ವಿಶ್ವವಿದ್ಯಾಲಯದಕುರಿತು :

ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲ ಯವೆನ್ನುವ ಅಭಿದಾನಕ್ಕೆ ಪಾತ್ರವಾದ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಯಾದದ್ದು 2010 ರಲ್ಲಿ ಅದಕ್ಕೂ ಮೊದಲ ಕರ್ನಾಟಕ ವಿಶ್ವವಿದ್ಯಾಲಯದ ಕಿತ್ತೂರುರಾಣಿಚನ್ನಮ್ಮ ಸ್ನಾತಕೋತ್ತರ ಕೇಂದ್ರವಾಗಿ 1982ರಲ್ಲಿ ರೂಪುಗೊಂಡಿತ್ತು. ಉತ್ತರಕರ್ನಾಟಕದ ಉನ್ನತ ಶಿಕ್ಷಣದ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುವ ಸದುದ್ದೇಶದಿಂದ ಆರಂಭವಾದ ಕೇಂದ್ರವು 1994ರಲ್ಲಿ ಭೂತರಾಮನಹಟ್ಟಿಯ 172 ಎಕರೆ ಪ್ರದೇಶದಲ್ಲಿ ತನ್ನ ಭೌತಿಕ ಅಸ್ತಿತ್ವವನ್ನು ಪಡೆದುಕೊಂಡಿತು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬಳಿಯಲ್ಲಿ ಬೆಳಗಾವಿಯಿಂದ 18 ಕಿ.ಮೀ ಅಂತರದಲ್ಲಿ ನಿಸರ್ಗದ ಮಡಿಲಲ್ಲಿ ವಿಶ್ವವಿದ್ಯಾಲಯವು ನೆಲೆಯೂರಿದೆ. 2010ರಲ್ಲಿ ಕರ್ನಾಟಕರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿರಿಸಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರಕೇಂದ್ರವನ್ನು ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಘೋಷಿಸಿತು. ಬೆಳಗಾವಿ,ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಕರ್ನಾಟಕದ ಅತಿ ಮಹತ್ವದ ಹಾಗೂ ಬಹುದೊಡ್ಡ ವಿಶ್ವವಿದ್ಯಾಲಯ ವಾಗಿ ಇಂದು ರೂಪುಪಡೆದುಕೊಂಡಿತು.

abtuni

ಶೈಕ್ಷಣಿಕ ಕಾರ್ಯಕ್ರಮಗಳು  :

ಪ್ರಸ್ತುತ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಒಂಬತ್ತು ನಿಕಾಯಗಳನ್ನು ಹೊಂದಿದ್ದು, ಅದರಅಡಿಯಲ್ಲಿ ಹತ್ತೊಂಬತ್ತು ಸ್ನಾತಕೋತ್ತರ ವಿಭಾಗಗಳು ನಡೆಯುತ್ತಿವೆ. ಸ್ನಾತಕೋತ್ತರ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮಾ ಅಧ್ಯಯನ ಮತ್ತು ಪಿಎಚ್.ಡಿ ಅಧ್ಯಯನ ಕೋರ್ಸಗಳು ನಡೆಯುತ್ತಿವೆ. ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳು ತಮ್ಮನ್ನು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಿವೆ. ಯೋಜನಾ ಬದ್ಧ ಹಾಗೂ ಶಿಸ್ತು ಬದ್ಧ ಶೈಕ್ಷಣಿಕ ವ್ಯವಸ್ಥೆ,ಅತ್ಯುತ್ತಮ ಆಡಳಿತಾತ್ಮಕ ಉಪಕ್ರಮಗಳು, ಸಮರ್ಥಗ್ರಂಥಾಲಯ ಹಾಗೂ ಸುಸಜ್ಜಿತ ಪ್ರಯೋಗಾಲಯಗಳು ಅಲ್ಲದೇ ಮಾಹಿತಿತಂತ್ರಜ್ಞಾನದ ಬಗೆಗಿನ ಉನ್ನತಾಧ್ಯಯನಗಳಿಗೆ ಅಗತ್ಯವಿರುವ ಪ್ರಯೋಗಾಲಯಗಳನ್ನು ವಿಶ್ವವಿದ್ಯಾಲಯವು ಹೊಂದಿದೆ. ಜಾಗತೀಕರಣೋತ್ತರ ಸಂದರ್ಭಕ್ಕೆ ಅಗತ್ಯ ವಿರುವ ಅತ್ಯಾಧುನಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿ ಸ್ನೇಹಿ ಪರಿಸರವನ್ನು ಆವರಣದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕವನ್ನು ಹೊಂದಲಾಗಿದೆ ಮೂಲಭೂತ ಸೌಕರ್ಯಗಳನ್ನು ಅಲ್ಲದೇ ಉಚಿತ ವೈ-ಫೈ (ಇಂಟರನೆಟ್) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆವರಣದಲ್ಲಿ ಬ್ಯಾಂಕ್, ಅಂಚೆಕಛೇರಿ, ಸೈಬರ್‍ಕೆಫೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗಿದೆ.

  ಹಿನ್ನೆಲೆ  :

ರಾಣಿಚನ್ನಮ್ಮ ವಿಶ್ವವಿದ್ಯಾಲಯವು 2010ರಲ್ಲಿ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಕಿತ್ತೂರರಾಣಿಚನ್ನಮ್ಮ ಸ್ನಾತಕೋತ್ತರಕೇಂದ್ರವೆಂಬ ಹೆಸರಿನಲ್ಲಿ (ಏಖಅPಉ) ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಉತ್ತರಕರ್ನಾಟಕದವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನುಕಲ್ಪಿಸುವಅವಕಾಶವನ್ನುಒದಗಿಸಲು, 1982 ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರಕೇಂದ್ರವನ್ನು ಸ್ಥಾಪಿಸಿತು. 1994ರಲ್ಲಿ ಸ್ನಾತಕೋತ್ತರಕೇಂದ್ರವನ್ನುಬೆಳಗಾವಿ ನಗರದಿಂದ 18 ಕಿ.ಮೀ. ದೂರದಲ್ಲಿರುವಪುಣೆ-ಬೆಂಗಳೂರುರಾಷ್ಟ್ರೀಯ ಹೆದ್ದಾರಿ-4ಕ್ಕೆ ಭೂತರಾಮನಹಟ್ಟಿಯ 172 ಎಕರೆ ಭೂಪ್ರದೇಶಕ್ಕೆ ಪ್ರಸ್ತುತಕ್ಯಾಂಪಸ್ನ್ನು ಸ್ಥಳಾಂತರಿಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರಕೇಂದ್ರವನ್ನುಜುಲೈ 2010ರಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯವೆಂದು ಅಂದಿನ ಸರ್ಕಾರವು ಘೋಷಿಸಿತು.ಈ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ಮೂಲಕ ಉತ್ತರಕರ್ನಾಟಕದಜನರಆಶಾಕಿರಣವಾಗಿದೆ.

ಶೈಕ್ಷಣಿಕ ಕಾರ್ಯಕ್ರಮಗಳು  :

ಪ್ರಸ್ತುತರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಸಂಗಮಆವರಣದಲ್ಲಿ ಕಲೆ, ವಿಜ್ಞಾನ, ಶಿಕ್ಷಣ, ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರಅಧ್ಯಯನ ನಿಖಾಯಗಳಲ್ಲಿ ಒಂಬತ್ತು ಸ್ನಾತಕೋತ್ತರ ಕೋರ್ಸಗಳು ನಡೆಯುತ್ತಿವೆ. ಇದರೊಂದಿಗೆ ಪಿಎಚ್.ಡಿ ಸಂಶೋಧನಾಅಧ್ಯಯನವು ನಡೆಯುತ್ತಿದ್ದು, ಸಮಾಜ ವಿಜ್ಞಾನ ನಿಖಾಯದಲ್ಲಿಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಕಾರ್ಯ, ಭಾಷಾ ನಿಖಾಯವುಇಂಗ್ಲೀಷ, ಮರಾಠಿ ಸ್ನಾತಕೋತ್ತರ ಕೋರ್ಸಗಳನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದ ವಿಜ್ಞಾನ ನಿಖಾಯದಲ್ಲಿಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಸಸ್ಯಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿಯನ್ನು ನೀಡುತ್ತಿದೆ.ಆನ್ವಯಿಕ ವಿಜ್ಞಾನ ನಿಖಾಯದಲ್ಲಿ ಭೂಗೋಳಶಾಸ್ತ್ರ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೋರ್ಸಗಳಿದ್ದು, ವಾಣಿಜ್ಯ ಮತ್ತುಅರ್ಥಶಾಸ್ತ್ರ ನಿಖಾಯದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ.ಕನ್ನಡಕ್ಕೆ ಪ್ರತ್ಯೇಕ ನಿಖಾಯದ ಸ್ಥಾನವಿದ್ದು, ಶಾಸ್ತ್ರಿಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯಲ್ಲಿಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ನೀಡಲಾಗುತ್ತದೆ.ಅಪರಾಧ ಮತ್ತುಅಪರಾಧಶಾಸ್ತ್ರ ನಿಖಾಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಸಂಯೋಜಿತ ಪದವಿಯನ್ನು ನೀಡಲಾಗುತ್ತದೆ.ಇದರೊಂದಿಗೆ ವಿವಿಧ ಪಿ.ಜಿ. ಡಿಪ್ಲೋಮಾ ಮತ್ತುಕಂಪ್ಯೂಟರ್ಅಪ್ಲೀಕೇಶನ್ ಕೋರ್ಸಗಳು ನಡೆಯುತ್ತವೆ. ಪ್ರಸ್ತುತ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಸುಮಾರು 1,800 ವಿದ್ಯಾರ್ಥಿಗಳುಅಧ್ಯಯನದಲ್ಲಿ ನಿರತರಾಗಿದ್ದಾರೆ. ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನೆಟ್/ಸ್ಲೆಟ್/ಜೆ.ಆರ್.ಎಫ್ಗಳನ್ನು ಉತ್ತೀರ್ಣರಾಗಿದ್ದಾರೆ.

ಮೂಲಸೌಕರ್ಯ :

 1. ಶೈಕ್ಷಣಿಕಕಟ್ಟಡ, ಅಡಳಿತಾತ್ಮಕ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ ಮತ್ತು ಸಿಬ್ಬಂದಿಗಳ ಹದಿಮೂರು ವಸತಿ ನಿಲಯ.
 2. ಅಂತರ್ಜಾಲ ವ್ಯವಸ್ಥೆಯುಇರುತ್ತದೆ.
 3. ವಿಶ್ವವಿದ್ಯಾಲಯಕ್ಕೆಇಪ್ಪತ್ನಾಲ್ಕು ಘಂಟೆಗಳ ವಿದ್ಯುತ್ ಸೌಲಭ್ಯ ವಿರುತ್ತದೆ.
 4. ಸಭಾಭವನದ ವ್ಯವಸ್ಥೆ.
 5. ಸುಸಜ್ಜಿತಕಂಪ್ಯೂಟರ್ ಲ್ಯಾಬ್.
 6. ಪರೀಕ್ಷಾ ವಿಭಾಗಕ್ಕೆ ಸುಸಜ್ಜಿತಕಂಪ್ಯೂಟರ್ ಲ್ಯಾಬ್ ಮತ್ತುಉನ್ನತಗುಣಮಟ್ಟದ ಮುದ್ರಣಯಂತ್ರದ ವ್ಯವಸ್ಥೆ.
 7. ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು (ಮೌಲ್ಯಮಾಪನ), ಹಣಕಾಸು ಅಧಿಕಾರಿಗಳು, ನಿರ್ದೇಶಕರುಗಳು, ಕಾಲೇಜುಅಭಿವೃದ್ಧಿ ಮಂಡಳಿಗಳಿಗೆ ಪ್ರತ್ಯೇಕ ಸುಸಜ್ಜಿತಕಛೇರಿ ವ್ಯವಸ್ಥೆಇರುತ್ತದೆ.
 8. ಗ್ರಂಥಾಲಯದ ಸೌಲಭ್ಯ

ಪುಸ್ತಕಗಳು – 22,034

ಜರ್ನಲ್ಗಳು – 10

ದಿನಪತ್ರಿಕೆಗಳು – 13

ಇತರ ಸೌಲಭ್ಯಗಳು :

 1. ಆರೋಗ್ಯಕೇಂದ್ರ - 2
 2. ಸಿಂಡಿಕೇಟ್ ಬ್ಯಾಂಕ್
 3. ಅಂಚೆ ಕಛೇರಿ
 4. ಕ್ಯಾಂಟೀನ್
 5. ಮಾಹಿತಿ ಸಮೂಹ ತಂತ್ರಜ್ಞಾನ/ಝರಾಕ್ಸ್/ಲೇಖನ ಸಾಮಗ್ರಿಗಳ ಮಳಿಗೆ.

Vision :

Rani Channamma University Belagavi will be an exemplar of academic excellence, aimed at to disseminate and advance knowledge in a globalizing world where convergence of inter- disciplinary studies and research is emerging to create a new pool of world-class manpower for the well being of the society.

Mission :

• To impart innovative and quality education of global-standard, to produce skilled human power.
• To foster educational programmes in various disciplines based on interaction with society and industry.
• To review and design co-curricular activities to develop the overall personality of the students.
• To strengthen professionalism with ethics to enable the students to face the challenges of contemporary society.

Objectives :

• To contribute to the knowledge society through research, publications and applications.
• To promote popular awareness for strengthening the civil society.
• To provide inputs for public policy making.

Values :

• To inculcate values of service, sacrifice, equality, justice and commitment in the minds of youth.

ವಿಶ್ವವಿದ್ಯಾಲಯದ ನಿಕಾಯಗಳು ಮತ್ತು ನಡೆಸುತ್ತಿರುವ ಸ್ನಾತಕೋತ್ತರ ಕೋರ್ಸಗಳು :
1) ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆ

 • ಪಿಎಚ್.ಡಿ
 • ಎಂ.ಎ ಕನ್ನಡ
 • ಭಾಷಾಂತರ ಸ್ನಾತಕೋತ್ತರಡಿಪ್ಲೋಮಾ
 • ವಚನ ಅಧ್ಯಯನ ಸ್ನಾತಕೋತ್ತರಡಿಪ್ಲೋಮಾ

 

2) ಭಾಷಾ ನಿಕಾಯ

 • ಪಿಎಚ್.ಡಿ
 • ಎಂ.ಎ ಇಂಗ್ಲೀಷ
 • ಎಂ.ಎ ಮರಾಠಿ

 

3) ಸಮಾಜ ವಿಜ್ಞಾನಗಳ ನಿಕಾಯ

 • ಪಿಎಚ್.ಡಿ
 • ಎಂ.ಎ ಸಮಾಜಶಾಸ್ತ್ರ
 • ಎಂ.ಎ ರಾಜ್ಯಶಾಸ್ತ್ರ
 • ಸ್ನಾತಕೋತ್ತರ ಸಮಾಜಕಾರ್ಯಅಧ್ಯಯನ (ಎಂ.ಎಸ್.ಡಬ್ಲೂ)
 • ಎಂ.ಎ ಇತಿಹಾಸ
 • ಎಂ.ಎ ಪತ್ರಿಕೋಧ್ಯಮ ಮತ್ತು ಸಮೂಹ ಮಾಧ್ಯಮ

 

4) ಆನ್ವಯಿಕ ವಿಜ್ಞಾನ ನಿಕಾಯ

 • ಪಿಎಚ್.ಡಿ
 • ಎಂ.ಎ/ಎಂ.ಎಸ್ಸಿ ಭೂಗೋಳಶಾಸ್ತ್ರ ರ
 • ಎಂ.ಎಲ್.ಐ.ಸಿ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ)ರ
 • ಸ್ನಾತಕೋತ್ತರ ಪ್ರವಾಸೋಧ್ಯ ಮಡಿಪ್ಲೋಮಾಅಧ್ಯಯನ

 

5) ವ್ಯವಹಾರಅಧ್ಯಯನ ಮತ್ತುಅರ್ಥಶಾಸ್ತ್ರ ನಿಕಾಯ

 • ಪಿಎಚ್.ಡಿ
 • ಎಂ.ಎ ಅರ್ಥಶಾಸ್ತ್ರ
 • ಎಂ.ಕಾಂ
 • ಎಂ.ಬಿ.ಎ

 

6) ಮೂಲ ವಿಜ್ಞಾನಗಳ ನಿಕಾಯ

 • ಪಿಎಚ್.ಡಿ
 • ಎಂ.ಎಸ್ಸಿ ಭೌತಶಾಸ್ತ್ರ
 • ಎಂ.ಎಸ್ಸಿ ರಸಾಯನಶಾಸ್ತ್ರ
 • ಎಂ.ಎಸ್ಸಿ ಸಸ್ಯಶಾಸ್ತ್ರ

 

7) ಗಣಿತ ಮತ್ತುಗಣಕ ವಿಜ್ಞಾನಗಲ ನಿಕಾಯ

 • ಪಿಎಚ್.ಡಿ
 • ಎಂ.ಎಸ್ಸಿ ಗಣಿತಶಾಸ್ತ್ರ
 • ಎಂ.ಎಸ್ಸಿ ಗಣಕವಿಜ್ಞಾನರ
 • ಎಂ.ಸಿ.ಎರ

 

8) ಶಿಕ್ಷಣಶಾಸ್ತ್ರ ನಿಕಾಯ

 • ಪಿಎಚ್.ಡಿ
 • ಎಂ.ಇಡಿ
 • ಎಂ.ಪಿ.ಇಡಿ
 • ಯೋಗ ಸರ್ಟಿಫಿಕೋಟ್‍ಕೋರ್ಸ

 

9) ಅಪರಾಧ ಹಾಗೂ ಅಪರಾಧಿಕ ನ್ಯಾಯಶಾಸ್ತ್ರ ನಿಕಾಯ

 • ಪಿಎಚ್.ಡಿ
 • ಸಂಯೋಜಿತ ಬಿ.ಎ/ಬಿ.ಎಸ್ಸಿ ಅಪರಾಧಶಾಸ್ತ್ರ
 • ಎಂ.ಎ/ಎಂ.ಎಸ್ಸಿ ಅಪರಾಧಶಾಸ್ತ್ರ

 ವಿಶ್ವವಿದ್ಯಾಲಯ ದಿಂದ ನಡೆಸುತ್ತಿರುವ ಸ್ನಾತಕ ಕೋರ್ಸಗಳ ವಿವರಗಳು :

ಕೋರ್ಸಗಳ ಹೆಸರು

ಕಾಲೇಜುಗಳ ಸಂಖ್ಯೆ

ಬಿ.ಎ/ಬಿ.ಕಾಂ/ಬಿ.ಎಸ್ಸಿ

ಬಿ.ಕಾಂ/ಬಿ.ಎಸ್ಸಿ

ಬಿ.ಎ/ಬಿ.ಕಾಂ

ಬಿ.ಎ/ಬಿ.ಎಸ್ಸಿ

ಬಿ.ಎಸ್ಸಿ

ಬಿ.ಎ

ಬಿ.ಬಿ.ಎ

ಬಿ.ಸಿ.ಎ

ಬಿ.ಎಸ್.ಡಬ್ಲು

ಯೋಗಾ

TOTAL

44

1

19

4

2

39

67

42

18

4

240

ಒಟ್ಟು ಕಾಲೇಜುಗಳ ಸಂಖ್ಯೆ : 370  |  ವಿದ್ಯಾರ್ಥಿಗಳ ಸಂಖ್ಯೆ : 42000

coming soon

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in