ಇಂಡಿಯನ್ ಯೂತ್ ರೆಡ್ ಕ್ರಾಸ್

ಕೋಶದ ನೋಟ:



ಮಾನವನ ಇತಿಹಾಸದಲ್ಲಿ ಒಂದು ಕುತೂಹಲಕರ ಅಧ್ಯಯ ಜೂನ್ 24 1859ರಂದು ಸಲ್ಫೇರಿನೊ ಯುದ್ದ ಜರುಗಿದ ಅಮಾನವಿಯ ಯುದ್ಧ ರಣರಂಗದಲ್ಲಿ ರೆಡ್ ಕ್ರಾಸ್ ಜನನವಾಯಿತು. ಒಂದು ಕಡೆ ಫ್ರಾನ್ಸ್ ಮತ್ತು ಇಟಲಿ ಸಂಯುಕ್ತ ಸೈನ್ಯ, ಇನ್ನೊಂದು ಕಡೆ ಆಸ್ಟ್ರೀಯ ಸೈನ್ಯ ಸುಮಾರು 15 ಗಂಟೆಗಳ ಕಾಲ ಮೂರು ಲಕ್ಷಕ್ಕೂ ಅಧಿಕ ಸೈನಿಕರು ಯುದ್ಧ ರಂಗದಲ್ಲಿ ಮುಖಾಮಖಿಯಾಗಿ ಯುದ್ಧ ಮಾಡಿದರು. ಘೋರ ಯುದ್ಧ ಸಮಾಪ್ತಿಗೊಂಡಾಗ ಮೃತ ಮತ್ತು ಗಾಯಗೊಂಡ ಸೈನಿಕರು ಆ ರಣರಂಗದ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ದಿನಗಳಲ್ಲಿ ಕೆಲವೇ ಆಸ್ಪತ್ರೆಗಳು ಹಾಗು ವೈದ್ಯರು ಆ ಸೈನ್ಯಗಳಿಗೆ ಲಭ್ಯವಿದ್ದರು. ಹಾಗಾಗಿ ಗಾಯಾಳು ಸೈನಿಕರನ್ನು ಉಪಚರಿಸಲಿಕ್ಕಾಗಿ ಅಥವಾ ಚಿಕಿತ್ಸೆ ಮಾಡುವುದಕ್ಕಾಗಲಿ ವೈದ್ಯಕೀಯ ಸಹಾಯ ಅಲ್ಪಪ್ರಮಾಣದಲ್ಲಿತ್ತು.
ಹೆನ್ರಿ ಡ್ಯುನಾಂಟ್‍ರವರು ವ್ಯಾಪಾರದ ಉದ್ದೇಶದ ಮೇಲೆ ಅಲ್ಜೀರಯಾದಲ್ಲಿ ಕಾರ್ನ್‍ಮಿಲ್ಸ್‍ಗಳನ್ನು ಪ್ರಾರಂಭಿಸಲು ನೆಪೋಲಿಯನ್ ದೊರೆಯಿಂದ ಅನುಮತಿ ಪಡೆಯುವುದಕ್ಕಾಗಿ ಪ್ರಯಾಣ ಬೆಳೆಸಿದರು. ತಾನು ಸಾಗುತ್ತಿದ್ದ ಮಾರ್ಗದಲ್ಲಿ ಭೀಕರವಾದ ರಣರಂಗವನ್ನು ನೋಡಿದರು. ವೈದ್ಯಕೀಯ ಉಪಚಾರ ಮಾಡದೇ ಇರುವ ಗಾಯಗೊಂಡ ಸೈನಿಕರು ನರಳುತ್ತಿರುವ ದೃಶ್ಯ ಗಮನಿಸಿದರು.
ಸಾಯಂಕಾಲದ ಹೊತ್ತಿಗೆ ಡ್ಯುನಾಮಟ್‍ರು ವ್ಯಾಪಾರದ ಉದ್ಧೇಶವನ್ನು ಮರೆತು ಯುದ್ಧದ ಗಾಯಳುಗಳಗೆ ತನ್ನಿಂದಾಗುವ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಸ್ಥಳೀಯ ಗ್ರಾಮಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತನಗಾಡಿಯಲ್ಲಿ ಹಾಕಿಕೊಂಡು ಕ್ಯಾಸ್ಲಿಗ್ಲಿಯೋನ್ ಪ್ರದೇಶಕ್ಕೆ ಸಾಗಿಸಿದರು. ಅವರನ್ನು ಖಾಸಗಿ ಮನೆಗಳಲ್ಲಿ, ಚರ್ಚ್‍ಗಳಲ್ಲಿ ಆಶ್ರಮಗಳಲ್ಲಿ ಹಾಗೂ ಸೇನಾ ಪಾಳ್ಯಗಳಲ್ಲಿ ಇರಿಸಿದನು ಕೂಡಲೇ ಗಾಯಗೊಂಡ ಎಲ್ಲಾ ದೇಶದ ಸೈನಿಕರಿಗೆ ವೈದ್ಯಕೀಯ ನೆರವು ಒದಗಿಸಲು ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಿದನು.
ದಿನಗಳೆದಂತೆ ಇಂತಹ ಭಯಂಕರ ಯುದ್ಧವನ್ನು ಸಹ ಜನ ಮರೆತರು. ಆದರೆ ಡ್ಯುನಾಂಟ್ ಅದನ್ನು ಮರೆಯಲಿಲ್ಲ. ಆ ಬೀಕರ ದೃಶ್ಯವು ಆತನ ಮನಸ್ಸಿನಲ್ಲಿ ಪ್ರಭಾವ ಬೀರಿತು. ಇದರಿಂದ ಮಾನವ ಜನಾಂಗವು ಎದುರಿಸುವ ಭಯಂಕರ ಯಾತನೆಗಳನ್ನು ತಪ್ಪಿಸಲು ಎರಡು ಅಂಶಗಳನ್ನು ಅಗತ್ಯವಾದವು.
1. ಅಂತರರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಬೇಕು ಹಾಗೂ ಇದರಲ್ಲಿನ ಸ್ವಯಂಸೇವಕ ತಂಡವು ಯುದ್ಧ ಮುಕ್ತಾಯವಾದ ಕೂಡಲೇ ಅಲ್ಲಿನ ಗಾಯಾಳುಗಳನ್ನು ಅವರ ರಾಷ್ಟ್ರೀಯತೆಯನ್ನು ಗಮನಿಸದೆ ಉಪಚರಿಸಬೇಕು.
2. ಇದನ್ನು ಸಾಧ್ಯವಾಗಿಸಲು, ರಾಷ್ಟ್ರಗಳು ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರೇ ಸಹಾಯಕರನ್ನು ತಟಸ್ಥರೆಂದು ಘೋಷಿಸಿ ಅಂತರಾಷ್ಟ್ರೀಯ ಒಂಪ್ಪಂದಕ್ಕೆ ಸಹಿ ಹಾಕಬೇಕು.
1862 ರಲ್ಲಿ ಹೆನ್ರಿಡುನಾಂಟ್‍ರು “ದಿ ಮೆಮೋರಿ ಆಫ್ ಸೆಲ್ಫೆರಿನೊ” ಎಂಬ ಪುಸ್ತಕವನ್ನು ಪ್ರಕಟಿಸಿದರು. ಅದರ ಪ್ರತಿನಿಧಿಗಳು ವಿಶ್ವಾದ್ಯಂತ ರಾಷ್ಟ್ರಗಳ ಪ್ರಮುಖರಿಗೆ, ಪತ್ರಕರ್ತರು ಮತ್ತು ಸಮಾಜಕಲ್ಯಾಣ ಸಂಸ್ಥೆಗಳಿಗೆ ವಿತರಿಸಿದರು.
ಈ ಅಧ್ಬುತ ಪುಸ್ತಕವನ್ನು ಓದಿದ ನಂತರ ಜಿನಿವಾ ಸಮಾಜಕಲ್ಯಾಣ ಸಂಘ ಎಂಬ ಧಾರ್ಮಿಕ ದತ್ತಿ ಸಂಸ್ಥೆಯು ಡ್ಯನಾಂಟ್ ರವರನ್ನು ಒಳಗೊಂಡಂತೆ ಐದು ಜನ ಸದಸ್ಯರಿರುವ ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಯು ಫೆಬ್ರವರಿ 17, 1863 ರಂದು ಸಭೆ ಸೇರಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಜಿನಿವಾದಲ್ಲಿ ಅಕ್ಟೋಬರ್ 1863ರಲ್ಲಿ ಏರ್ಪಡಿಸಿ ಸಂಘಟನೆಗಳನ್ನು ಸ್ಥಾಪಿಸಲು ನಿರ್ಧರಿಸಿತು.
ಕ್ರಮೇಣ ಡ್ಯುನಾಂಟ್ ರವರು ವಿಶ್ವದಾದ್ಯಂತ ಸಂಚರಿಸಿ ವಿಶ್ವದ ವಿವಿಧ ಪ್ರಮುಖ ವ್ಯಕ್ತಿಗಳನ್ನು ತನ್ನ ದ್ಯೇಯೋದ್ಧೇಶಗಳ ಸಾದನೆಗಾಗಿ ಸಹಾಯ ಪಡೆಯಲು ಭೇಟಿಯಾದರು. ಈ ದೀರ್ಘಪ್ರಯತ್ನಗಳ ಫಲವಾಗಿ 26 ನೇ ಅಕ್ಟೋಬರ್ 1863 ರಲ್ಲಿ ಜಿನೀವಾದಲ್ಲಿ ಜರುಗಿದ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಯೋಜನೆಗಳ ಪ್ರಸ್ತಾವನೆಗಳನ್ನು ಕುರಿತು ಚರ್ಚಿಸಲು 16 ರಷ್ಟ್ರಗಳ ವಿವಿಧ ಆಮಂತ್ರಿತರು ಪಾಲ್ಗೊಂಡಿದ್ದರು. ಈ ಸಮ್ಮೇಳನದಲ್ಲಿ ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಮುಂದೆ ಇದೇ ಸಂಸ್ಥೆಯು ‘ರೆಡ್‍ಕ್ರಾಸ್’ ಸಂಸ್ಥೆಯೆಂದು ಕರೆಯಲ್ಪಟ್ಟಿತು.


Top