ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 2016 -17 ರ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಿತು. ರಾಚವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದರಚನೆ ಘನ ಕುಲಪತಿಗಳಾದ ಪ್ರೊ. ಶಿವಾನಂದ ಹೊಸಮನಿ ಮತ್ತು ಕುಲಸಚಿವರಾದಡಾ.ಸಿದ್ದು ಬಿ.ಅಲಗೂರಅವರ ಬಹು ದೊಡ್ಡಕನಸಾಗಿತ್ತು.ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆಜಿಲ್ಲೆಯ ವಿದ್ಯಾರ್ಥಿಗಳ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನಒತ್ತು ನೀಡಲಾಗುತ್ತಿದೆ.

ದೂರದೃಷ್ಟಿ:

ಸೃಜನಶೀಲತೆಯ ಬರವಣಿಗೆ ಮತ್ತು ಸದಾ ಹೊಸತನದಿಂದಕೂಡಿದ ಮಾಧ್ಯಮ ಲೋಕದಲ್ಲಿ ವೃತ್ತಿಪರತೆಯಿಂದಜವಾಬ್ದಾರಿಯುತವಾಗಿರಾಷ್ಟ್ರ ಮತ್ತು ಸಮಾಜ ನಿರ್ಮಾಣದಕಾರ್ಯನಿರ್ವಹಿಸುವ ನಿಟ್ಟಿನಲ್ಲಿಯುವ ಪೀಳಿಗೆಯನ್ನು ಅಣಿಗೊಳಿಸುವುದು ವಿಭಾಗದಉದ್ದೇಶವಾಗಿದೆ.

ಉದ್ಯೋಗದದೃಷ್ಟಿಯಿಂದ ಬಹು ಬೇಡಿಕೆಯಕ್ಷೇತ್ರವಾದ ಮಾಧ್ಯಮಕ್ಷೇತ್ರವು ಪ್ರತಿನಿತ್ಯ ಹೊಸತನದಿಂದಕೂಡಿರುತ್ತದೆ.ಮುದ್ರಣ, ವಿದ್ಯುನ್ಮಾನ, ವೆಬ್, ಜಾಹೀರಾತು, ಸಾರ್ವಜನಿಕ ಸಂಪರ್ಕ, ಸಿನಿಮಾ ಹೀಗೆ ಅನೇಕ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಭಾಗಕಾರ್ಯಪ್ರವೃತ್ತವಾಗಿದೆ.

ಧ್ಯೇಯ:

ಜ್ಞಾನ ಮುಖಿ ಮತ್ತುಉದ್ಯೋಗ ಮುಖಿಯಾಗಿ ಮಾತ್ರವಲ್ಲದೇ ಸಮಾಜಮುಖಿಯಾಗಿಕಾರ್ಯನಿರ್ವಹಿಸುವ ನಿಟ್ಟಿನಲ್ಲಿಈ ಕೋರ್ಸ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡುತ್ತಿದೆ.ನಿತ್ಯ ನೂತನದಿಂದಕೂಡಿದ ಮಾಧ್ಯಮಕ್ಷೇತ್ರದಲ್ಲಿಅವಶ್ಯವಿರುವತಂತ್ರಜ್ಞಾನ ಮತ್ತು ವಿಧಾನಗಳ ತರಬೇತಿ ನೀಡುವುದರಜೊತೆಗೆ, ಸೃಜನಶೀಲತೆ, ಭಿನ್ನದೃಷ್ಟಿಕೋನ, ವಿನೂತನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳು ಮಾಧ್ಯಮಕ್ಷೇತ್ರದಲ್ಲಿ ಪ್ರತಿಭಾವಂತ ವೃತ್ತಿಪರರಾಗುವಂತೆ ವಿಭಾಗದಧ್ಯೇಯವಾಗಿದೆ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in