ಮಹಿಳಾ ಸಬಲೀಕರಣ ಕೋಶ

ಕೋಶದ ಪರಿಚಯ:


ಈ ಕೋಶವು ದಶಮಾನೋತ್ಸವ ಹೊತ್ಸಿಲಲ್ಲಿದೆ. ಗಡಿನಾಡಿನ ವಿಶ್ವವಿದ್ಯಾಲಯ ಮತ್ತು ಉನ್ನತಶಿಕ್ಷಣದ ಹೊಂಗಿರಣವಾದ ನಮ್ಮ ವಿಶ್ವವಿದ್ಯಾಲಯದ ಉತ್ಕøಷ್ಟ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕೋಶವು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆÉ. ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಸಮಾಜೋ-ಆರ್ಥಿಕ ದೃಷ್ಠಿಕೋನದಿಂದ ಮಹಿಳೆ ಸತ್ವಯುತವಾಗಿ ಬೆಳೆಯಬೇಕಿದೆ. ಸಾಹಿತ್ಯಕ ಮತ್ತು ಸಾಂಸ್ಕøತಿಕ ಆಯಾಮಗಳನ್ನೊಳಗೊಂಡಂತೆ, ಪ್ರಚಲಿತ ವಿದ್ಯಮಾನಗಳಿಗೆ ಗಟ್ಟಿನೆಲೆಯಾಗಿ, ಭಿನ್ನಧ್ವನಿಯಾಗಿ ತನ್ನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಈ ಕೋಶವು ಪೂರಕವಾಗಿದೆ

ದೃಷ್ಟಿಕೋನ- ಯೋಜನೆ- ಗುರಿ:


ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಹಿಳಾ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡುವ ಮೂಲಕ ಪೂರ್ವಾಗ್ರಹ ಪೀಡಿತ ಮನೋಸ್ಥಿತಿಯಿಂದ ಹೊರಬಂದು, ಹೊಸಯುಗಕ್ಕೆ ಅಭಿವೃದ್ಧಿಯ ಸಂಕ್ರಮಣಾವಸ್ಥೆಯ ನವಮನ್ವಂತರಕ್ಕೆ ತೆರೆದುಕೊಳ್ಳಬೇಕಿದೆ.
ಆತ್ಮಾವಲೋಕನ, ಆತ್ಮಗೌರವ ಮತ್ತು ಆತ್ಮಉತ್ಕರ್ಷದ ಹಾದಿಯಲ್ಲಿ ಮಹಿಳೆ ಊಧ್ರ್ವಮುಖಿಯಾಗಿ, ಚಲನಶೀಲ, ಸೃಜನಶೀಲ, ಕ್ರಿಯಾಶೀಲಳಾಗಿ ಕಾರ್ಯಪ್ರವೃತ್ತಳಾಗುವಂತೆ ಪ್ರೇರೇಪಿಸುವ ಹೊಣೆಗಾರಿಕೆಯಿದೆ. ಪರಾವಲಂಬಿತನದಿಂದ ನಿರ್ಗಮಿಸಿ, ಸಾಮಾಜೀಕರಣದ ಲಿಂಗತಾರತಮ್ಯ ಮತ್ತು ಅಸಮಾನತೆಗಳಿಂದ ಹೊರಬಂದು ಜಾಗತಿಕ ಆಯಾಮಗಳಲ್ಲಿ ಮುನ್ನಡೆಯ ಅಸ್ತಿತ್ವ ದಾಖಲಿಸುತ್ತ ನಿಶ್ಚಿತ ಗುರಿ ತಲುಪಲು ದಾಪುಗಾಲಿಡಬೇಕಿದೆ.
ಮಹಿಳಾ ಅಂತಃಸತ್ವ ಮತ್ತು ಪ್ರತಿಭಾ ಸಂಪನ್ಮೂಲಗಳ ಶ್ರೇಯೋಭಿವೃದ್ಧಿಗೆ ಶೈಕ್ಷಣಿಕವಾಗಿ ಶಕ್ತಿತುಂಬಬೇಕಿದೆ. ಸಾಮಾಜಿಕ ವೈರುಧ್ಯಗಳಿಂದ ಹಿಮ್ಮುಖವಾಗಿ ಚಲಿಸದೆ ಪ್ರಗತಿಯ ಹೊಸಭಾಷ್ಯ ಬರೆಯಬೇಕಿದೆ.
ಸಂವಿಧಾನ ದತ್ತ ಹಕ್ಕು ಮತ್ತು ಕರ್ತವ್ಯಗಳನ್ನು ಅನುಭೋಗಿಸಲು ಇರುವ ತೊಡಕುಗಳನ್ನು ಹಿಮ್ಮಟ್ಟಿ, ಮಾನವಿಕ ಮತ್ತು ಸಾಂಘಿಕ ಬದುಕಿನಲ್ಲಿ ಗೌರವಯುತವಾಗಿ ಜೀವಿಸುವಂತಾಗಲು ಸಕಾರಾತ್ಮಕ ದೃಷ್ಟಿಕೋನದಿಂದ ಪ್ರಗತಿಪರ ಚಿಂತಕಿಯಾಗಿ ಹೊರಹೊಮ್ಮಬೇಕಿದೆ. ನವಯುಗಕ್ಕೆ ಆಧುನಿಕ ಮಹಿಳೆ ದಿಟ್ಟ ಹೆಜ್ಜೆ ಇಡಬೇಕಿದೆ.

Top