ವಿಭಾಗದ ಕುರಿತು ವಿಭಾಗದ ಹೆಸರು: ಎನ್.ಎಸ್.ಎಸ್. ಕೋಶ ಮತ್ತು ಎನ್.ಎಸ್.ಎಸ್. ಘಟಕ

ವಿವರ:

ನಮ್ಮ ರಾಷ್ಟ್ರ ಮುಂದುವರಿಯಬೇಕಾದರೆ, ನಮ್ಮ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರೆ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕನಸಾಗಿತ್ತು. ಭಾರತ ಸರ್ಕಾರವು ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮಾಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ದಿನಾಂಕ: 24/09/1969 ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ಎ.ಕೆ.ಆರ್.ವಿ.ರಾವ್ ಅವರಿಂದ ಉದ್ಘಾಟಿತವಾಯಿತು.

ಕರ್ನಾಟಕದಉತ್ತರ ಗಡಿಭಾಗದ ಬೆಳಗಾವಿಯಲ್ಲಿ ನೆಲೆಗೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ತನ್ನ ಅಸ್ತಿತ್ವ ಕಂಡುಕೊಂಡಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಕನಸು ಹಾಗೂ ಆಶೋತ್ತರಗಳೊಂದಿಗೆ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪೂರ ಹಾಗೂ ಬಾಗಕೋಟ ಈ ಮೂರು ಜಿಲ್ಲೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 368ಮಹಾವಿದ್ಯಾಲಯಗಳು ಸಂಯೋಜಿತಗೊಂಡದ್ದು 275 ಕಾಲೇಜುಗಳಲ್ಲಿ ಒಟ್ಟು 275 ಎನ್.ಎಸ್.ಎಸ್. ಘಟಕಗಳಿವೆ. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ 25000 ಎನ್.ಎಸ್.ಎಸ್. ಸ್ವಯಂಸೇವಕರನ್ನು ಒಳಗೊಂಡಿದೆ. ಶೈಕ್ಷಣಿಕ ವಿಸ್ತರಣೆಯ ಒಂದು ಭಾಗವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಯುವ ಪೀಳಿಗೆಗೆ ಪ್ರೇರಕವಾಗಬಲ್ಲ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರಯವ ಎನ್.ಎಸ್.ಎಸ್. ಕೋಶಕ್ಕೆ ಸನ್ಮಾನ್ಯ ಕುಲಪತಿಗಳವರ, ಕುಲಸಚಿವರ ಸಂಪೂರ್ಣ ಬೆಂಬಲ ದೊರೆಯುತ್ತಿದೆ.

“ನನಗಲ್ಲ ನಿಮಗೆ” ಎಂಬುದು ರಾಷ್ಟ್ರೀಯ ಯೋಜನೆಯ ಧ್ಯೇಯ ವಾಕ್ಯವಾಗಿದೆ. ಇದರ ಸಾರಾಂಶ ನಾನು ನನಗಾಗಿ ಮಾತ್ರವಲ್ಲ. ನಿಮ್ಮೆಲ್ಲರಿಗಾಗಿಯೂ ಎಂಬುದಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವ್ಯಕ್ತಿಯು ಸಮಾಜದ ಅಭ್ಯದಯದ ಮೂಲಕ ತನ್ನ ಅಭ್ಯದಯವನ್ನು ಕಾಣುತ್ತಾನೆ.

ದೈನಂದಿನ ಮತ್ತು ವಿಶೇಷ ಶಿಬಿರಗಳಸೇವಾ ಕಾರ್ಯಗಳು:

  • ಪರಿಸರ ಅಭಿವೃದ್ಧಿ ಹಾಗೂ ಸದುಪಯೋಗ.
  • ಅಂತರ್ಜಲ ಸಂರಕ್ಷಣೆ, ಮಳೆನೀರಿನ ಸಂಗ್ರಹ ಹಾಗೂ ಸದುಪಯೋಗ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು.
  • ಸಮಗ್ರ ಅಭಿವೃಧಿಗಾಗಿ ಗ್ರಾಮಗಳನ್ನು ಅಥವಾ ಕೊಳಚೆ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವುದು.
  • ಸಾಕ್ಷರತೆ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವುದು.
  • ಸಾಕ್ಷರತಾ ಕೇಂದ್ರಗಳನ್ನು ನಡೆಸುವುದು.
  • ಪುಸ್ತಕ ನಿಧಿಗಳನ್ನು ಸ್ಥಾಪಿಸುವುದು
  • ರಕ್ತದ ಗುಂಪನ್ನು ಗುರುತಿಸುವುದು ಮತ್ತು ಇಚ್ಛೆಯಿಂದ ರಕ್ತದಾನ ಮಾಡುವುದು.
  • ಗಿಡಮರಗಳನ್ನು ಬೆಳೆಸುವುದು.
  • ಜನತಾ ಮನೆ, ಸಮುದಾಯ ಭವನ, ಶಾಲಾ ಕೊಠಡಿ ಇತ್ಯಾದಿಗಳ ನಿರ್ಮಾಣ ಮಾಡುವುದು.
  • ರಸ್ತೆ, ಆಟದ ಮೈದಾನ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡುವುದು.
  • ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ಬಗ್ಗೆ ಜಾಗೃತಿ ಮೂಡಿಸುವುದು.
  • ಪ್ರವಾಹ ಹಾಗೂ ಕ್ಷಾಮ ಮತ್ತಿತರ ಆಪತ್ಕಾಲದಲ್ಲಿ ಪರಿಹಾರ ಕಾರ್ಯಕ್ರಗಳನ್ನು ಕೈಗೊಳ್ಳುವುದು.
  • ಪ್ರಾಚ್ಯವಸ್ತು-ಸ್ಮಾರಕಗಳ ಸಂರಕ್ಷಣೆ ಮಾಡುವುದು.
  • ಕಲಿತ ತಾಂತ್ರಿಕ ಜ್ಷಾನವನ್ನು ತಾಂತ್ರಿಕ ಚಟುವಟಿಕೆಗಳಲ್ಲಿ ಬಳಸುವುದು.
  • ಗೃಹಬಳಕೆ ವಿದ್ಯುತ್ ಉಪಕರಣಗಳ ಮತ್ತು ವಾಹನಗಳ ಸ್ವಯ ರಿಪೇರಿ ಕಲಿಯುವುದು.
  • ಮಹಿಳೆಯರಿಗೆ ಟೈಲರಿಂಗ್, ಎಂಬ್ಯ್ರಾಯಿಡರಿ, ನಿಟ್ಟಿಂಗ್, ಸ್ಕ್ರೀನ್ ಪ್ರಿಂಟಿಂಗ್ , ಕಂಪ್ಯೂಟರ್ ಶಿಕ್ಷಣ ಮೊದಲಾದವುಗಳನ್ನು ಕಲಿಸಿವುದು.
ಗ್ರಾಮ/ ಕೊಳಚೆ ಪ್ರದೇಶಗಳ ದತ್ತು ಸ್ವೀಕಾರ:

ಈ ಯೋಜನೆಯಲ್ಲಿ ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕ ಪಂಚಾಯತ್, ಗ್ರಾಮಪಂಚಾಯತ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.

ಪ್ರಮಾಣ ಪತ್ರ: ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ 240 ಗಂಟೆಗಳ ಕಾಲ ದೈನಂದಿನ ಸೇವಾ ಚಟುವಟಿಕೆಗಳ ಮತ್ತು ಕನಿಷ್ಠ ಒಂದು ವಿಶೇಷ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ವಯಂ ಸೇವಕರಿಗೆ ವಿಶ್ವವಿದ್ಯಾಲಯದ/ನಿರ್ದೇಶನಾಲಯದ ರಾಷ್ಟ್ರೀಯ ಸೇವಾ ಯೋಜನೆ ಪ್ರಮಾಣ ಪತ್ರ ನೀಡಲಾಗುವುದು.

ರಾಷ್ಟ್ರೀಯ ಸೇವಾ ಯೋಜನೆಯ ಲಾಂಭನ

ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಒರಿಸ್ಸಾ ರಾಜ್ಯದ ಕೋನಾರ್ಕ್‍ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಒಂದು ಚಕ್ರ. ಈ ಚಕ್ರ ಯುವಶಕ್ತಿಯ ನಿರಂತರ ಸಂಕೇತ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in