Hide Main content block

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕ ರಾ.ಚ. ವಿ .ವಿ. ಬೆ


ಸಂಯೋಜಕರು
ಡಾ. ಜೆ ಮಂಜಣ್ಣ
E-mail : obccell@rcub.ac.in

ಕಾರ್ಯಸ್ವರೂಪ : : ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಘಟಕವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾರಂಭದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರಯುವ ಎಲ್ಲ ಸೌಲಭ್ಯಗಳನ್ನು ಘಟಕದ ಮುಖಾಂತರ ಒದಗಿಸಲಾಗುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಪ್ರತಿ ವರ್ಷ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬ್ರಹ್ಮಪುತ್ರ ಮತ್ತು ಕೃಷ್ಣಾ ವಸತಿ ನಿಲಯಗಳಲ್ಲಿ ಪ್ರವೇಶಾತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಆಯಾ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಕಾರ್ಯಕ್ರಮಗಳನ್ನು ಘಟಕದಿಂದ ನಡೆಸಲಾಗುತ್ತಿದೆ.
ಮುಖ್ಯ ಆವರಣದಲ್ಲಿ ಪ್ರವೇಶ ಪಡೆದ ಎಲ್ಲ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ಸದರಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಘಟಕದಿಂದ ದಾಖಲೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಅರ್ಜಿಗಳೊಂದಿಗೆ ಅವರ ಮಾಹಿತಿಯನ್ನು ಒದಗಿಸಿ, ಸರಕಾರದಿಂದ ಮಂಜೂರಾದ ಶಿಷ್ಯವೇತನದ ಮೊತ್ತವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನವನ್ನು ಪಡೆದು, ವಿದ್ಯಾರ್ಥಿಗಳಿಗೆ ನೀಡಿರುವ ಶುಲ್ಕ ವಿನಾಯಿತಿಯನ್ನುಮರುಬರಣಾಮಾಡಿಕೊಂಡು ಉಳಿದ ಮೊತ್ತವನ್ನು ನೆಪ್ಟ್ ಮೂಲಕ ವಿದ್ಯಾರ್ಥಿಗಳ ಉಳಿತಾಯ ಖಾತೆಗಳಿಗೆ ನೇರವಾಗಿ ಜಮೆ ಮಾಡಿಲಾಗುತ್ತದೆ.

ವಿಭಾಗದ ಕಾರ್ಯನಿರ್ವಾಹಕರು:

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅಭ್ಯುಧಯಕ್ಕಾಗಿ ಸ್ಥಾಪನೆಯಾದ ಘಟಕದಲ್ಲಿ ಮಾನ್ಯ ಸಂಯೋಜಕರ ಮಾರ್ಗದರ್ಶನದಲ್ಲಿ ಈ ಕೆಳಕಾಣಿಸಿದ ಸಿಬ್ಬಂದಿ ವರ್ಗವು ಕಾರ್ಯ ನಿರ್ವಹಿಸುತ್ತಿರುತ್ತದೆ. ಕ್ರ.ಸಂ ಕಾರ್ಯನಿರ್ವಹಿಸುವವರ ಹೆಸರು ಹುದ್ದೆ 01 ಡಾ. ಜೆ ಮಂಜಣ್ಣ ಸಂಯೋಜಕರು 02 ಶ್ರೀ. ಮುರುಗೇಶ್ ಹೆಚ್.ಎಂ ಸಹಾಯಕ ಕುಲಸಚಿವರು 03 ಶ್ರೀ. ಶಿವನಗೌಡ ಪಾಟೀಲ ಪ್ರಥಮದರ್ಜೆ ಸಹಾಯಕರು 04 ಕು. ಮಂಜುನಾಥ ಹುಣಶಿಕಟ್ಟಿ ದ್ವಿತೀಯದರ್ಜೆ ಸಹಾಯಕರು 05 ಶ್ರೀಮತಿ. ಗೀತಾ ಕೃ ಪೋತದಾರ ಸಿಪಾಯಿ(ದಿನಗೂಲಿ)

ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಘಟಕದಅಭಿವೃದ್ಧಿ ಕೋಶ:

ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿಹಿ.ವ/ಅ.ಸಂ ಘಟಕವುವಿಶ್ವವಿದ್ಯಾಲಯದಲ್ಲಿಸ್ಥಾಪನೆಯಾಗಿರುವುದುಗಡಿಭಾಗದ ಜಿಲ್ಲೆಗಳಲ್ಲಿಉನ್ನತ ಶಿಕ್ಷಣದ ಸದುಪಯೋಗವನ್ನುಹಿ.ವ/ಅ.ಸಂ.ಘಟಕದ ವಿದ್ಯಾರ್ಥಿಗಳಿಗೆ ಇನ್ನಿತರ ಉದ್ಯೋಗಿಗಳಿಗೆ ಸರಕಾರದಿಂದ ಲಭ್ಯವಾಗುವ ಸೌಲಭ್ಯವನ್ನು ಹಾಗೂ ವಿಶ್ವವಿದ್ಯಾಲಯದಿಂದ ವಿಶೇಷ ಪ್ರಾಶಸ್ಥ್ಯ ನೀಡಿಹಿಂದುಳಿದ ವರ್ಗಗಳ ಏಳಿಗೆಗೆ ಹಾಗೂ ಶೈಕ್ಷಣಿಕ ಸುಧಾರಣೆಗೆ ವಿಶ್ವವಿದ್ಯಾಲಯ ಮೊದಲ ಆದ್ಯತೆ ನೀಡಿ ಸಶಕ್ತಗೊಳಿಸುವ ಕಾರ್ಯವನ್ನು,ಕ್ರಮಬದ್ದವಾಗಿನಿರ್ವಹಿಸುತ್ತಿದೆ. ಸರಕಾರದಿಂದ, ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾದ ಹಿಂದುಳಿದ ವರ್ಗಗಳ ಕೋಶವನ್ನು ಬಲಪಡಿಸಲು ಮಂಜೂರಾದ ಮೊತ್ತದಲ್ಲಿ ಕೈಗೊಂಡ ಕಾರ್ಯಕ್ರಮಗಳ ವಿವರ.

ತ್ವರಿತ ಲಿಂಕ್‌ಗಳು

ಹೊಸ ಅಧಿಸೂಚನೆಗಳು

Click Here to submit updated basic information about your college.


Details of ICT Initiatives should impliment over all affiliated colleges of Rani Channamma University.


Meeting Proceedings of IT Initiatives and IT-Infrastructure.


Download annexure-I

Top