Hide Main content block

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,ಬೆಳಗಾವಿ


The Special Officer
Prof. S B. Akash
E-mail : scstcell@rcub.ac.in

ಕಾರ್ಯಸ್ವರೂಪ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾರಂಭದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರಯುವ ಎಲ್ಲ ಸೌಲಭ್ಯಗಳನ್ನು ಘಟಕದ ಮುಖಾಂತರ ಒದಗಿಸಲಾಗುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಪ್ರತಿ ವರ್ಷ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬ್ರಹ್ಮಪುತ್ರ ಮತ್ತು ಕೃಷ್ಣಾ ವಸತಿ ನಿಲಯದಗಳಲ್ಲಿ ಪ್ರವೇಶಾತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸದರಿ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದು ವಿದ್ಯಾರ್ಥಿಗೆ ರೂ. 1500/- ರಂತೆ ಬೋಜನಾ ವೆಚ್ಚವೆಂದು ಮುಂಗಡವಾಗಿ ವಿಶ್ವವಿದ್ಯಾಲಯದಿಂದ ಭರಿಸಿ ನಂತರ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರಿಂದ ವಿಶ್ವವಿದ್ಯಾಲಯಕ್ಕೆ ಮರು ಹೊಂದಾಣಿಕೆ ಮಾಡಲಾಗುತ್ತದೆ. ಮತ್ತು ಎಸ್.ಸಿ.ಪಿ/ಟಿ.ಎಸ್.ಪಿ ಕ್ರಿಯಾಯೋಜನೆಯಡಿಯಲ್ಲಿ ಬ್ರಹ್ಮಪುತ್ರ ಮತ್ತು ಕೃಷ್ಣಾ ವಸತಿ ನಿಲಯಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೋಜನಾ ವೆಚ್ಚವೆಂದು ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ರೂ 600/- ರಂತೆ ವಿತರಿಸಲಾಗುತ್ತಿದೆ. ಪಿ.ಎಚ್‍ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶಿಷ್ಯವೇತನ ಸಾದಿಲ್ವಾರು ವೆಚ್ಚ ಪ್ರಂಬಂಧ ಮಂಡನೆಗಾಗಿ ಹಣಕಾಸಿನ ನೆರವು ನೀಡಲಾಗುತ್ತಿದೆ, ಆಯಾ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಕಾರ್ಯಕ್ರಮಗಳನ್ನು ಘಟಕದಿಂದ ನಡೆಸಲಾಗುತ್ತಿದೆ.

ವಿಭಾಗದ ಕಾರ್ಯನಿರ್ವಾಹಕರು:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಖ್ಯ ಆವರಣದ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳ ಶಿಷ್ಯವೇತನ ಕಾರ್ಯಸ್ವರೂಪವು ವಿಶೇಷಾಧಿಕಾರಿಗಳು ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ಘಟಕ, ಸ್ನಾತಕೋತ್ತರ ವಿಭಾಗಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ಇವರ ಸಂಯೋಜನೆಯಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.
ಕ್ರ.ಸಂ ಕಾರ್ಯನಿರ್ವಹಿಸುವವರ ಹೆಸರು ಹುದ್ದೆv 01 ಡಾ. ಓ ಮಾರಣ್ಣ ವಿಶೇಷಾದಿಕಾರಿಗಳು ಪ.ಜಾ/ಪ.ಪಂ ಘಟಕ
02 ಭೀಮಪ್ಪ ವಾಜಂತ್ರಿ ಪ್ರಥಮ ದರ್ಜೆ ಸಹಾಯಕರು
03 ಸುಮಂತ ಹಂಚಿನಮನಿ ದ್ವಿತಿಯ ದರ್ಜೆ ಸಹಾಯಕರು
04 ಮಂಜುನಾಥ ಬ. ಹುಣಶೀಕಟ್ಟಿ ದ್ವಿತಿಯ ದರ್ಜೆÀ ಸಹಾಯಕರು
05 ಗೀತಾ ಪೋತದಾರ ಸಿಪಾಯಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕ :

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆರಂಭದೊಂದಿಗೆ ಪ.ಜಾ/ಪ.ಪಂಗಡ ಘಟಕವು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಗೊಂಡಿರುತ್ತದೆ. ಗಡಿಭಾಗದ ಜಿಲ್ಲೆಗಳ ಪ.ಜಾ/ಪ.ಪಂಗಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಶಾಕಿರಣವಾಗಿದೆ. ಪ.ಜಾ/ಪ.ಪಂಗಡ.ಘಟಕವು ವಿದ್ಯಾರ್ಥಿಗಳಿಗೆ ಸರಕಾರದಿಂದ ಲಭ್ಯವಾಗುವ ಶೀಷ್ಯವೇತನ, ಇನ್ನಿತರ ಸೌಲಭ್ಯಗಳನ್ನು ಹಾಗೂ ವಿಶ್ವವಿದ್ಯಾಲಯದಿಂದ ವಿಶೇಷ ಪ್ರಾಶಸ್ತ್ಯ ನೀಡಿ ಪ.ಜಾ/ಪ.ಪಂಗಡ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರಮಿಸುತ್ತಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ, ಸರ್ವತೋಮುಖ ಏಳ್ಗೆಗಾಗಿ-ಶೈಕ್ಷಣಿಕ ಸೌಲಭ್ಯಗಳನ್ನು, ವಸತಿನಿಲಯಗಳ ಸೌಲಭ್ಯಗಳನ್ನು, ಉದ್ಯೋಗ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಗಳನ್ನು ವಿಶ್ವವಿದ್ಯಾಲಯದಿಂದ ಆಯೋಜಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಘಟಕದಿಂದ ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳು::

1. ಆಯಾ ವಿಭಾಗಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿನಿಲಯದಲ್ಲಿ ಪ್ರವೇಶಗಳನ್ನು ನೀಡಲಾಗುತ್ತಿದೆ.
2. ವಿದ್ಯಾರ್ಥಿಗಳಿಗೆ ಲಭ್ಯವಿರುವ ಸರ್ಕಾರದಿಂದ ಶಿಷ್ಯವೇತನವನ್ನು ಹಾಗೂ ವಿಶ್ವವಿದ್ಯಾಲಯವು ಮೀಸಲಿಟ್ಟ ಆರ್ಥಿಕ ಸಹಾಯವನ್ನು ಒದಗಿಸಿಕೊಡುವಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ವಿಶೇಷ ಪ್ರಾಶಸ್ತ್ಯ ನೀಡಿ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳÀ ಅಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದಾರೆ.

ವಿಭಾಗದ ಕುರಿತು

ಹೊಸ ಅಧಿಸೂಚನೆಗಳು

Click Here to submit updated basic information about your college.


.


.


Download annexure-I

Top