ಗ್ರಂಥಾಲಯ ಹಾಗು ವಿಜ್ಞಾನ ಮಾಹಿತಿ ವಿಭಾಗ

ವಿಭಾಗದ ಕುರಿತು:

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಆನ್ವಯಿಕ ವಿಜ್ಞಾನ ಶಾಲೆಗೆ ಸಂಬಂಧಿಸಿದೆ. ಶಾಲೆಯ ಪರಿಕಲ್ಪನೆಯು ಬೋಧನಾ ಮತ್ತು ಕಲಿಕಾ ಪದ್ಧತಿಯಲ್ಲಿ ಅಂತರ್ ಶಾಸ್ತ್ರೀಯ ಸಂಪರ್ಕದ ಮಹತ್ವವನ್ನು ಸಾರಿ ಹೇಳುತ್ತದೆ. ಶಾಲೆಯಲ್ಲಿರುವ ವಿವಿಧ ಶಾಸ್ತ್ರಗಳಲ್ಲಿ ಪರಸ್ಪರಾವಲಂಬಿ ತತ್ವವನ್ನು ಮತ್ತು ಪರಸ್ಪರ ಕೊಡುಕೊಳ್ಳುವಿಕೆಯ ಮಹತ್ವವನ್ನು ಪ್ರತಿ ಪಾದಿಸುತ್ತದೆ. ಉದಾಹರಣೆಗೆ ಪ್ರಯೋಗಾಲಯ ಸಿಬ್ಬಂದಿಯ ನೈಪುಣ್ಯ ಮತ್ತು ಸಂಪನ್ಮೂಲಗಳಲ್ಲಿ ಸಹಕಾರ ಮತ್ತು ಸಮನ್ವಯ ಅಗತ್ಯವಾದದ್ದು ಶಾಲೆಯಲ್ಲಿರುವ ವಿವಿಧ ವಿಭಾಗಗಳಲ್ಲಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಆನ್ವಯಿಕ ನೈಪುಣ್ಯತೆಯನ್ನು ಬಳಸಿಕೊಳ್ಳಬಹುದಾಗಿದೆ.

ಧ್ಯಯೋದ್ದೇಶ:

“ ರಾಷ್ಟ್ರದಲ್ಲಿ ಮಾಹಿತಿ ನಿರ್ವಹಣಾ ಅಗತ್ಯಗಳನ್ನು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವೃತ್ತಿಪರರು ಹೊರಹೊಮ್ಮಿಸುವಂತೆ ಮಾಡುವದು”.

ಘನೋದ್ದೇಶ:


1. ಬದಲಾಗುತ್ತಿರುವ ವಾತಾವರಣದಲ್ಲಿ ಮೂಲಭೂತ LIS ಪಠ್ಯಕ್ರಮಕ್ಕೆ ಹೊಂದಿಕೊಳ್ಳುವದು.
2. LIS ಕೋರ್ಸಿನಲ್ಲಿ ICT ಉಪಕರಣಗಳನ್ನು ಮತ್ತು ತಂತ್ರಜ್ಞಾನಗಳನ್ನು ಅಳವಡಿಸುವದು.
3. LIS ಶಿಕ್ಷಣ ಮತ್ತು ಸಂಶೋಧನೆಗೆ ಗುಣಮಟ್ಟವನ್ನು ತಂದುಕೊಡುವದು.
4. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಮುಂಚುಣಿ ಕ್ಷೇತ್ರಗಳ ಕಡೆಗೆ ಗಮನ ಹರಿಸುವದಕ್ಕಾಗಿ LIS ವೃತ್ತಿಪರರನ್ನು ತಯಾರಿಸುವದು, ತರಬೇತುಗೊಳಿಸುವದು.
5. ತರಬೇತಿ, ವಿಚಾರಕಮ್ಮಟ, ಸೆಮಿನಾರಗಳನ್ನು ಏರ್ಪಡಿಸಿ LIS ವೃತ್ತಿಪರರನ್ನು ತರಬೇತುಗೊಳಿಸುವದು.


Top