ಸಮಾಜಕಾರ್ಯ ವಿಭಾಗ

ವಿಭಾಗದ ಕುರಿತು:
ಸಮಾಜಕಾರ್ಯ ವಿಭಾಗವು ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಕಿತ್ತೂರು ರಾಣಿ ಚನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೆಳಗಾವಿಯಲ್ಲಿ 2005 ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಮುಖ್ಯ ಆವರಣ ಮತ್ತು ವಿಜಯಪುರ ಹಾಗೂ ಜಮಖಂಡಿಯಲ್ಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಸಮಾಜಕಾರ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ಕೇಂದ್ರಗಳು ಅರ್ಹ ಅಧ್ಯಾಪಕ ವೃಂದ, ಆಚರಣೆ ಆಧಾರಿತ ಪಠ್ಯಕ್ರಮ, ಹೊಸ ಬೋಧನಾ ಕ್ರಮ ಹಾಗೂ ಸಮಾಜಪರ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಶೇಷ ಛಾಪನ್ನು ಮೂಡಿಸಿದೆ.


ಧ್ಯಯೋದ್ದೇಶ:


ಸಮಾಜಕಾರ್ಯ ವಿಭಾಗವು ವೃತ್ತಿಪರ ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರಗಳಲ್ಲಿ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಸಮುದಾಯ ಸಂಘಟನೆಯ ವಿಸ್ತರಣಾ ಕಾರ್ಯಗಳ ಮೂಲಕ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕ್ಷೇಮವನ್ನು ಉತ್ತೇಜಿಸುವುದರ ಮೂಲಕ ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರವಾಗಿ ಬೆಳೆಯುವ ಉದ್ದೇಶವನ್ನು ಹೊಂದಿದೆ.

ಘನೋದ್ದೇಶ:


· ಸಮಾಜಕಾರ್ಯ ಶಿಕ್ಷಣ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಆಚರಣೆಗಳನ್ನು ಅಭಿವೃದ್ಧಿ ಪಡಿಸುವುದು;
· ಉತ್ಕೃಷ್ಟ, ಸಂಯೋಜಿತ ಸಮಾಜಕಾರ್ಯ ಸಂಶೋಧನೆಯನ್ನು ಅಭಿವೃದ್ಧಿಪಡಿಸುವುದು;
· ಅವಶ್ಯಕತೆ ಆಧಾರಿತ, ಗುಣಮಟ್ಟದ ಪ್ರಕಟಣೆ ಹಾಗೂ ವಿಸ್ತರಣಾ ಸೇವೆಗಳನ್ನು ಕೈಗೊಳ್ಳುವುದು; ಹಾಗೂ
· ಸುಸ್ಥಿರತೆ, ನ್ಯಾಯ, ಸಮಾನತೆ ಹಾಗೂ ಮಾನವಿಯ ವಿಕಾಸವನ್ನು ಖಚಿತಪಡಿಸಲು ಪ್ರಗತಿಪರ ವ್ಯಕ್ತಿಗಳು ಹಾಗೂ ಸಂಸ್ಥೆಗಳೊಂದಿಗೆ ಪಾಲುಗಾರಿಕೆ ಸ್ಥಾಪಿಸುವುದು.Top