ದೂರದೃಷ್ಟಿ

ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು, ಇರುವ ಸೌಕರ್ಯಗಳನ್ನು ಒದಗಿಸುವುದು, ವರ್ಷವಿಡೀ ವಿವಿಧ ಕ್ರೀಡೆಗಳನ್ನು ಆಯೋಜಿಸುವುದು, ಕ್ರೀಡಾಪಟುಗಳ ಕೌಶಲ್ಯಗಳ ಆಧಾರದ ಮೇಲೆ ತಂಡಗಳ ಆಯ್ಕೆ ಮಾಡಿ, ತರಬೇತಿ ನೀಡಿ ತಂಡಗಳನ್ನು ದಕ್ಷಿಣ ವಲಯ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕಳುಹಿಸಿಕೊಡಲಾಗುವುದು

ಉದ್ದೇಶ

 1. ವಿವಿಧ ಕ್ರೀಡೆಗಳಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಿ, ಇತ್ತೀಚೆಗೆ ಸೃಷ್ಡಿಗೊಂಡ ನಿಯಮಗಳನ್ನೊಳಗೊಂಡು ಉತ್ತಮ ತರಬೇತಿ ನೀಡುವುದು.
 2. ನೈಪುನ್ಯತೆ ಹೊಂದಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಉತ್ತಮವಾದ ತರಬೇತಿ ನೀಡುವ ವ್ಯವಸ್ಥೆ ಮಾಡುವುದು

ವಿಭಾಗದ ವಿವರ

 1. 2011-12ನೇ ಸಾಲಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಮುಖ್ಯ ಆವರಣದಲ್ಲಿ ಕ್ರೀಡಾ ವಿಭಾಗದ ಸ್ಥಾಪನೆಗೊಂಡಿತು.
 2. ಶ್ರೀ.ಜಗದೀಶ ಎಸ್. ಗಸ್ತಿ, ಇವರನ್ನು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗಕ್ಕೆ, ಸಂಯೋಜನಾಧೀಕಾರಿಯನ್ನಾಗಿ ನೇಮಕ ಮಾಡಲಾಯಿತು.

ಬೊಧಕೇತರ ಸಿಬ್ಬಂದಿಗಳು

 1. ಶ್ರೀ.ಶೀವಾನಂದ ಗ. ಉಪ್ಪಾರ, ಇವರು ಪ್ರಥಮ ದರ್ಜೆ ಸಹಾಯಕರು
 2. ಶ್ರೀ.ವೈಭವ ಕ. ಮಿಸಾಳೆ, ಇವರು ದ್ವಿತೀಯ ದರ್ಜೆ ಸಹಾಯಕರು

ಅಥ್ಲೇಟಿಕ್ಸ್ ಕ್ರೀಡೆಯನ್ನು ಸಂಘಟಿಸಿರುವ ಮಹಾವಿದ್ಯಾಲಯಗಳು ಈ ಕೆಳಗಿನಂತಿವೆ.

ಅಥ್ಲೇಟಿಕ್ಸ್ ಕ್ರೀಡಾಕೂಟವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅತೀ ದೊಡ್ಡ ಕ್ರೀಡೆಯಾಗಿದ್ದು ಸದರಿ ಕ್ರೀಡೆಯು ಹಂಚಿಕೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ವಿಶ್ವವಿದ್ಯಾಲಯದ ಆಧೀನದಲ್ಲಿ ಬರುವ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಯಾವ ಮಹಾವಿದ್ಯಾಲಯಗಳು 400 ಮೀಟರ್, ಅತ್ಯುತ್ತಮ ಕ್ರೀಡಾಂಗಣ ಹೊಂದಿರುವ ಹಾಗೂ ಕ್ರೀಡಾ ಪಟುಗಳಿಗೆ ಊಟ-ವಸತಿ ವ್ಯೆವಸ್ಥೆಯನ್ನು ಹೊಂದಿದ್ದಲ್ಲಿ ಮಾತ್ರ ಅಥ್ಲೇಟಿಕ್ಸ್ ಕ್ರೀಡಾಕೂಟ ಹಮ್ಮಿಕೋಳ್ಳಲು ಅನುಮತಿ ನೀಡಲಾಗುತ್ತದೆ.

 1. 2011-12ನೇ ಸಾಲಿನಲ್ಲಿ ಕೆ.ಎಲ್.ಇ.ಎಸ್. ಲಿಂಗರಾಜ್ ಮಹಾವಿದ್ಯಾಲಯ, ಬೆಳಗಾವಿ.
 2. 2012-13ನೇ ಸಾಲಿನಲ್ಲಿ ಬಿ.ವಿ.ವಿ.ಎಸ್. ಬಸವೇಶ್ವರ್ ವಿಜ್ಞಾನ ಮಹಾವಿದ್ಯಾಲಯ, ಬಾಗಕೋಟ್
 3. 2014-15ನೇ ಸಾಲಿನಲ್ಲಿ ಎಸ್.ಪಿ.ಎಮ್.ಸಂಸ್ಥೆಯ ಕಲಾ ಮತ್ತು ವಾಣಿಜ್ಯ ವiಹಾವಿದ್ಯಾಲಯ, ರಾಯಬಾಗ, ಬೆಳಗಾವಿ.
 4. 2015-16ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಕಿತ್ತೂರ, ಬೆಳಗಾವಿ.
 5. 2016-17ನೇ ಸಾಲಿನಲ್ಲಿ ಬಿ.ಎಲ್.ಡಿ.ಇ.ಎ. ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ, ಬಾಗಲಕೋಟ್.
 6. 2017-18ನೇ ಸಾಲಿನಲ್ಲಿ ಕೆ.ಎಲ್.ಇ.ಎಸ್ ಬಸವಪ್ರಭು ಕೋರೆ ಮಹಾವಿದ್ಯಾಲಯ, ಚಿಕ್ಕೊಡಿ, ಬೆಳಗಾವಿ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಧೀನದಲ್ಲಿ ಪತೀ ವರ್ಷ ಅಥ್ಲೇಟಿಕ್ಸ್ ಕ್ರೀಡಾಕೂಟವನ್ನು ಸೇರಿ ವಿವಿಧ ಕ್ರೀಡೆಗಳನ್ನು ವಿವಿಧ ಮಹಾವಿದ್ಯಾಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ, ಅದರೊಂದಿಗೆ ವಿಶ್ವವಿದ್ಯಾಲಯವು ಅಳವಡಿಸಿರುವ 37 ವಿವಿಧ ಕ್ರೀಡೆಗಳಿಗೆ ಪುರುಷ ಮತ್ತು ಮಹಿಳೆ ಕ್ರೀಡಾ ಪಟುಗಳನ್ನು ಆಯ್ಕೆ ಮಾಡುವುದರ ಮೂಲಕ ದಕ್ಷಿಣ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಟ್ಟಲದಲ್ಲಿ ಭಾಗವಹಿಸಲು ಕಳುಹಿಸಲಾಗುತ್ತದೆ.

ಅಂತರ ವಿಶ್ವವಿದ್ಯಾಲಯಗಳ ವಿವಿಧ ಕ್ರೀಡೆಗಳಲ್ಲಿ ಪದಕಗಳನ್ನು ಪಡೆದ ಕ್ರೀಡಾಪಟುಗಳ ವಿವರ ಈ ಕೆಳಗಿನಂತಿರುತ್ತದೆ.

2011-12 
ಈಜು(ಮಹಿಳೆ) ಕೂಮಾರಿ.ತನ್ವಿ ಎಸ್. ದೊಡ್ಡನ್ನವರ್ ಇವರು ಪಡೆದ ಪದಕಗಳು
50 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ಬೆಳ್ಳಿ

 

2012-13 
ಈಜು(ಮಹಿಳೆ) ಕೂಮಾರಿ.ತನ್ವಿ ಎಸ್. ದೊಡ್ಡನ್ನವರ್ ಇವರು ಪಡೆದ ಪದಕಗಳು
50 ಮೀಟರ್ ಬಟರ್ ಪ್ಲೈನಲ್ಲಿ ಬಂಗಾರ
200 ಮೀಟರ್ ಬಟರ್ ಪ್ಲೈನಲ್ಲ್ಲಿ ಬೆಳ್ಳಿ
200 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ಕಂಚು
ಕುಸ್ತಿ (ಪುರುಷ) ಕೂಮಾರ.ಸಿದ್ದನಾಥ ಡಿ. ಮಾನೆ ಇವರು ಪಡೆದ ಪದಕ
ಕುಸ್ತಿ ಬೆಳ್ಳಿ

 

2013-14 
ಕುಸ್ತಿ (ಪುರುಷ) ಕೂಮಾರ.ಸದಾಶೀವ ಆರ್. ಗುಂಡಿ ಇವರು ಪಡೆದ ಪದಕ
ಕುಸ್ತಿ ಕಂಚು

 

2014-15 
ಜೂಡೋ (ಮಹಿಳೆ) ಕೂಮಾರಿ.ಸಮತಾ ಅ. ರಾಣೆ ಇವರು ಪಡೆದ ಪದಕ
ಜೂಡೋ 52 ಕೆ.ಜಿ. ಬಂಗಾರ
ಜೂಡೋ (ಮಹಿಳೆ) ಕೂಮಾರಿ.ಪೂಜಾ ಪಿ. ಶಹಾಪುರಕರ್ ಇವರು ಪಡೆದ ಪದಕ
ಜೂಡೋ 57 ಕೆ.ಜಿ. ಕಂಚು

 

2015-16 
ಜೂಡೋ(ಮಹಿಳೆ) ಕೂಮಾರಿ.ಸಮತಾ ಅ. ರಾಣೆ ಇವರು ಪಡೆದ ಪದಕ
ಜೂಡೋ 52 ಕೆ.ಜಿ. = ಬಂಗಾರ
ಜೂಡೋ (ಮಹಿಳೆ) ಕೂಮಾರಿ.ಪೂಜಾ ಪಿ. ಶಹಾಪುರಕರ್ ಇವರು ಪಡೆದ ಪದಕ
ಜೂಡೋ 53 ಕೆ.ಜಿ. ಬೆಳ್ಳಿ
ಸೈಕ್ಲಿಂಗ್ ರೋಡ (ಮಹಿಳೆ) ಕೂಮಾರಿ.ರೇಣುಕಾ ದಂಡಿನ ಇವರು ಪಡೆದ ಪದಕ
ಸೈಕ್ಲಿಂಗ್ ರೋಡ ಕಂಚು

 

2016-17 
ಸೈಕ್ಲಿಂಗ್ ರೋಡ (ಪುರುಷ) ಕೂಮಾರ.ಮಲೀಕ ಆರ್. ಅತ್ತಾರ ಇವರು ಪಡೆದ ಪದಕ
ಸೈಕ್ಲಿಂಗ್ ರೋಡ ಕಂಚು

 

2017-18 
ಕುಸ್ತಿ (ಮಹಿಳೆ) ಕೂಮಾರಿ.ಐಶ್ವರ್ಯಾ ದಳವಿ ಇವರು ಪಡೆದ ಪದಕ
ಕುಸ್ತಿ ಕಂಚು
ಜೂಡೋ (ಮಹಿಳೆ) ಕೂಮಾರಿ.ಕೋಮಲ ಹಲಗೇಕರ್ ಇವರು ಪಡೆದ ಪದಕ
ಜೂಡೋ 52ಕೆ.ಜಿ. ಬೆಳ್ಳಿ
ಜೂಡೋ (ಮಹಿಳೆ) ಕೂಮಾರಿ.ಗೀತಾ ದಾನಾಪ್ಪಗೊಳ ಇವರು ಪಡೆದ ಪದಕ
ಜೂಡೋ 44ಕೆ.ಜಿ. ಬೆಳ್ಳಿ
ಸೈಕ್ಲಿಂಗ್ ರೋಡ (ಮಹಿಳೆ) ಕೂಮಾರ.ರೇಣುಕಾ ದಂಡಿನ ಇವರು ಪಡೆದ ಪದಕ
ಸೈಕ್ಲಿಂಗ್ ರೋಡ ಕಂಚು

ಈ ಕೆಳಕಾಣಿಸಿದ ದಕ್ಷಿಣ ವಲಯ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ನಮ್ಮ ವಿಶ್ವವಿದ್ಯಾಲಯವು ಭಾವಹಿಸುತ್ತದೆ.

ಕ್ರಮ ಸಂ.ಕ್ರೀಡೆಯ ಹೆಸರುದಕ್ಷಿಣ/ಅಖಿಲ ಭಾರತ ವಲಯ ವಿ.ವಿ
 1  ಶಟ್‍ಲ್ ಬ್ಯಾಡಮಿಂಟನ್ (ಪು-ಮ)       ದಕ್ಷಿಣ ಭಾರತ ವಲಯ
 2  ಖೋ-ಖೋ (ಪುರುಷ ಮತ್ತು ಮಹಿಳೆ)  ದಕ್ಷಿಣ ಭಾರತ ವಲಯ
 3  ಟೇಬಲ್-ಟೆನ್ನಿಸ್ (ಪುರುಷ ಮತ್ತು ಮಹಿಳೆ)  ದಕ್ಷಿಣ ಭಾರತ ವಲಯ
 4  ಗುಡ್ಡಗಾಡು ಓಟ (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 5  ಬಾಸ್ಕೇಟ್ ಬಾಲ್ (ಪುರುಷ ಮತ್ತು ಮಹಿಳೆ)   ದಕ್ಷಿಣ ಭಾರತ ವಲಯ
 6  ಫೂಟಬಾಲ್ (ಪುರುಷ)   ದಕ್ಷಿಣ ಭಾರತ ವಲಯ
 7  ಜೂಡೋ (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 8  ಟೆನ್ನಿಸ್ (ಪುರುಷ ಮತ್ತು ಮಹಿಳೆ)   ದಕ್ಷಿಣ ಭಾರತ ವಲಯ
 9  ಕಬಡ್ಡಿ (ಪುರುಷ ಮತ್ತು ಮಹಿಳೆ)   ದಕ್ಷಿಣ ಭಾರತ ವಲಯ
 10  ವ್ಹಾಲಿಬಾಲ್ (ಪುರುಷ ಮತ್ತು ಮಹಿಳೆ)   ದಕ್ಷಿಣ ಭಾರತ ವಲಯ
 11  ಈಜು (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 12  ಸೈಕ್ಲಿಂಗ್ ರೋಡ (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 13  ಸೈಕ್ಲಿಂಗ್ ಟ್ರ್ಯಾಕ್ (ಪುರುಷ ಮತ್ತು ಮಹಿಳೆ)  ಅಖಿಲ ಭಾರತ ವಲಯ
 14  ಹಾಕಿ (ಪುರುಷ ಮತ್ತು ಮಹಿಳೆ)  ದಕ್ಷಿಣ ಭಾರತ ವಲಯ
 15  ಯೋಗಾ (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 16  ಭಾರ ಎತ್ತುವುದು (ಪುರುಷ ಮತ್ತು ಮಹಿಳೆ) ಹಾಗೂ ದೆಹ ದಾಡ್ಯ (ಪುರುಷ)  ಅಖಿಲ ಭಾರತ ವಲಯ
 17  ಹ್ಯಾಂಡ ಬಾಲ್ (ಪುರುಷ ಮತ್ತು ಮಹಿಳೆ)    ದಕ್ಷಿಣ ಭಾರತ ವಲಯ
 18  ಕುಸ್ತಿ (ಪುರುಷ ಮತ್ತು ಮಹಿಳೆ)  ಅಖಿಲ ಭಾರತ ವಲಯ
 19  ಕುಸ್ತಿ ಗ್ರಿಕೊ ರೋಮನ (ಪುರುಷ)  ಅಖಿಲ ಭಾರತ ವಲಯ
 20  ಚೇಸ್ (ಪುರುಷ ಮತ್ತು ಮಹಿಳೆ)   ದಕ್ಷಿಣ ಭಾರತ ವಲಯ
 21  ಬಾಲ್ ಬ್ಯಾಡ್ಮಿಂಟನ್ (ಪುರುಷ ಮತ್ತು ಮಹಿಳೆ)  ಅಖಿಲ ಭಾರತ ವಲಯ
 22  ಕ್ರೀಕೆಟ್ (ಪುರುಷ)  ದಕ್ಷಿಣ ಭಾರತ ವಲಯ
 23  ಅಥ್ಲೇಟಿಕ್ಸ್  ಅಖಿಲ ಭಾರತ ವಲಯ
 24  ಟೈಕ್ವೋಂಡೊ (ಪುರುಷ ಮತ್ತು ಮಹಿಳೆ)   ಅಖಿಲ ಭಾರತ ವಲಯ
 25  ನೆಟ್-ಬಾಲ್ (ಪುರುಷ ಮತ್ತು ಮಹಿಳೆ)  ಅಖಿಲ ಭಾರತ ವಲಯ
     

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in