕಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದ ಸರಣಿ ಉಪನ್ಯಾಸ-1 ಅನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೇಸರ್ಗಿ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. | 12-07-2022 |
| 14 | ಕಿತ್ತೂರು ಮತ್ತು ಬೆಳವಡಿ ಸಂಸ್ಥಾನಗಳ ಚಾರಿತ್ರಿಕ ಒಳನೋಟಗಳ ಕುರಿತು ವಿಶೇಷ ಉಪನ್ಯಾಸ ಸರಣಿ ಉಪನ್ಯಾಸ ಎರಡನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಸಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯರಗಟ್ಟಿಯಲ್ಲಿ ಏರ್ಪಡಿಸಲಾಗಿತ್ತು. | 12-07-2022 |
| 15 | ಶಾಹಿ ಮತ್ತು ಕಿತ್ತೂರು ಸಂಸ್ಥಾನ ಎನ್ನುವ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ 3ನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿ ಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಲೋಕಾಪುರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. | 14-07-2022 |
| 16 | ಲಾವಣಿ ಸಾಹಿತ್ಯದಲ್ಲಿ ಕಿತ್ತೂರು ಚನ್ನಮ್ಮ ಎನ್ನುವ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ನಾಲ್ಕನ್ನು ರಾಣಿ ಚನ್ನಮ್ಮ ಅಧ್ಯಯನಪೀಠ ಹಾಗೂ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೀಳಿಗಿ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಯಿತು. | 14-07-2022 |
| 17 | ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಇತರ ಸ್ಥಾನಿಕ ಅರಸರುಗಳ ರಾಜತಾಂತ್ರಿಕ ಸಂಬಂಧಗಳು ಎನ್ನುವ ವಿಷಯದ ಕುರಿತಾಗಿ ವಿಶೇಷ ಸರಣಿ ಉಪನ್ಯಾಸ-5ನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವನಬಾಗೇವಾಡಿ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. | 15-07-2022 |
| 18 | ಭಾರತ ಸ್ವಾತಂತ್ರ್ಯ ಕದನ ಕಿತ್ತೂರು ಸಂಗ್ರಾಮ ಎನ್ನುವ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ 6ನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ಚನ್ನಮಲ್ಲಪ್ಪ ಚೆನ್ನವೀರ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೋಳಸಂಗಿ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. | 15-07-2022 |
| 19 | ಕಿತ್ತೂರು ಸಂಸ್ಥಾನದ ಸಂಶೋಧನೆಯಲ್ಲಿ ಹೊಸ ಅಂಶಗಳು ಎನ್ನುವ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ-7-ನ್ನು ರಾಣಿ ಚೆನ್ನಮ್ಮ ಅಧ್ಯಯನಪೀಠ ಹಾಗೂ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. | 29-07-2022 |
| 20 | ಕರ್ನಾಟಕವನ್ನ ಆಳಿದ ರಾಣಿಯರು ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠದ ವತಿಯಿಂದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. | 21-10-2022 |
| 21 | ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ್ ಮಹಾವಿದ್ಯಾಲಯ ಬೆಳಗಾವಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ರಾಣಿ ಚೆನ್ನಮ್ಮ ಅಧ್ಯಯನ ಪೀಠದ ವತಿಯಿಂದ ಒಟ್ಟು ಐದು ಪುಸ್ತಕಗಳನ್ನು ಹೊರ ತರಲಾಯಿತು. | 24-01-2023 |
| 22 | ಕಾಕತಿಯಲ್ಲಿ ಕಿತ್ತೂರು ಚೆನ್ನಮ್ಮ ಚಾರಿತ್ರಿಕ ವಿವರಗಳು ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ಒಂದನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠದ ವತಿಯಿಂದ ಏರ್ಪಡಿಸಲಾಗಿತ್ತು. | 18-08-2023 |
| 23 | ರಾಜ ಮಲ್ಲಸರ್ಜ ದೇಸಾಯಿ ಕೊನೆಯ ದಿನಗಳು ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ಎರಡನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಅರಭಾವಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 24-08-2023 |
| 24 | ಠಾಕರೆ ಆಡಳಿತ ನೀತಿ ಮತ್ತು ಕಿತ್ತೂರು ಸಂಸ್ಥಾನ ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ಮೂರನ್ನು ರಾಣಿ ಚೆನ್ನಮ್ಮ ಅಧ್ಯಯನಪೀಠ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮೂಡಲಗಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 24-08-2023 |
| 25 | ಡಾಕ್ಟರ್ ಎಂ ಎಂ ಕಲಬುರ್ಗಿ ಅವರ ಕಿತ್ತೂರು ಕುರಿತು ಶೋಧಗಳು ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ನಾಲ್ಕನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಕಲ್ಲೋಳಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 24-08-2023 |
| 26 | ತ್ರಿಪದಿಗಳಲ್ಲಿ ರಾಣಿ ಚೆನ್ನಮ್ಮನ ಇತಿರುತಗಳು ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ಐದನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾಷಾಪುರ್ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 26-10-2023 |
| 27 | ಕಿತ್ತೂರು ಅರಸರ ಜನೋಪಯೋಗಿ ಕಾರ್ಯಗಳು ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ 6ನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಕ್ಕೇರಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದೆ. | 26-10-2023 |
| 28 | ಕಿತ್ತೂರು ಉತ್ಸವ 2023ರ ಅಂಗವಾಗಿ ವಿದ್ವಾಂಸರು ಹಾಗೂ ಸಂಶೋಧಕರೊಡನೆ ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು ವಿಷಯದ ಮೇಲೆ ಸಂವಾದ ಕಾರ್ಯಕ್ರಮವು ಮುಂಜಾನೆ 10:30 ಕ್ಕೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪಂಪ ಮಹಾಕವಿ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. | 27-10-2023 |
| 29 | ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ ಏಳನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ್ ನಗರವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 29-02-2024 |
| 30 | ಕಿತ್ತೂರು ವಿಜಯೋತ್ಸವ ದ್ವಿಶತಮಾನೋತ್ಸವದ ಸಂದರ್ಭ ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ 8-ನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 01-03-2024 |
| 31 | ಕಿತ್ತೂರು ಸಂಸ್ಥಾನದ ದಾಖಲೆಗಳ ಪುನರಾಲೋಕನ ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸವನ್ನು ರಾಣಿ ಚನ್ನಮ್ಮ ಅಧ್ಯನ ಪೀಠ ಹಾಗೂ ಸ್ನಾತಕೋತ್ತರ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 07-03-2024 |
| 32 | ಸ್ವಾತಂತ್ರ ಸಂಗ್ರಾಮದಲ್ಲಿ ಕಿತ್ತೂರು ಸಂಸ್ಥಾನ ಒಂದು ಪುನರ್ಮಲ್ಲಿಕರಣ ಎಂಬ ವಿಷಯದ ಕುರಿತು ವಿಶೇಷ ಸರಣಿ ಉಪನ್ಯಾಸ (10) ಅನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾವರ್ಧಕ ಸಂಘ ಕು. ಮೋನಿಕ ಬಸವರಾಜ್ ಕಣ್ಣಿ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. | 07-03-2024 |
| 33 | ಕಿತ್ತೂರು ಸಂಗ್ರಾಮಕ್ಕೆ 200ರ ಸಂಭ್ರಮವನ್ನು ರಾಣಿ ಚೆನ್ನಮ್ಮ ಅಧ್ಯಯನ ಪೀಠ ಹಾಗೂ ಪ್ರಬುದ್ಧ ಭಾರತ ಇವರ ಸಹಯೋಗದೊಂದಿಗೆ ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. | 10-10-2024 |
| 34 | ಮಧ್ಯಾಹ್ನ 3:00 ಗಂಟೆಗೆ ಸಿಂಡಿಕೇಟ್ ಸಭಾಗಂಣದಲ್ಲಿ ರಾಣಿ ಚೆನ್ನಮ್ಮ ಅಧ್ಯಯನ ಪೀಠದ ಸಲಹಾ ಸಮಿತಿ ಸಭೆ ಕರೆಯಲಾಯಿತು. | 16-10-2024 |
| 35 | ಕಿತ್ತೂರು ಉತ್ಸವ 2024 ವಿಜಯ ಜ್ಯೋತಿ ಯಾತ್ರೆಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತ್ತು, ಜ್ಯೋತಿ ಯಾತ್ರೆಯನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿ ಕಾರ್ಯಕ್ರಮ ಕುರಿತು ಮಾನ್ಯ ಕುಲಪತಿಗಳು ಮಾತನಾಡಿದರು. | 17-10-2024 |
| 36 | ಕಿತ್ತೂರು ವಿಜಯೋತ್ಸವ 200 ಸಂಭ್ರಮಾಚರಣೆಯನ್ನು ರಾಣಿ ಚೆನ್ನಮ್ಮ ಅಧ್ಯಯನಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. | 25-10-2024 |
| 37 | ರಾಣಿ ಚನ್ನಮ್ಮ ಅಧ್ಯಯನ ಪೀಠದ ವತಿಯಿಂದ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. | 14-11-2024 |
| 38 | ಬೆಳಿಗ್ಗೆ 11:00 ಗಂಟೆಗೆ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಅಧ್ಯಯನ ಪೀಠದ ಸಲಹಾ ಸಮಿತಿ ಸಭೆ ಕರೆಯಲಾಯಿತು. | 04-02-2025 |
| 39 | ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ರಾಣಿ ಚನ್ನಮ್ಮವ ವಿರೋಧಿ ನಿಲುವುಗಳ ವಸಾಹತುಶಾಹಿ ಎಂಬ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಯಿತು. | 25-02-2025 |
| 40 | ಕಿತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (GFGC), ಕಿತ್ತೂರಿನಲ್ಲಿ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಪ್ರಿಯ ಪುರಾಣಿಕ್ ಅವರು "ರಾಣಿ ಚನ್ನಮ್ಮನವರ ಆದರ್ಶ: ಉದ್ಯಮಶೀಲತೆಯ ಮುಖಾಂತರ ಆತ್ಮನಿರ್ಭರತೆ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರು, ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. | 02-09-2025 |
| 41 | ರಾಮದುರ್ಗದ ಸಿ.ಎಸ್. ಬೆಂಬಳಗಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಎ.ಬಿ. ವಗ್ಗರ್ ಅವರು "ಕಿತ್ತೂರು ಹೋರಾಟದ ಪುನರ್ ಅವಲೋಕನ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. | 04-09-2025 |
| 42 | ಬೈಲಹೊಂಗಲದಲ್ಲಿರುವ ಕೆ.ಆರ್.ಸಿ.ಇ. ಸೊಸೈಟಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಎಸ್. ಎಂ. ಚಿಲ್ಲೂರು ಅವರು "ರಾಣಿ ಚನ್ನಮ್ಮನವರ ಧೈರ್ಯ ಮತ್ತು ತ್ಯಾಗ – ಇಂದಿನ ಯುವ ಜನತೆಗೆ ಸಂದೇಶ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. | 11-09-2025 |
| 43 | ಬೈಲಹೊಂಗಲದಲ್ಲಿರುವ ಕೆ.ಆರ್.ಸಿ.ಇ. ಸೊಸೈಟಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರೊ. ಜೆ. ಮಂಜಣ್ಣ ಅವರು "ಕಿತ್ತೂರು ಸಂಗ್ರಾಮ ಮತ್ತು ತಂತ್ರಜ್ಞಾನ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. | 12-09-2025 |
| 44 | ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ಪುತ್ಥಳಿಯ ಮುಂಭಾಗದಲ್ಲಿ ರಾಣಿ ಚನ್ನಮ್ಮ ರವರ ಜಯಂತಿಯನ್ನು ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ರವರು ಹಾಗೂ ಸಲಹಾ ಸಮಿತಿಯ ಸದಸ್ಯರಾದ ಶ್ರೀ. ಯ. ರು. ಪಾಟೀಲ ಉಪಸ್ಥಿತರಿದ್ದರು. | 14-10-2025 |
| ಅಂಚೆ ವಿಳಾಸ: | ರಾಣಿ ಚನ್ನಮ್ಮ ಅಧ್ಯಯನ ಪೀಠ, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ, ಬೆಳಗಾವಿ |
|---|