ನಿರ್ದೇಶಕರು ಸಿ.ಡಿ.ಸಿ. ಪ್ರೊ.ಎಸ್.ಎಂ.ಹುರಕಡ್ಲಿ
ಪ್ರಾದ್ಯಾಪಕರು ಮತ್ತು ಅದ್ಯಕ್ಷರು ಭೂಗೋಳಶಾಸ್ತ್ರ ವಿಭಾಗ, 
ನಿರ್ದೇಶಕರು, ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್.

1.ಪ್ರಸ್ತಾವನೆ

ಗಡಿನಾಡಿನ ಉನ್ನತ ಶಿಕ್ಷಣದ ಹೊಂಗಿರಣವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾರಂಭಿಸಿದಾಗಿನಿಂದ ಮೊದಲು ಕ.ವಿ.ವಿ. ಧಾರವಾಡದಿಂದ 272 ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ 2011-12 ನೇ ಶೈಕ್ಷಣಿಕ ಸಾಲಿನಿಂದ ಸಂಯೋಜನೆ ಪ್ರಕ್ರಿಯೆಯನ್ನು ಪ್ರಾರಂಭಿಸಿ ಇಲ್ಲಿಯವರೆಗೆ ಅಂದರೆ 2018-19 ನೇ ಶೈಕ್ಷಣಿಕ ಸಾಲಿನ ಸಂಯೋಜನೆಯ ಪ್ರಕ್ರಿಯೆಯೊಂದಿಗೆ 08 ಶೈಕ್ಷಣಿಕ ವರ್ಷಗಳ ಸಂಯೋಜನೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ, 2019-20 ನೇ ಶೈಕ್ಷಣಿಕ ಸಾಲಿನ ಸಂಯೋಜನೆಯು ಪ್ರಗತಿಯಲ್ಲಿರುತ್ತದೆ.

ಇದಕ್ಕೆ ಮುಂದುವರೆದು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ 272 ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡನಂತರ 2011-12 ನೇ ಶೈಕ್ಷಣಿಕ ಸಾಲಿನಿಂದ 2018-19 ನೇ ಶೈಕ್ಷಣಿಕ ಸಾಲಿನವರೆಗೆ ಸಂಯೋಜನೆ ಪ್ರಕ್ರಿಯೆಯನ್ನು ಕೈಗೊಂಡು ಇಲ್ಲಿಯವರೆಗೆ ಸುಮಾರು 96 ವಿವಿಧ ಬಗೆಯ ಹೊಸ ಮಹಾವಿದ್ಯಾಲಯಗಳಿಗೆ ಸಂಯೊಜನೆಯನ್ನು ನೀಡಿ, ಒಂದು ಘಟಕ ಮಹಾವಿದ್ಯಾಲಯ ಮತ್ತು ಮೂರು ಸ್ವಾಯತ್ತ ಮಹಾವಿದ್ಯಾಲಯನ್ನು ಹೊಂದಿ,ಒಟ್ಟು 368 ಮಹಾವಿದ್ಯಾಲಯಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿರುತ್ತದೆ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪೂರ, ಹಾಗೂ ಬಾಗಲಕೋಟ ಜಿಲ್ಲೆಗಳ ಜನತೆಯ ಉನ್ನತ ಶಿಕ್ಷಣದ ಅವಶ್ಯಕತೆಗಳನ್ನು ಈಡೇರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣವನ್ನು ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡುವ ಮಹತ್ವಾಕಾಂಕ್ಷಿ ಉದ್ದೇಶವನ್ನು ನಮ್ಮ ವಿಶ್ವವಿದ್ಯಾಲಯವು ಈಡೇರಿಸುತ್ತಲಿದೆ. ಒಟ್ಟಾರೆಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮುಖಾಂತರ ಗಡಿ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗೆ ಸ್ಪಂದಿಸುತ್ತಿದೆ.

2.ಮಂಡಳಿಯ ಕಾರ್ಯಸ್ವರೂಪ:

ಈ ಮಂಡಳಿಯು ವಿಶ್ವವಿದ್ಯಾಲಯಗಳ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳ ಭೋಧಕ ಸಿಬ್ಬಂದಿಯವರು ಕೈಗೊಳ್ಳುವ ಕಾರ್ಯಗಳನ್ನು ಅನುಷ್ಠಾನಗೊಳಿಸುವುದಲ್ಲಿದೆ ಅವುಗಳ ಪ್ರಸ್ತಾವನೆಗಳನ್ನು ತಯಾರಿಸಿ ಅನುದಾನ ನೀಡುವ ಸಂಸ್ಥೆಗಳಾದ ಯು.ಜಿ.ಸಿ, ಐ.ಸಿ.ಎಸ್.ಎಸ್.ಆರ್. ಮುಂತಾದವುಗಳಿಗೆ ರವಾನಿಸುತ್ತದೆ. ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ.

ಯೋಜನೆ ಮತ್ತು ಪರೀಶಿಲನಾ ಸಮಿತಿಗಳನ್ನೂಳಗೊಂಡ ಈ ಮಂಡಳಿಯು ಕಾರ್ಯದರ್ಶಿಗಳು, ಯೋಜನಾ ಆಯೋಗ, ಇವರ ಜೊತೆಗೆ ಪತ್ರ ವ್ಯವಹಾರ ಮಾಡುವುದು, ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರ ಆಜ್ಞೆ ಮೇರೆಗೆ ವಹಿಸಿಕೊಟ್ಟ ಇನ್ನಿತರ ಜವಾಬ್ದಾರಿಗಳನ್ನು ನಿರ್ವಹಿಸುವುದು, ಮಹಾವಿದ್ಯಾಲಯಗಳಿಂದಎಫ್,ಐ.ಪಿ ಗೆ ಬರುವಂತಹ ಸಂಶೋಧಕರ ಎಲ್ಲ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸುವುದು ಹಾಗೂ ಮಹಾವಿದ್ಯಾಲಯದಲ್ಲಿಯ ಭೋಧಕ ಸಿಬ್ಬಂದಿಗಳ ಬೃಹತ ಮತ್ತು ಮದ್ಯಮ ಪ್ರಮಾಣ ಯು.ಜಿ.ಸಿ. ಪ್ರೊಜೆಕ್ಟ ಕಾರ್ಯಗಳನ್ನು ಯು.ಜಿ.ಸಿ. ಐ.ಸಿ.ಎಸ್.ಎಸ್.ಆರ್.ಗಳಗೆ ಕಳುಹಿಸುªಂತಹ ಮಹತ್ವಪೂರ್ಣ ಕಾರ್ಯಗಳನ್ನು ಕೈಗೊಳ್ಳುತ್ತದೆ.

3 ಕಾಲೇಜು ಅಭಿವೃದ್ಧಿ ಮಂಡಳಿ ಆಡಳಿತ ಸಿಬ್ಬಂದಿ ವರ್ಗದ ವಿವರ

ಉಪನಿರ್ದೇಶಕರು ಪ್ರೊ. ಅಶೋಕ ಡಿಸೋಜ

 

ಅ.ಸಂ.ಸಿಬ್ಬಂದಿಯ ಹೆಸರುಸಿಬ್ಬಂದಿಯ ಹುದ್ದೆ
1 ಶ್ರೀ.ಹೇಮಂತ್ ಕುಮಾರ್ ಎನ್ ಪ್ರಥಮ ದರ್ಜೆ ಸಹಾಯಕರು
2 ಕು.ರಾಣಿ ಬಿ. ಪಾಟೀಲ. ಪ್ರಥಮ ದರ್ಜೆ ಸಹಾಯಕರು
3 ಶ್ರೀಮತಿ ಜ್ಯೋತಿ ಚೌಧರಿ ಪ್ರಥಮ ದರ್ಜೆ ಸಹಾಯಕರು
4 ಶ್ರೀ.ಅನಿಲ ಕ.ಮುತಾಲಿಕ ದ್ವಿತಿಯ ದರ್ಜೆ ಸಹಾಯಕರು
5 ಶ್ರೀ.ರಾಘವೇಂದ್ರ ದಂಡಗಲ್ ಗಣಕ ಯಂತ್ರ ನಿರ್ವಾಹಕರು
6 ಶ್ರೀ.ಮಾರುತೇಶ.ಎಂ. ಹಳ್ಳಿಗುಡಿ. ಗಣಕ ಯಂತ್ರ ನಿರ್ವಾಹಕರು
7 ಶ್ರೀ.ಲಕ್ಷ್ಮಣ.ಹು. ಗುರವ. ಗಣಕ ಯಂತ್ರ ನಿರ್ವಾಹಕರು
8 ಶ್ರೀ.ಪರಸಪ್ಪಾ. ಆರ್. ಪಾಟೀಲ. ಸಂಚಿತ ವೇತನದ ಸಿಬ್ಬಂದಿ

ಕಾಲೇಜು ಅಭಿವೃದ್ಧಿ ಮಂಡಳಿಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಸರಕಾರದ ಹಾಗೂ ವಿಶ್ವವಿದ್ಯಾಲಯ ದನಸಹಾಯ ಆಯೋಗದ ಜಂಟಿ ನಿರ್ದೇಶನದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಅಭಿವೃಧ್ಧಿ ಮಂಡಳಿ ವಿಭಾಗದ ನಿರ್ದೇಶಕರಾಗಿಪ್ರೊ.ಎಸ್.ಎಮ್.ಹುರಕಡ್ಲಿ (ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಡೀನರು)ಇವರು ಸಿ.ಡಿ.ಸಿ. ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೋತೆಗೆ ಪ್ರೋ. ಅಶೋಕ ಡಿಸೋಜಾ, ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಇವರು ಸಿ.ಡಿ.ಸಿ. ವಿಭಾಗದ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

4.ಕಾಲೇಜು ಅಭಿವೃದ್ಧಿ ಮಂಡಳಿ ವಿಭಾಗದ ಉದ್ದೇಶಗಳು

 • ಜಾಗತಿಕ ಮಟ್ಟದಲ್ಲಿ ಮತ್ತು ಉನ್ನತ ಶಿಕ್ಷಣ ಮಟ್ಟದಲ್ಲಿ ಉನ್ನತ ಶಿಕ್ಷಣವನ್ನು ಹಿಂದುಳಿದ ಹಾಗೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡುವ ಮಹತ್ವಾಕಾಂಕ್ಷೆ ಸಿ.ಡಿ.ಸಿ. ವಿಭಾಗದ ಉದ್ದೇಶವಾಗಿದೆ.
 • ಉನ್ನತ ವ್ಯಾಸಂಗದ ಮಟ್ಟವನ್ನು ಹೆಚ್ಚಿಸಲು ಅಗತ್ಯವಿರುವ ಹಲವು ಬಗೆಯ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
 • ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಮಹಾವಿದ್ಯಾಲಯಗಳಿಗೆ ಸ್ವಾಯತ್ತತೆ ಸಂಯೋಜನೆಯನ್ನು ನೀಡುವುದು.
 • ಯು.ಜಿ.ಸಿ. ಮತ್ತು ಇತರೆ ಅನುದಾನ ನೀಡುವ ಸಂಸ್ಥೆಗಳ ಯೋಜನೆಗಳನ್ನು ಪಡೆಯುವ ಸಲುವಾಗಿ ಮಹಾವಿದ್ಯಾಲಯಕ್ಕೆ ಹೆಚ್ಚಿನ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿರುತ್ತದೆ.
 • ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರುಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಪುನಶ್ಛೇತನ ಕಾರ್ಯಗಾರ ಹಮ್ಮಿಕೊಳ್ಳುವುದು, ಮುಂತಾದವುಗಳು ಈ ಸಿ.ಡಿ.ಸಿ. ವಿಭಾಗದ ಮುಖ್ಯ ಉದ್ದೇಶವಾಗಿರುತ್ತದೆ.

5. ಸಿ.ಡಿ.ಸಿ. ವಿಭಾಗದಮಹತ್ವದ ಕರ್ತವ್ಯಗಳು

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಳಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯು ಅತಿ ಮಹತ್ವದ ವಿಭಾಗವಾಗಿದ್ದು, ತಾತ್ಕಾಲಿಕ ಸಂಯೋಜನೆ, ಶಾಶ್ವತ ಸಂಯೋಜನೆ, ಸಂಯೋಜನಾ ಮುಂದುವರಿಕೆ ಮತ್ತು ಸಂಯೋಜನಾ ವಿಸ್ತರಣೆಗಾಗಿ ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟ ಮೂರು ಜಿಲ್ಲೆಗಳ ಸಂಯೋಜಿತ ಮಹಾವಿದ್ಯಾಲಯಗಳಿಂದ ಮತ್ತು ಹೊಸ ಸಂಘ ಸಂಸ್ಥೆಯವರಿಂದ ಸಲ್ಲಿಸುವ ಅರ್ಜಿಗಳನ್ನು ಯು.ಜಿ.ಸಿ ಮಾರ್ಗಸೂಚಿ ಮತ್ತು ನಿಯಮಗಳಂತೆ ಕರ್ನಾಟಕ ರಾಜ್ಯ ವಿದ್ಯಾಲಯಗಳ ಅಧಿನಿಯಮ 2000 ಅಧ್ಯಾಯ-10 ರನ್ವಯ ಕ್ರಮ ತೆಗೆದುಕೋಳ್ಳಲಾಗುವ ಅಂಶಗಳನ್ನು ಈ ಕೆಳಗಿನಂತೆ ಜಾರಿಗೂಳಿಸಲಾಗುವುದು.

 1. ಯುಜಿಸಿ ಮತ್ತು ಇತರೆ ಧನಸಹಾಯ ಸಂಸ್ಥೆಗಳಿಂದ ವಿವಿಧ ಯೋಜನೆಯಡಿಯಲ್ಲಿ ಕಾಲೇಜುಗಳಿಗೆ ದೂರೆಯಬಹುದಾದ ಧನಸಹಯವನ್ನು ಪಡೆಯಲು ಮಹಾವಿದ್ಯಾಲಯಗಳಿಂದ ಪ್ರಸ್ತಾವಣೆಯನ್ನು ಪಡೆಯುವುದು.
 2. ಯುಜಿಸಿಯ ಎಫ್,ಆಯ್,ಸಿ ಯೋಜನೆ ಅಡಿಯಲ್ಲಿ ಎಂಫೀಲ್/ಪಿಎಚ್‍ಡಿ ಗಾಗಿ ಉನ್ನತ ವ್ಯಾಸಂಗಕ್ಕೆ ತೆರಳುವ ಕಾಲೇಜು ಶಿಕ್ಷಕರು ಸಲ್ಲಿಸಿರುವ ಅರ್ಜಿಗಳನ್ನು ಪರೀಶಲಿಸಿ ಶಿಫಾರಸ್ಸು ಮಾಡಲಾಗುವುದು.
 3. ಸಂಯೋಜಿತ ಕಾಲೇಜುಗಳನ್ನು ಯುಜಿಸಿ ಕಾಯ್ದೆ1956 ರ ಸೆಕ್ಷನ್ 2ಎಫ್ ಸೆಕ್ಷನ 12(ಬಿ) ಅಡಿಯಲ್ಲಿ ಸೇರ್ಪಡೆಗಾಗಿ ಮಹಾವಿದ್ಯಾಲಯಗಳಿಗೆ ಅಗತ್ಯ ಸುತ್ತೋಲೆಗಳನ್ನು ಕಳುಹಿಸುವ ಕ್ರಮ ಕೈಗೊಳ್ಳುವುದು ಹಾಗೂ ಆಡಳಿತ ಮಂಡಳಿಯವರನ್ನು ಪ್ರೋತ್ಸಾಹಿಸುವದು.
 4. ಯು.ಜಿ.ಸಿ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಉನ್ನತ ವ್ಯಾಸಂಗಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ ನಿರ್ದೇಶನಗಳನ್ನು ಮಹಾವಿದ್ಯಾಲಯಗಳಿಗೆ ತಲುಪಿಸುವ/ಪಾಲಿಸುವ ಕಾರ್ಯವನ್ನು ಮಾಡುವುದು.
 5. ವಿವಿಧ ಸಂಯೋಜನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ರಚಿಸಿದ ಸ್ಥಳೀಯ ತನಿಖಾ ಸಮಿತಿಯು ನೀಡಿರುವ ವರದಿಗಳನ್ನು ಪರಿಶೀಲಿಸಿ ಸಂಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಂತಿಮವಾಗಿ ಆ ಶೈಕ್ಷಣಿಕ ಸಾಲಿಗೆ ಸಂಯೋಜನೆ ನೀಡಲು ಕ್ರಮಕೈಗೊಳ್ಳುವ ಕಾರ್ಯವನ್ನು ಮಾಡುವುದು.
 6. ಯು.ಜಿ.ಸಿ. ಮತ್ತು ಇತರೆ ಅನುದಾನವನ್ನು ನೀಡುವ ಸಂಸ್ಥೆಗಳ ಯೋಜನೆಗಳನ್ನು ಪಡೆಯುವ ಸಲುವಾಗಿ ಮಹಾವಿದ್ಯಾಲಯಕ್ಕೆ ಮಾರ್ಗದರ್ಶನ ಮಾಡುವುದು.
 7. ಸಂಸ್ಥೆಯಿಂದ ಮಾನ್ಯತೆ ಪಡೆಯಲು ಕಾಲೇಜುಗಳನ್ನು ಪ್ರೋತ್ಸಾಹಿಸುವುದು ಹಾಗೂ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು ಹಾಗೂ ಕಾಲ ಕಾಲಕ್ಕೆ ಬದಲಾವಣೆ ಹೊಂದುವ ನಿಯಮಾವಳಿಗಳನ್ನು ಕಾರ್ಯರೂಪಕ್ಕೆ ತರುವುದು ಹಾಗೂ ಆಡಳಿತ ಮಂಡಳಿಯವರನ್ನು ಪ್ರೋತ್ಸಾಹಿಸುವದು.
 8. ಕೇಂದ್ರ ಸರಕಾರದ ನಿರ್ದೇಶನದಂತೆ ಉನ್ನತ ಶಿಕ್ಷಣ ಅಭಿವೃದ್ಧಿಗಾಗಿ ಸರ್ವೇಕ್ಷಣೆ ಕಾರ್ಯಕ್ರಮದ ಕುರಿತು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಮಹಾವಿದ್ಯಾಲಯಗಳು ತಮ್ಮ ಮಾಹಿತಿಯನ್ನು ಸರಕಾರದ ಂISಊಇಜಾಲತಾಣದಲ್ಲಿ ಅಂತರ್ಜಾಲದ ಮೂಲಕ ಮಹಾವಿದ್ಯಾಲಯಗಳಿಗೆ ಮಾಹಿತಿಯನ್ನು ಅಳವಡಿಸಲು ಸೂಕ್ತ ಮಾರ್ಗದರ್ಶನ ನೀಡಿ ಸರಕಾರಕ್ಕೆ ವರದಿ ಸಲ್ಲಿಸುವುದು.
 9. ಸರಕಾರ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಮತ್ತು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಹೋತ್ತುಕೊಂಡು ಕ್ರಮ ಜರುಗಿಸುವುದು.
 10. ಸರ್ಟಿಫಿಕೇಟ್ ಕೋರ್ಸ ಇನ್ ಯೋಗಾ ಸ್ಟಡೀಸ್ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಯೋಗಾ ಸ್ಟಡೀಸ್ ಪ್ರಾರಂಭಿಸುವ ಕುರಿತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಕೇಂದ್ರ ಸರಕಾರವು ಯೋಗ ವಿದ್ಯೆಗೆ ಪ್ರಾಮುಖ್ಯತೆ ನೀಡುತ್ತಿರುವ ಹಿನ್ನಲೆಯಲ್ಲಿ ರಾಣಿ  ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದಂರ್ಭದಲ್ಲಿ ಯೋಗ ವಿದ್ಯೆಗೆ ಪ್ರಾಧಾನ್ಯತೆ ನೀಡುವ ದೃಷ್ಠಿಯಿಂದ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳಿಗೆ ಠೇವಣಿ ಶುಲ್ಕ ರಹಿತ ಯೋಗಾ ಕೋರ್ಸನ್ನು ಪ್ರಾರಂಭಿಸಲು ಕರೆನೀಡಿ ಸೂಚಿಸದ್ದರ ಪ್ರಯುಕ್ತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಸರ್ಟಿಫಿಕೇಟ್ ಕೋರ್ಸ ಇನ್ ಯೋಗಾ ಸ್ಟಡಿಸ್ ಮತ್ತು ಪಿ. ಜಿ. ಡಿಪ್ಲೋಮಾ ಇನ್ ಯೋಗಾ ಸ್ಟಡಿಸ್ ಕೋರ್ಸನ್ನು ಪ್ರಾರಂಭಿಸಲಾಗಿದ್ದು, ಸದರಿ ಕೊರ್ಸಗೆ ಬರುವ ಹಾಗೂ ಅಗತ್ಯವಿರುವ ಸೂಚನೆಗಳನ್ನು ನೀಡುವುದು.

6.ಮಂಡಳಿಯಿಂದ ಕೈಗೊಂಡ ಮುಖ್ಯ ಕಾರ್ಯಗಳುಹಾಗೂ ಕ್ರಮಗಳು

 • ವಿಶ್ವವಿದ್ಯಾಲಯದಿಂದ, ಭಾರತದ ವಿಶ್ವವಿದ್ಯಾಲಯಗಳ ಸಂಘಕ್ಕೆ 19 ಎಪ್ರಿಲ್ 2011 ರಿಂದ ಸದಸ್ಯತ್ವವನ್ನು ಪಡೆಯಲು ಅರ್ಜಿಸಲ್ಲಿಸಲಾಗಿತ್ತು. ಪ್ರಸ್ತುತ ವಿಶ್ವವಿದ್ಯಾಲಯವು ಭಾರತೀಯ ವಿಶ್ವವಿದ್ಯಾಲಯಗಳ ಸಂಘಕ್ಕೆ ಸೇರ್ಪಡೆಯಾಗಿದೆ.
 • ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರುಗಳಿಂದ ಮೈನರ ಮತ್ತು ಮೇಜರ ಪ್ರೋಜೆಕ್ಟಗಳಗಾಗಿ ಹಣಕಾಸಿನ ನೆರವನ್ನು ಕೋರಿ ಸಲ್ಲಿಸಿದ ಪ್ರಸ್ತಾವನೆಗಳನ್ನು ವಿಶ್ವವಿದ್ಯಾಲಯದ ಧನ ಸಹಾಯ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ.
 • ಸಿ.ಡಿ.ಸಿ. ವಿಭಾಗವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರ ವರ್ಗದರಿಗೆ ಕಾರ್ಯಗಾರ ಮತ್ತು ವಿಚರಣಾ ಸಂಕೀರ್ಣಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಪುನಃಚ್ಛೆತನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 • ವಿವಿಧ ವಿಷಯಗಳ ಅಧ್ಯಾಪಕರುಗಳು ಸಂಶೋಧನೆಯಲ್ಲಿ ತೊಡಗಲು ನೆರವಾಗುವಂತೆ ಮೈನರ ಮತ್ತು ಮೇಜರ ಪ್ರೋಜೆಕ್ಟಗಳಗಾಗಿ ಹಣಕಾಸಿನ ನೆರವು ನೀಡಲು ಮುಖ್ಯಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಬೆಳಗಾವಿ ಇವರಿಗೆ ಪತ್ರ ಬರೆಯಲಾಗಿದೆ.
 • ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುವ ಸಂಬಂಧವಾಗಿ ಐ.ಕ್ಯೂ.ಎ.ಸಿ. (ಇಂಟರನಲ್ ಕ್ವಾಲಿಟಿ ಅಸೆಸ್ಮೆಂಟ್ ಸೆಲ್) ವಿಭಾಗದ ಜೊತೆಗೆ ಸಿ.ಡಿ.ಸಿ. ವಿಭಾಗವು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯ ನಿರ್ವಹಿಸುತ್ತಿರುತ್ತಿರುವುದರ ಜೊತೆಗೆ ಜಂಟಿಯಾಗಿ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಪುನಃಚ್ಛೆತನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಮಹಾವಿದ್ಯಾಲಯಗಳಿಗೆ ವಿವಿಧ ರೀತಿಯಾಗಿ ಮಾರ್ಗದರ್ಶನ ನೀಡುತ್ತಾ ಬಂದಿರುತ್ತದೆ.
 • ಸಂಯೋಜಿತ ಮಹಾವಿದ್ಯಾಲಯಗಳ ತನಿಖಾ ಸಮಿತಿಯವರು ಸಲ್ಲಿಸಿದ ವರದಿಯನ್ನು ಪೂರ್ಣಗೊಳಿಸದ ಮಾಹಿತಿಯನ್ನು ಆನ್‍ಲಾಯಿನ್‍ನಲ್ಲಿ ಭರಿಸಿ ಎನ್.ಆಯ್.ಸಿ.ಗೆ ಸಲ್ಲಿಸಲು ಕ್ರಮ ಜರುಗಿಸಲಾಗಿದೆ.
 • ಮುಂಬರುವ ಶೈಕ್ಷಣಿಕ ವರ್ಷದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆ ಪ್ರಕ್ರಿಯನ್ನು ಆನ್‍ಲಾಯಿನ್ ಮುಖಾಂತರ ಸಲ್ಲಿಸಲು ಮಾಗರ್ದಶನ ಹಾಗೂ ಸಂಯೋಜನೆಗೆ ಸಂಭಂದಿಸಿದ ಪೂರ್ಣ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯೊಂದಿಗೆ ಪ್ರಕಟಿಸಲು ಕ್ರಮ ಜರುಗಿಸಲಾಗಿದೆ.
 • ಎನ್.ಆಯ್.ಸಿ ವಿಭಾಗದಿಂದ ನೀಡಿದ ಎಲ್ಲ ಕಾರ್ಯಗಳನ್ನು ಚಾಚು ತಪ್ಪದೆ ಕಾರ್ಯ ರೂಪಕ್ಕೆ ತರಲಾಗಿದೆ.
 • ಸಂಯೋಜಿತ ಮಹಾವಿದ್ಯಾಲಯಗಳು ವಿವಿಧ ಬಗೆಯ ಕಟ್ಟಡಗಳಿಗಾಗಿ ಯು.ಜಿ.ಸಿ.ಯಿಂದ ಧನಸಹಾಯ ಪಡೆದು ಕಟ್ಟಡಗಳ ಕಾರ್ಯ ಪೂರ್ಣಗೂಳಸಿ ಸಲ್ಲಿಸಿದ ದಾಖಲಾತಿಗಳನ್ನು ಯು.ಜಿ.ಸಿ. ನಿಯಮಗಳ ಪ್ರಕಾರ ಸಮಿತಿ ರಚಿಸಿ ಸಮಿತಿಯು ಸಲ್ಲಿಸಿದ ವರದಿಯನ್ನು ತಪಾಸಣೆಗೆ ಒಳಪಟ್ಟು ನೀಡಿದ ಅಂತಿಮ ವರದಿಯನ್ನು ಯು.ಜಿ.ಸಿ.ಗೆ ಸಲ್ಲಿಸುವ ಕಾರ್ಯ ಕೈಗೊಳ್ಳಲಾಗಿದೆ.
 • ಯು.ಜಿ.ಸಿ.ಯಿಂದ ಹಣಕಾಸಿನ ನೆರವು ಪಡೆದು ಕಟ್ಟಡಗಳನ್ನು ನಿರ್ಮಿಸಿದ ಮಹಾವಿದ್ಯಾಲಯಗಳಿಗೆ ಯು.ಜಿ.ಸಿ ತಂಡ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳನ್ನೂಂಡ ಸಮಿತಿಯು ಭೇಟಿ ನೀಡಿ ಸಿದ್ಧಪಡಿಸಿದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತಿದೆ.
ಯು.ಜಿ.ಸಿ.ಯಿಂದ ಹಣಕಾಸಿನ ನೆರವು ಪಡೆದು ಕಟ್ಟಡಗಳನ್ನು ನಿರ್ಮಿಸಿದ ಮಹಾವಿದ್ಯಾಲಯಗಳಿಗೆ ಯು.ಜಿ.ಸಿ ತಂಡ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳನ್ನೂಂಡ ಸಮಿತಿಯು ಭೇಟಿ ನೀಡಿ ಸಿದ್ಧಪಡಿಸಿದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತಿದೆ.

 

2020-21 ನೇ ಶೈಕ್ಷಣಿಕ ಸಾಲಿನ ಸಂಯೋಜನೆ ಅಧಿಸೂಚನೆ

ದಿನಾಂಕವಿಷಯಡೌನ್ಲೋಡ್
8-1-2020

Affiliation application PDF format 2020-21new

8-1-2020

Affiliation application DOC format 2020-21new

4-11-2019

೨೦೧೯ -೨೦ನೇ ಸಾಲಿನ ಸಂಯೋಜನಾ ಶುಲ್ಕದ ವಿವರ new

18-10-2019

೨೦೨೦-೨೧ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಗಾಗಿ ಅಧಿಕೃತ ಪ್ರಕಟಣೆ new

18-10-2019

Affiliation Application format for the year 2020-21(Doc Format)new

18-10-2019

Affiliation Application format for the year 2020-21(PDF Format)new

18-10-2019

Affiliation Application format for new college for the year 2020-21(DOC Format)new

18-10-2019

Affiliation Application format for new college for the year 2020-21(PDF Format)new

18-10-2019

Application format for Pre-Qualification 2020-21(Doc Format)new

18-10-2019

Application format for Pre-Qualification 2020-21(PDF Format)new

ದಿನಾಂಕವಿಷಯDownload
25-02-2013

2 ಎಪ್, 12ಬಿ ಮಾನ್ಯತೆಗಾಗಿ ಸಂಬಂದಿಸಿದ ಅರ್ಜಿ

25-02-2013

ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ-2000(ಕಾಲೇಜು ಅಭಿವೃದ್ಧಿ ಮಂಡಳಿಗೆ ಸಂಬಂದಿಸಿದ್ದು)

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in