ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಚಟುವಟಿಕೆಗಳು

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಈ ಕೆಳಕಂಡ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಾಗುವುದು.

 1. ದೈನಂದಿನ ಚಟುವಟಿಕೆ: ದೈನಂದಿನ ಚಟುವಟಿಕೆಯಲ್ಲಿ ಸ್ವಯಂ ಸೇವಕ ಒಂದು ವರ್ಷದಲ್ಲಿ ಕನಿಷ್ಠ 120 ಗಂಟೆಗಳಂತೆ 2 ವರ್ಷಗಳ ಅವಧಿಯಲ್ಲಿ (ವಿಷೇಶ ಶಿಬಿರ ಕಾರ್ಯಕ್ರಮವನ್ನು ಹೊರತುಪಡಿಸಿ) 240 ಗಂಟೆಗಳ ಸೇವಾಕಾರ್ಯವನ್ನು ಮಾಡಲೇಬೆಕು. ವಾರದಲ್ಲಿ ಕನಿಷ್ಠ 4 ಗಂಟೆ ಚಟುವಟಿಕೆಗಳ ಜೊತೆಗೆ ದತ್ತು ಗ್ರಾಮಗಳಲ್ಲಿ ನಡೆಸಬಹುದಾದ ವಾರಾಂತ್ಯ ಶಿಬಿರಗಳು ಇದರಲ್ಲಿ ಸೇರಿರುತ್ತವೆ.
 2. ವಿಶೇಷ ಶಿಬಿರ ಕಾರ್ಯಕ್ರಮ:ವಿಶೇಷ ಶಿಬಿರವನ್ನು ದತ್ತು ಗ್ರಾಮದಲ್ಲಾಗಲಿ ಅಥವಾ ಬೇರೆ ಎಲ್ಲಾದರೂ 7 ದಿನಗಳ ಕಾಲ ನಡೆಸಲಾಗುವುದು. ಈ ಅವಧಿಯಲ್ಲಿ ಸ್ವಯಂಸೇವಕರು ತಮ್ಮ ಮನೆ ಮತ್ತು ಕಾಲೇಜಿನಿಂದ ದೂರವಿದ್ದು ಹೆಚ್ಚು ಪರಿಣಾಮಕಾರಿ ಸೇವಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
 3. ರಾಜ್ಯ, ರಾಷ್ಟ್ರ, ಜಿಲ್ಲಾ ಮಟ್ಟದ ನಾಯಕತ್ವ ಶಿಬಿರ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.

ರಾಷ್ಟ್ರೀಯ ಭಾವೈಕ್ಯತಾಶಿಬಿರ ಮತ್ತು ಒಂದು ದಿನದ ಪುನಃಶ್ಚೇತನ ಕಾರ್ಯಕ್ರಮ

img img
img img
img  

ಫಲಶೃತಿಗಳು:

ಸ್ವಯಂಸೇವಕರಿಗೆ:

 1. ಅರ್ಹ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ
 2. ಸ್ನಾತಕೋತ್ತರ ಪ್ರವೇಶಗಳಲ್ಲಿ ಮೀಸಲಾತಿ.
 3. ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರ ಮಟ್ಟದ ಸಾಧನೆಗೆ ಪ್ರಶಸ್ತಿ, ನಗದು ಪುರಸ್ಕಾರ.
 4. ಅಂತರಾಷ್ಟ್ರೀಯ ಯುವ-ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
 5. ಯುವಜನೋತ್ಸವ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ರಾಷ್ಟ್ರೀಯ ಏಕತಾ ಶಿಬಿರ, ಸಾಹಸ ಶಿಬಿರ, ವಿಚಾರ
 6. ಯುವಜನೋತ್ಸವ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ರಾಷ್ಟ್ರೀಯ ಏಕತಾ ಶಿಬಿರ, ಸಾಹಸ ಶಿಬಿರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವಿಕೆಗೆ ಅವಕಾಶ.
 7. ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

ಬ). ಎನ್. ಎಸ್.ಎಸ್ ಅಧಿಕಾರಿಗಳಿಗೆ:

 1. ಯುವ ಸೇವಾ ಪಡೆ ನಿರ್ಮಾಣದ ತೃತ್ತಿ ಮತ್ತು ಮಹಾವಿದ್ಯಾಲಯದ ಪ್ರಮುಖ ಆಸ್ಥಿ.
 2. 3 ವರ್ಷಗಳ ಸೇವೆಯನ್ನು ಸೇವಾ ಪುಸ್ತಕದಲ್ಲಿ ದಾಖಲಿಸುವುದು.
 3. ಮುಂಬಡ್ತಿನಗಳಲ್ಲಿ ಪರಿಗಣನೆ.
 4. ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ಥಿಗಳು.

ಕ). ಮಹಾವಿದ್ಯಾಲಯಗಳಿಗೆ:-

 1. ಮಹಾವಿದ್ಯಾಲಯಗಳಲ್ಲಿ ಸೇವಾ ಶಿಸ್ತು ನಿರ್ಮಾಣ.
 2. ಮಹಾವಿದ್ಯಾಲಯಗಳಲ್ಲಿ ಸಂಪೂರ್ಣ ಸ್ವಚ್ಛತೆಯ ಪರಿಕಲ್ಪನೆ ಮತ್ತು ಭಾವನೆ.
 3. ನ್ಯಾಕ್ ಮಾನ್ಯತೆಯಲ್ಲಿ ಸಮಾಜ ಸೇವೆಯ ಪ್ರಾಧಾನ್ಯತೆ.
 4. ಐಕ್ಯತೆಯ ಪರಿಸರ.
 5. ಪ್ರಶಸ್ತಿಗಳು ಮಹಾವಿದ್ಯಾಲಯದ ಸಾಧನೆಗಳ ಹೆಗ್ಗುರುತು.

ಇವರೊಂದಿಗೆ, ವಿಶ್ವವಿದ್ಯಾಲಯ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಇಡೀ ಸಮುದಾಯ ಎನ್.ಎಸ್.ಎಸ್. ಸುಸಂಸ್ಕøತ ಪ್ರಜೆಗಳ ಪ್ರತಿಫಲದ ಪ್ರಯೋಜನ ಹೊಂದಿವೆ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in