ವಾಣಿಜ್ಯಶಾಸ್ತ್ರ ವಿಭಾಗ

ವಿಭಾಗದ ಬಗ್ಗೆ:
ವಾಣಿಜ್ಯಶಾಸ್ತ್ರ ವಿಭಾಗವು 1982 ರಲ್ಲಿ ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದಲ್ಲಿ ಸ್ಥಾಪಿತವಾಯಿತು. ಆನಂತರ 1994 ರಲ್ಲಿ ಭೂತರಾಮನಹಟ್ಟಿಯ ಕ್ಯಾಂಪಸ್ಸಿಗೆ ಸ್ಥಳಾಂತರಗೊಂಡಿತು. ವಾಣಿಜ್ಯಶಾಸ್ತ್ರದಲ್ಲಿ ಈ ವಿಭಾಗವು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಯನ್ನು ಕೊಡುತ್ತದೆ. ವಾಣಿಜ್ಯಶಾಸ್ತ್ರದಲ್ಲಿ ನೈಪುಣ್ಯ ಮತ್ತು ಪರಿಣತಿಯನ್ನು ಪಡೆದ ಬೋಧಕವರ್ಗವು ಈ ವಿಭಾಗದಲ್ಲಿ ಇದೆ. ಸಮಕಾಲೀನ ವ್ಯವಹಾರದ ವಿಷಯಗಳಿಗೆ ಸಂಬಂಧಿಸಿದಂತೆ ಆಳವಾದ ಅರಿವು ಉಂಟು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಒತ್ತು ಕೊಡಲಾಗುತ್ತಿದೆ. ಈ ವಿಭಾಗದಲ್ಲಿರುವ ವಿಶಿಷ್ಟವಾದ ಮತ್ತು ಮೇಧಾವಿಗಳಾದ ಪ್ರಾಧ್ಯಾಪಕರು ಪರಿಕಲ್ಪನೆಗಳ ಕಲಿಕೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ವಿದ್ಯಾರ್ಥಿಗಳ ವೈಯಕ್ತಿಕ, ಆತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯ ಬಗ್ಗೆ ವಿಶೇಷ ಗಮನ ಹರಿಸುತ್ತದೆ. ಭೂತನಾನ್ವೇಷಣೆಯ ಹಾಗೂ ಸಕ್ಷಮ ಉದ್ಯೋಪತಿಗಳಾಗುವಂತೆ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿ ಯಶಸ್ವಿಗಳಾಗುವುದಕ್ಕಾಗಿ ನಮ್ಮ ವಿಭಾಗವು ಸತತ ಕಾರ್ಯಪ್ರವೃತ್ತವಾಗಿದೆಯಲ್ಲದೇ, ಸರ್ವ ರೀತಿಯ ಯತ್ನಗಳನ್ನು ಮಾಡುತ್ತಲಿದೆ. ಇಲ್ಲಿಯವರೆಗೆ ಈ ವಿಭಾಗದಿಂದ 2500 ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು ಹೊರಬಂದಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳಲ್ಲಿ ಮಹಾವಿದ್ಯಾಲಯಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸ್ವತಂತ್ರವಾಗಿ ವ್ಯವಹಾರ ನಿರ್ವಹಿಸಿಕೊಂಡು ಹೋಗುವಲ್ಲಿ ಪ್ರಮುಖವಾದ ಸ್ಥಾನಗಳಲ್ಲಿದ್ದಾರಲ್ಲದೇ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಧ್ಯೇಯೋದ್ದೇಶ:

ವಾಣಿಜ್ಯಶಾಸ್ತ್ರದ ಅಧ್ಯಯನದಲ್ಲಿ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಯ ಕೇಂದ್ರವಾಗಿ ಹೊರಹೊಮ್ಮುವದು

ಘನೋದ್ದೇಶ:

1. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಮತ್ತು ಸಮಗ್ರವಾದ ವಾಣಿಜ್ಯಶಾಸ್ತ್ರದ ಶಿಕ್ಷಣವನ್ನು ಕೊಡುವದು.
2.ಅಗತ್ಯವಾದ ವ್ಯವಹಾರಿಕ ಮತ್ತು ತಾಂತ್ರಿಕ ಕೌಶಲ್ಯಗಳ ಮೂಲಕ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವದು.
3.ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಗುಣಗಳನ್ನು ಬೆಳೆಸುವದು.
4.ವಾಣಿಜ್ಯ, ಬ್ಯಾಂಕಿಂಗ ಮತ್ತು ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸಮಕಾಲೀನ ಸಂಗತಿಗಳ ಕುರಿತು ಸಂಶೋಧನೆಯನ್ನು ಕೈಗೊಳ್ಳುವುದು.


Top