Hide Main content block

ಗೌರವಾನ್ವಿತ ಕುಲಪತಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಪ್ರೊ. ಸಿ. ಎಂ. ತ್ಯಾಗರಾಜ
ಕುಲಪತಿಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಪ್ರೊ. ಸಿ. ಎಂ. ತ್ಯಾಗರಾಜ, ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾಗಿರುತ್ತಾರೆ. ಅವರು ವಿದ್ಯಾರ್ಥಿ ಬಳಗಕ್ಕೆ ೩೬ ವರ್ಷಗಳ ಶ್ರೀಮಂತ ಅನುಭವದ ಬೋಧನೆಯನ್ನು ಹೊಂದಿದ್ದಾರೆ. ಅವರ ಆಡಳಿತಾತ್ಮಕ ಸಾಮರ್ಥ್ಯಗಳು ಬೆಂಗಳೂರು ನಗರ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಗಳಿಂದ ಅಲ್ಲದೇ ಕುವೆಂಪು ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಕ್ರಮಗಳಲ್ಲಿ ಸುಧಾರಣೆ ತಂದಿರುವುದಕ್ಕಾಗಿ ಗುರುತಿಸಲ್ಪಟ್ಟಿವೆ.

ಅವರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಉನ್ನತಿಕರಿಸುವಲ್ಲಿ ಶ್ರಮಿಸಿದ್ದಾರೆ. ಮುಂದುವರೆದು, ಕೈಗಾರಿಕಾ ತರಬೇತಿ ಸಂಸ್ಥೆಗಳ ಸುಧಾರಣೆ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಯುವಜನರಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಇವರ ಸೇವೆಯು ಉಲ್ಲೇಖನೀಯವಾಗಿದೆ.

ಪ್ರೊ. ಸಿ. ಎಂ. ತ್ಯಾಗರಾಜರವರು ೧೩ ಪುಸ್ತಕಗಳು ಹಾಗೂ ೭೨ ಲೇಖನಗಳನ್ನು ಬರೆದಿದ್ದಾರೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣೆ ವಿಭಾಗದಲ್ಲಿ ೧೧ ಸಂಶೋಧನಾರ್ಥಿಗಳು ಸಂಶೋಧನೆ ಕೈಗೊಂಡಿರುತ್ತಾರೆ. ಇಂಗ್ಲೆಂಡ ಸರ್ಕಾರದ ಆಮಂತ್ರಣದ ಮೇರೆಗೆ ಇವರು ‘ಉದ್ಯೋಗಕ್ಕಾಗಿ ಇಂಗ್ಲೀಷ ಭಾಷಾ ಕೌಶಲ್ಯ ಎಂಬ ದುಂಡು ಮೇಜಿನ ಚರ್ಚೆಗೆ ವಿಚಾರಗಳನ್ನು ಮಂಡಿಸಲು ಇವರನ್ನು ಆಹ್ವಾನಿಸಲಾಗಿರುತ್ತದೆ. ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ಭಾಗವಹಿಸಿದ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ವ್ಯಾಪಾರ ಕ್ಷೇತ್ರದ ಸಮಸ್ಯೆಗಳು, ಉದ್ಯೋಗಗಳ ನಿರ್ವಹಣೆ, ಪರಿಸರದ ವಿವಿಧ ಆಯಾಮಗಳು ಹಾಗೂ ಅರ್ಥಶಾಸ್ತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.

ಅವರು ವಿದ್ಯಾರ್ಥಿ ಬಳಗದಿಂದ ವ್ಯಾಪಕವಾಗಿ ಪ್ರೀತಿಸಲ್ಪಡುತ್ತಾರೆ ಹಾಗೂ ಅವರೊಡನೆ ವಿದ್ಯಾರ್ಥಿಗಳ ಹಾಗೂ ಸಮಾಜಕ್ಕೆ ಕೆಲಸ ಮಾಡಿದ ಎಲ್ಲರಿಂದಲೂ ಮೆಚ್ಚುಗೆ ಪಡೆದಿರುತ್ತಾರೆ. ಇವರು ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಕಾರ್ಯನಿರ್ವಹಿಸಿ ಹಾಗೂ ಉದ್ಯೋಗ ಯೋಗ್ಯ, ಯುವ ವಿದ್ಯಾರ್ಥಿಗಳನ್ನು ರೂಪಾಂತರಗೊಳ್ಳುತ್ತಿರುವ ಜಗತ್ತಿನಲ್ಲಿ ಉದ್ಯೋಗಸ್ಥರನ್ನಾಗಿ ಮಾಡುವ ದೂರದೃಷ್ಟಿಯನ್ನು ಹೊಂದಿದ್ದಾರೆ.

Top